ವಿಜಯಪುರ: ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ವಿಶಿಷ್ಟ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯವಶ್ಯಕವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ನಗರದ ಐತಿಹಾಸಿಕ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ಆಯೋಜಿಸಲಾಗಿದ್ದ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಎಂಬ ಶೀರ್ಷಿಕೆಯಡಿ ತಳಸಮುದಾಯದ ನಶಿಸುತ್ತಿರುವ ವಿಶಿಷ್ಟ ಕಲಾ ಪರಂಪರೆಗೆ ಕಾಯಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಸಾಹಿತ್ಯ, ಚೌಡಕಿ ಹಾಡು, ಸೋಬಾನ ಹಾಡು, ಜಾನಪದ ಹಾಡುಗಳು ಇತ್ತೀಚಿನ ದಿನಗಳಲ್ಲಿ ಈ ಕಲೆಗಳು ಮಾಯವಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಮೊದಲಿನ ದಿನಗಳಲ್ಲಿ ರಾಶಿ ಮಾಡುವ ಸಂದರ್ಭದಲ್ಲಿ ಹಂತಿ ಪದಗಳನ್ನು ರಾತ್ರಿಯಿಡಿ ಮಧುರವಾಗಿ ಹಾಡುವುದರ ಮೂಲಕ ತನ್ನ ದಣಿವನ್ನು ಆ ಹಾಡಿನ ಮೂಲಕ ನೀಗಿಸಿಕೊಳ್ಳುತ್ತಿದ್ದ. ಪ್ರಸ್ತುತ ದಿನಗಳಲ್ಲಿ ಯಂತ್ರಗಳಿಂದ ರಾಶಿ ಮಾಡುವ ಈ ಕಾಲದಲ್ಲಿ, ವಿಶಿಷ್ಟ ಹಾಗೂ ಶ್ರೇಷ್ಠವಾದ ನಮ್ಮ ಪಾರಂಪರಿಕ ಈ ಕಲೆಯ ಗತವೈಭವವನ್ನು ಮರುಕಳಿಸುವ ಅವಶ್ಯಕತೆ ಇದೆ. ಯಾವುದೇ ಲಿಖಿತ, ಪುಸ್ತಕವಲ್ಲದೇ, ತಮ್ಮ ಜೀವನಾನುಭವದ ಮಾತುಗಳನ್ನು ಹಾಡಿನ ವ್ಯಕ್ತಗೊಳಿಸುವ ವಿಶಿಷ್ಟವಾದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ನಮ್ಮ ದೇಶ ವಿಶಿಷ್ಟತೆಯಲ್ಲಿ ವೈವಿಧ್ಯತೆಯನ್ನು ಮೆರೆದಿದೆ. ಭಾಷೆ, ಉಡುಗೆ, ತೊಡುಗೆ, ಆಚಾರ-ವಿಚಾರ ಭಿನ್ನವಾಗಿದ್ದರೂ ಆಯಾ ಪ್ರದೇಶಕ್ಕನುಗುಣವಾಗಿ ತನ್ನ ಸಾಂಸ್ಕøತಿಕ ಸೊಗಡನ್ನು ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿದೆ. ಇಂತಹ ಸಂಪದ್ಭರಿತವಾದ ಸಾಂಸ್ಕøತಿಕ ಜಾನಪದ ಕಲೆಗಳನ್ನು ಉಳಿಸುವ ಗುರುತರ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ. ಆ ನಿಟ್ಟಿನಲ್ಲಿ ಈ ವಿಶಿಷ್ಟವಾದ ಮತ್ತು ವೈಶಿಷ್ಟವಾದ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿ, ಕಲೆಯನ್ನು ಸಂರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಆಧುನಿಕ ಮತ್ತು ಪಾಶ್ಚಿಮಾತ್ಯ ಪ್ರಭಾವದಿಂದ ನಶಿಸುತ್ತಿರುವ ಪಾರಂಪರಿಕ ಕಲೆಗಳನ್ನು ಖುದ್ದಾಗಿ ಕಲಿತು, ಹಾಡುತ್ತಿರುವ ಕಲಾಕಾರರು ಸಮಾರಂಭದಲ್ಲಿ ಪ್ರಸ್ತುತಪಡಿಸುತ್ತಿರುವುದರಿಂದ ಸಮಾರಂಭ ಶೋಭೆ ಹೆಚ್ಚಿಸಿದೆ. ಸಾಂಸ್ಕøತಿಕ ಬೇರುಗಳು ಗಟ್ಟಿಯಾಗಿರಬೇಕು. ಸುಗ್ಗಿ ಹುಗ್ಗಿ, ಚಿಗುರು, ಮುಂತಾದ ಸಾಂಸ್ಕøತಿಕ ಕಲೆಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಕೊಟಿಕಂಠ ಗಾಯನ ಕಾರ್ಯಕ್ರಮ ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದೆ. ಈ ಮೂಲ ಸಂಸ್ಕøತಿಕ ನಶಿಸುತ್ತಿರುವ ಕಲೆಗಳನ್ನು ಮುನ್ನಲೆಗೆ ತರಬೇಕು. ಜಿಲ್ಲೆಯ ಮನೆ-ಮನದಲ್ಲಿ ಸಾಂಸ್ಕøತಿಕವಾಗಿ ಜನಪದರು ತೊಡಗಿಸಿಕೊಂಡಿದ್ದಾರೆ ಎಂದು ಜಿಲ್ಲೆಯ ಸಾಂಸ್ಕøತಿಕ ವೈಭವನ್ನು ಸಾರಿದರು.
ಇಂದು ಪ್ರಸ್ತುತವಾಗುವ ಐದು ಕಲಾ ಪ್ರಕಾರಗಳಲ್ಲಿ ಅತ್ಯುತ್ತಮ ಕಲಾ ಪ್ರಕಾರಗಳನ್ನು ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ಮೂಲ ಸಂಸ್ಕøತಿ-ಕನ್ನಡ ಸಂಸ್ಕøತಿ ಯೋಜನೆ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಅವರು ಮಾತನಾಡಿದರು.
ಶ್ರೀಮತಿ ಮಹಾದೇವಿ ವಾಲಿಕಾರ ಅವರ ಮಾರ್ಗದರ್ಶನದ ಚೌಡಕಿ ಪದಗಳು, ಮಲ್ಲಪ್ಪ ಯಲ್ಲಪ್ಪ ಕಾಂಬಳೆ ಮಾರ್ಗದರ್ಶನದ ಕೊಂಬು ಕಹಳೆ, ಶ್ರೀಶೈಲ ಚೆನ್ನಪ್ಪ ದೊಡಮನಿ ಮಾರ್ಗದರ್ಶನದ ಹಂತಿಪದಗಳು, ರಾವುತಪ್ಪ ನಾಟಿಕಾರ ಮಾರ್ಗದರ್ಶನ ಕುದುರೆ ಕುಣಿತ ಮತ್ತು ನವೀಲು ನೃತ್ಯ ಹಾಗೂ ಗಂಗಾಧರ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಕರಡಿ ಮಜಲು, ಹಾಗೂ ವಿವಿಧ ಜಾನಪದ ಗೀತೆಗಳು, ಲಂಬಾಣಿ ನೃತ್ಯ, ಜಾನಪದ ಸಮೂಹ ನೃತ್ಯ, ವಿವಿಧ ಕಲೆಗಳನ್ನು ಪ್ರಸ್ತುತಪಡಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ, ಮೂಲ ಸಂಸ್ಕøತಿ-ಕನ್ನಡ ಸಂಸ್ಕøತಿ ಯೋಜನೆ ಜಿಲ್ಲಾ ಸಂಚಾಲಕ ಬಾಲಪ್ಪ ಗೂಗಿಹಾಳ,ಮಲ್ಲಿಕಾರ್ಜುನ ದೇವರಮನಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.