ಘೋಣಸಗಿ, ಅಳಗಿನಾಳ, ಕನಮಡಿ ಗ್ರಾಮಗಳಲ್ಲಿ ಎಂ. ಬಿ. ಪಾಟೀಲ ಬಿರುಸಿನ ಪ್ರವಾಸ- ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಕಾರ್ಡ್ ವಿತರಣೆ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಸರ್ವಾಂಗೀಣ ಮಾಡಿದ್ದೇನೆ. ಈ ಕೆಲಸಗಳನ್ನು ಜನರ ಮುಂದಿಟ್ಟುಕೊಂಡು ಜನಮತ ಕೇಳುತ್ತಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೊಣಸಗಿ, ಅಳಗಿನಾಳ ಮತ್ತು ಕನಮಡಿ, ಬಿಜ್ಜರಗಿ ಗ್ರಾಮಗಳಲ್ಲಿ ಬೂತ ಮಟ್ಟದಲ್ಲಿ ಮತದಾರರ ಬಿಜೆಪಿ ವೈಫಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ಎಲ್ಲರಿಗಿಂತ ಹೆಚ್ಚು ಅನುದಾನ‌ ತಂದು ಅಭಿವೃದ್ಧಿ ಮಾಡಿದ್ದೇನೆ. ಮನೆ ಮುರಿಯುವ ಕೆಲಸ ಮಾಡುವವರನ್ನು ದೂರವಿಡಿ. ಕೆಲಸ ಮಾಡುವವರನ್ನು ಬೆಂಬಲಿಸಿ ಪ್ರೋತ್ಸಾಹಿಸಿದರೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಹೊಸ ಹುಮ್ಮಸ್ಸು ಸಿಗುತ್ತದೆ ಎಂದು ಹೇಳಿದರು.

ಘೊಣಸಗಿ ಮತ್ತು ಅಳಗಿನಾಳ ಗ್ರಾಮಗಳಲ್ಲಿ ಗ್ರಾಮಸ್ಥರಿಂದ ಅಹವಾಲು ಆಲಿಸಿದ ಅವರು, ಈ ಭಾಗಕ್ಕೆ ನೀರು ಸಮರ್ಪಕವಾಗಿ ಬರಲು ಅಡ್ಡಿಯಾಗಿರುವ ಸಮಸ್ಯೆಗಳನ್ನು ಬಗೆಹರಿಸುತ್ತನೆ. ಈ ಭಾಗಕ್ಕೆ ನೀರು ಹರಿಸಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು ಮತದಾರರೂ ಕೂಡ ಕೆಲಸ ಮಾಡುವವರನ್ನು ಬೆಂಬಲಿಸಿ ಆಶೀರ್ವದಿಸಬೇಕು. ಈ ಮೂಲಕ ತಮ್ಮ ಗ್ರಾಮಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ನನ್ನನ್ನು ಕಳೆದ ಬಾರಿಗಿಂತ ಅತೀ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು. ವಿರೋಧಿಗಳು ಏನೇ ಮಾಡಿದರೂ ಅದು ಯಶಸ್ವಿಯಾಗುವುದಿಲ್ಲ. ತಮ್ಮೆಲ್ಲರ ಹಾರೈಕೆಗಳಿಂದ ಈ ಬಾರಿಯೂ ಭಾರಿ ಮತಗಳಿಂದ ಆಯ್ಕೆಯಾಗುತ್ತೇನೆ ಎಂದು ಅವರು ಹೇಳಿದರು.

ಘೋಣಸಗಿ ಗ್ರಾಮದಲ್ಲಿ ಎಂ. ಬಿ. ಪಾಟೀಲ ಬಿರುಸಿನ ಪ್ರವಾಸ ಕೈಗೊಂಡು ಬಿಜೆಪಿ ವೈಫಲ್ಯಗಳು, ಕಾಂಗ್ರೆಸ್ ಸಾಧನೆಗಳ ಬಗ್ಗೆ ಅರಿವು ಮೂಡಿಸಿದರು

