ವಿಜಯಪುರ: ಮಹಿಳೆಯರು ತಮ್ಮ ದಿನನಿತ್ಯದ ಜೀವನದಲ್ಲಿ ಪೌಷ್ಟಿಕ ಆಹಾರ ಮತ್ತು ಕಬ್ಬಿಣಾಂಶಯುಕ್ತ ಆಹಾರ ಸೇವಿಸಿ ಆರೋಗ್ಯಯುತ ಸಮಾಜವನ್ನು ಕಟ್ಟಬೇಕು ಎಂದು ವಿಜಯಪುರಿನ ಆಲ್- ಅಮೀನ್ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ವಿದ್ಯಾ ಥೊಬ್ಬಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಪ್ರಾಣಿಶಾಸ್ತ್ರ ವಿಭಾಗ ಮತ್ತು ಆಹಾರ ಸಂಸ್ಕರಣೆ, ಪೋಷಣೆ ಮತ್ತು ಅಹಲ್ಯಾಬಾಯಿ ಮಹಿಳಾ ಅಧ್ಯಯನ ಪೀಠದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಸ್ವಾಸ್ತ ಮಹಿಳೆಯರ ಆರೋಗ್ಯದ ಮೇಲೆ ನಿಂತಿದ್ದು, ಅದನ್ನು ಕಾಪಡಿಕೊಂಡು ಖುತುಚಕ್ರ, ಪಿಸಿಒಡಿ/ಪಿಸಿಒಎಸ್ ಅಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದರ ಜೊತೆಗೆ ಆರೋಗ್ಯಯುತ ಜೀವವನ್ನು ನಡೆಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಇನ್ನೋರ್ವ ಅತಿಥಿ ಪ್ರೊ. ಹೇಮಲತಾ ಎಚ್.ಎಮ್ ಮಾತನಾಡಿ, ಮಹಿಳೆಯರಿಗೆ ಆರೋಗ್ಯ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟು, ಮಹಿಳೆಯರು ಶಿಕ್ಷಣದಿಂದಲೇ ಸುಶಿಕ್ಷಿತ ರಾಷ್ಟ್ರವನ್ನು ಕಟ್ಟಬಹುದು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಿ. ಎಸ್. ನಾವಿ ಅಧ್ಯಕ್ಷತೆಯನ್ನು ವಹಿಸಿದರು. ಡಾ. ಸವಿತಾ ಹುಲಿಮನಿ, ಡಾ. ನಟರಾಜ್ ಅ. ದುರ್ಗಣ್ಣವರ, ಡಾ. ವೀಣಾ ಅಮ್ಮಣ್ಣ ಮತ್ತು ಎಲ್ಲಾ ವಿಭಾಗದ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು, ಸಂಶೋಧನೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಾಣಿಶಾಸ್ತ್ರ ವಿಭಾಗ ಮತ್ತು ಆಹಾರ ಸಂಸ್ಕರಣೆ ಹಾಗೂ ಪೋಷಣೆ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಮೇಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗೂಬಾಯಿ ಅಬ್ಬಿಹಾಳ ಕಾರ್ಯಕ್ರಮವನ್ನು ವಂದಿಸಿದರು.