ವಿಜಯಪುರ: ನಗರದ ಜೋರಾಪುರ ಪೇಠೆಯ ಮಲ್ಲಯ್ಯನ ಗುಡಿ( ಮಲ್ಲಯ್ಯನ ಓಣಿ)ಯ ಶ್ರೀ ಮಲ್ಲಿಕಾರ್ಜುನ ಪಾದಾಯಾತ್ರಾ ಕಮೀಟಿ ವತಿಯಿಂದ ಮಾರ್ಚ್ 7 ರಿಂದ ಶ್ರೀಶೈಲ ಪಾದಯಾತ್ರೆ ಆರಂಭವಾಗಲಿದೆ.
ಸತತ 29 ನೇ ವರ್ಷಗಳಿಂದ ಈ ಸಮಿತಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಯ್ಯನ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. 15 ದಿನಗಳ ಈ ಪಾದಯಾತ್ರೆ ಹಿಟ್ನಳ್ಳಿ, ಮನಗೂಳಿ, ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕೊಣ್ಣೂರ ಕ್ರಾಸ್, ತಾಳಿಕೋಟಿ, ಬಂಡೆಪ್ಪನ ಸಾಲವಾಡಗಿ, ಹುಣಸಗಿ, ದೇವತಕಲ್ಲ, ಶೆಳ್ಳಗಿ, ಸೂಗೂರ, ಅಂಜುಳ ಹೊಳಿ, ಮಸರಕಲ್ಲ, ಗಬ್ಬೂರ, ಕಲಮಲಾ, ರಾಯಚೂರ, ಭಾವಿದೊಡ್ಡಿ, ಘಟ್ಟಿ, ಆಯಿಜ, ಶಾಂತಿನಗರ, ಆಲಂಪೂರ ಕ್ರಾಸ್, ಜೋಗಳಾಂಬ ದೇವಸ್ಥಾನ, ನಂದಿಕೊಟಕೂರ, ಜಾಪುರಡಬಂಗ್ಲಾ, ಪಾಲಂಪಾಲ, ಕೃಷ್ಣಾಪುರ ಮಾರ್ಗವಾಗಿ ಮಾ. 21 ರಂದು ತೆಲಂಗಾಣ ರಾಜ್ಯದ ಶ್ರೀಶೈಲಂ ಗೆ ತಲುಪಲಿದೆ.
ಮಾರ್ಗಮಧ್ಯೆ ನಾನಾ ದಾನಿಗಳು ಪಾದಯಾತ್ರಿಗಳಿಗಾಗಿ ಅಲ್ಪೋಪಹಾರ, ಊಟ, ವಸತಿ ಮತ್ತು ಔಷಧೋಪಚಾರ ವ್ಯವಸ್ಥೆ ಮಾಡಿರುತ್ತಾರೆ. ಆಸಕ್ತ ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ರವೀಂದ್ರ ಸಿದ್ದಯ್ಯ ಕರ್ಪೂರಮಠ-8884447791, ಶರಣಬಸಪ್ಪ. ಚ. ಚನ್ನಿಗಾವಿಶೆಟ್ರು-8618406986 ಸಂಪರ್ಕಿಸಲು ಕೋರಲಾಗಿದೆ ಎಂದು ಸಮಿತಿಯ ಮುಖಂಡ ರವೀಂದ್ರ ಕರ್ಪೂರಮಠ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.