ನಾ ಖಾವೂಂಗಾ ನಾ ಖಾನೆದೂಂಗಾ. ಅಚ್ಛೆದಿನ್ ಲಾವುಂಗಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಳ, ರೈತರ, ಕೂಲಿ ಕಾರ್ಮಿಕರ ವಿರೋಧಿ ನೀತಿಗಳು, ಉದ್ಯಮಿಗಳ ಸಾಲಮನ್ನಾ ಪ್ರಧಾನಿಯವರು ಜನತೆಗೆ ನೀಡಿರುವ ಅಚ್ಚೆ ದಿನಗಳಾಗಿವೆ. ಉತ್ತುಂಗಕ್ಕೇರಿರುವ ಭ್ರಷ್ಟಾಚಾರಕ್ಕೆ ಮಾಡಾಳು ವಿರುಪಾಕ್ಷಪ್ಪ ಪ್ರಕರಣ ತಾಜಾ ಉದಾಹರಣೆಯಾಗಿದೆ. ಶೇ.‌ 40 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಇತ್ತೀಚಿನ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕ ಲಂಚದ ಹಣದ ಪ್ರಮಾಣ ಗಮನಿಸಿದರೆ ಭ್ರಷ್ಟಾಚಾರ ಶೇ. 60ಕ್ಕೆ ಏರಿದೆ ಎಂಬುದರಲ್ಲಿ ಸಂಶಯವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಭೀಮು ನಾಟೀಕಾರ, ಬಸನಿಂಗ ನಿಡೋಣಿ, ಮೈಬೂಬ್ ಜತ್ತಿ, ಯಾಕೂಬ್ ಜತ್ತಿ, ರಾಮಣ್ಣ, ಮೆಂಡೆಗಾರ, ಇನಾಂದಾರ, ಸಿದ್ದು ಮುತ್ಯಾ, ಸಿಂದಗಿ, ಶ್ರೀಮಂತ ಬಂಡಗಾರ, ಕೃಷ್ಣಾ ಮಾನವರ, ವಿನೋದ ಭೋಸ್ಲೆ, ರಾವಸಾಬ ಪಾಟೀಲ, ಬಾವಸಾಬ ಭೋಸ್ಲೆ, ಚಂದು ಕದಂ, ಸದಾಶಿವ ಹೊಸಮನಿ, ಸಂತೋಷ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.

ಕನಮಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಮಾತನಾಡಿದರು

ಕನಮಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಧಾನಿಗಳಾದ ಪಿ. ವಿ. ನರಸಿಂಹರಾವ, ಮನಮೋಹನ್ ಸಿಂಗ್ ದೇಶದ ಅರ್ಥ ವ್ಯವಸ್ಥೆಯನ್ನು ಸದೃಢ ಮಾಡಿದ್ದರು. ಆದರೆ, ಮೋದಿಯವರ ದುರಾಡಳಿತ, ಬೆಲೆಯೇರಿಕೆ ಪರಿಣಾಮ‌ ರೈತರು, ಯುವಕರ ಪರಿಸ್ಥಿತಿ ಹದಗೆಟ್ಟಿದೆ. ಪ್ರತಿವರ್ಷ ಎರಡು ಕೋಟಿ ಹೊಸ ಉದ್ಯೋಗಗಳು ಸೃಷ್ಡಿಯಾಗದೇ, ನಿರುದ್ಯೋಗ ಪ್ರಮಾಣ ಹೆಚ್ಚಿದೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆದರೆ, ಕೃಷಿ ಸಲಕರಣೆಗಳು, ಕೀಟನಾಶಕ ಔಷಧಗಳ ಬೆಲೆ ಗಗನಕ್ಕೇರಿದೆ. ಮತ್ತೋಂದೆಡೆ ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಿದೆ‌. ನಾನು ಈ ಭಾಗದಲ್ಲಿ ಕೈಗೊಂಡ ನೀರಾವರಿ ಸೌಲಭ್ಯಗಳಿಂದಾಗಿ ರೈತರ ಆದಾಯ ಹೆಚ್ಚಿದೆ. ಭೂಮಿಯ ಬೆಲೆ ಹತ್ತು ಪಟ್ಟು ಹೆಚ್ಚಾಗಿದೆ. ಪ್ರಧಾನಿ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಬಬಲೇಶ್ವರ ಕ್ಷೇತ್ರದಲ್ಲಿ ಮಾಡಿ ತೋರಿಸಿದ್ದೇನೆ. ಮುಂಬರುವ ದಿನಗಳಲ್ಲಿ ಭೂರಹಿತರಿಗೆ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಲು ಯೋಜನೆ ರೂಪಿಸಲಾಗಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಬಾಬುಗೌಡ ಬಿರಾದಾರ, ಶಿವಪುತ್ರ ಅವಟಿ, ಶಂಕರಗೌಡ ಬಿರಾದಾರ, ಯಾಕೂಬ್ ಜತ್ತಿ, ಎ. ಡಿ. ಮುಲ್ಲಾ, ಚಂದ್ರಶೇಖರ ಬಸರಗೊಂಡನವರ, ಆರ್. ಕೆ. ಜವನರ, ಗಾಂಧಿಬಾಯಿ ಗಡಲೊಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