ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಸ್. ಡಿ. ಇ.ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಎಐಸಿಟಿಇ ಪ್ರಾಯೋಜಿತ ಅಟಲ್ ಫ್ಯಾಕಲ್ಟಿ ಡೆವಲ್ಪಮೆಂಟ್ ಪ್ರೊಗ್ರಾಂ 15 ದಿನದ ಕಾರ್ಯಕ್ರಮ ಮಾ. ಫೆ. 20 ರಿಂದ ಮಾ. 3ರ ವರೆಗೆ ನಡೆಯಿತು.
ಸಸ್ಟೇನ್‍ಬಲ್ ಕನಸ್ಟ್ರಕ್ಸನ್ ಇಸ್ಸಿವ್ಸ್ ಛಾಲೆಂಜಸ್ ಮತ್ತು ಟೆಕ್ನಾಲಿಜಿಕಲ್ ಡೆವಲಪಮೆಂಟ್ ಡಿಕಾರ್ಬೊನೇಜಷನ್ ವಿಷಯದ ಮೇಲೆ ನಡೆದ ಈ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞರು, ಕೈಗಾರಿಕೆ ತಜ್ಞರು ಮತ್ತು ನಾನಾ ವಲಯದ ವೃತ್ತಿಪರರು, ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ವಿಜಯಪುರದ ಹಾಗೂ ಸುತ್ತಮುತ್ತಲಿನ ಪ್ರಾಧ್ಯಾಪಕರು, ಸಂಶೋಧನಾ ವಿದ್ಯರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಉಪಯೋಗ ಪಡೆದುಕೊಂಡಿದ್ದಾರೆ. ಸುಮಾರು 50 ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳು ಇದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸುಸ್ಥಿರ, ಹವಾಮಾನಕ್ಕೆ ಸ್ಪಂದಿಸುವ ಕಟ್ಟಡಗಳನ್ನು ಸ್ಥಾಪಿಸುವಲ್ಲಿ ಸಮಸ್ಯೆಗಳು, ಸವಾಲುಗಳು ಮತ್ತು ಸುಧಾರಿತ ತಾಂತ್ರಿಕ ಬೆಳವಣಿಗೆ ಮತ್ತು ಗ್ರೀನ್ ಬಿಲ್ಡಿಂಗ್ ಪರಿಕಲ್ಪನೆಗಳು ಮತ್ತು ಜಾಗೃತೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಕಾರ್ಯಕ್ರಮದ ಸಂಯೋಜಕ ಡಾ. ಅನುರಾಧ ಟಂಕಸಾಲಿ, ಡಾ. ಆಶೀಫ್ ಮೊಮಿನ್ ಹಾಗೂ ವಿಭಾಗದ ಮುಖ್ಯಸ್ಥರು ನವೀನ ದೇಸಾಯಿ ಈ ಕಾರ್ಯಕರ್ಮದಲ್ಲಿ ಪಾಲ್ಗೋಂಡಿದ್ದರು ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.