ಬಸವ ನಾಡಿನಲ್ಲಿ ಜಲಕ್ರಾಂತಿ ಮಾಡಿದ್ದೇವೆ- ಇನ್ಮುಂದೆ ಶ್ವೇತಕ್ರಾಂತಿ ಮಾಡುತ್ತೇವೆ- ಎಂ. ಬಿ. ಪಾಟೀಲ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಜಲಕ್ರಾಂತಿ ಮಾಡಲಾಗಿದ್ದು, ಇನ್ನು ಮುಂದೆ ಶ್ವೇತಕ್ರಾಂತಿ ಮಾಡಲಾಗುವುದು ಎಂದು ಕೆ. ಪಿ. ಸಿ. ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರಗಳಲ್ಲಿ ಬೂತ ಮಟ್ಟದಲ್ಲಿ ಮತದಾರರ ಬಿಜೆಪಿ ವೈಫಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ  ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ಎಲ್ಲರಿಗಿಂತ ಹೆಚ್ಚು ಅನುದಾನ‌ ತಂದು ಅಭಿವೃದ್ಧಿ ಮಾಡಿದ್ದೇನೆ.  ಮನೆ ಮುರಿಯುವ ಕೆಲಸ ಮಾಡುವವರನ್ನು ದೂರವಿಡಿ.  ಕೆಲಸ ಮಾಡುವವರನ್ನು ಬೆಂಬಲಿಸಿ ಪ್ರೋತ್ಸಾಹಿಸಿದರೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಹೊಸ ಹುಮ್ಮಸ್ಸು ಸಿಗುತ್ತದೆ ಎಂದು ಹೇಳಿದರು.

ನಾ ಖಾವೂಂಗಾ ನಾ ಖಾನೆದೂಂಗಾ.  ಅಚ್ಛೆದಿನ್ ಲಾವುಂಗಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.  ಆದರೆ, ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಳ, ರೈತರ, ಕೂಲಿ ಕಾರ್ಮಿಕರ ವಿರೋಧಿ ನೀತಿಗಳು, ಉದ್ಯಮಿಗಳ ಸಾಲಮನ್ನಾ ಪ್ರಧಾನಿಯವರು ಜನತೆಗೆ ನೀಡಿರುವ ಅಚ್ಚೆ ದಿನಗಳಾಗಿವೆ.  ಉತ್ತುಂಗಕ್ಕೇರಿರುವ ಭ್ರಷ್ಟಾಚಾರಕ್ಕೆ ಮಾಡಾಳು ವಿರುಪಾಕ್ಷಪ್ಪ ಪ್ರಕರಣ ತಾಜಾ ಉದಾಹರಣೆಯಾಗಿದೆ.  ಶೇ.‌ 40 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು.  ಇತ್ತೀಚಿನ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕ ಲಂಚದ ಹಣದ ಪ್ರಮಾಣ ಗಮನಿಸಿದರೆ ಭ್ರಷ್ಟಾಚಾರ ಶೇ. 60ಕ್ಕೆ ಏರಿದೆ ಎಂಬುದರಲ್ಲಿ ಸಂಶಯವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜ್ಜರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಮಾತನಾಡಿದರುಬಿಜ್ಜರಗಿ ಕಾರ್ಯಕ್ರಮ

ಬಿಜ್ಜರಗಿಯಲ್ಲಿ ಮಾತನಾಡಿದ ಅವರು, ಬಿಜ್ಜರಗಿ ಗ್ರಾಮ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ತವರು ಗ್ರಾಮ.  ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ನನಗೆ ವಹಿಸಲಾದ ಜಲಸಂಪನ್ಮೂಲ ಇಲಾಖೆಯ ಸಚಿವನಾಗಿ ಒಂದು ದಿನವೂ ವಿರಮಿಸದೇ ಈ ಭಾಗದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ.  ಈ ಹಿನ್ನೆಲೆಯಲ್ಲಿ ಅವರು ನನ್ನನ್ನು ಜಲನಾಯಕ ಎಂದು ನೀಡಿರುವ ಬಿರುದು ನನಗೆ ನೋಬೆಲ್ ಗಿಂತಲೂ ದೊಡ್ಡ ಪ್ರಶಸ್ತಿ ನೀಡಿದಂತಾಗಿದೆ.   ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕಳೆದ ಬಾರಿ ಫಸ್ಟ್ ಕ್ಲಾಸ್ ನಲ್ಲಿ ಪಾಸು ಮಾಡಿದ್ದೀರಿ ಈ ಬಾರಿ ರ್ಯಾಂಕ್ ನೀಡಿ ಬಾಸು ಮಾಡಬೇಕು

ಇಲ್ಲಿ ಡೈರಿ ಆರಂಭಿಸುವವ ಮೂಲಕ ಕೆಎಂಎಫ್, ಅಮೂಲ, ವಾರಣಾ ಮಾದರಿಯಲ್ಲಿ ದೊಡ್ಡ ಮಟ್ಟದಲ್ಲಿ ಶ್ವೇತಕ್ರಾಂತಿ ಮಾಡುವ ಯೋಜನೆ ರೂಪಿಸಿದ್ದೇವೆ.  ಈ ಡೈರಿಗೆ ರೈತರೇ ಮಾಲಿಕರು ಎಂದು ಹೇಳಿದ ಅವರು, ಕಳೆದ ಬಾರಿ ತಾವೆಲ್ಲರೂ ನನ್ನನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಫಸ್ಟ್ ಕ್ಲಾಸ್ ನಲ್ಲಿ ಪಾಸು ಮಾಡಿದ್ದೀರಿ.  ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ರ್ಯಾಂಕ್ ನೀಡಿ ಪಾಸು ಮಾಡಬೇಕು ಎಂದು ಮನವಿ ಮಾಡಿದರು.

ಈ ಭಾಗದಲ್ಲಿ ಬಾಕಿ ಉಳಿದಿರುವ ಹೊಲಗಾಲುವೆ ಸೇರಿದಂತೆ ಇತರ ಕಾಮಗಾರು ರಾಜ್ಯ ಸರಕಾರ ಗುತ್ತಿಗೆದಾರರಿಗೆ ಹಣ ನೀಡದ ಕಾರಣ ನನೆಗುದಿಗೆ ಬಿದ್ದಿವೆ.  ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರು ಕೆಲಸ ಬಿಟ್ಟು ಹೋಗಿದ್ದಾರೆ.  ಆದರೆ, ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ನನ್ನ ಜವಾಬ್ದಾರಿ ಎಂದು ಅವರು ಸ್ಪಷ್ಟಪಡಿಸಿದರು.

ಬಾಬಾನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಕಾರ್ಡ್ ವಿತರಿಸಿದರು

ದೇಶದಲ್ಲಿಯೇ ಹೋಬಳಿಯೊಂದರ ನೀರಾವರಿಗಾಗಿ ಅತೀ ಹೆಚ್ಚು ಹಣ ಖರ್ಚು ಮಾಡಿದ್ದೇವೆ

ನಂತರ ಬಾಬಾನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೂ ಮಾಡಲು ಅಸಾಧ್ಯವಾದ ಕೆಲಸವನ್ನು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ನಾನು ಮಾಡಿದ್ದೇವೆ. 2013 ರಿಂದ 2018ರ ಅವಧಿಯಲ್ಲಿ ಇಡೀ ದೇಶದಲ್ಲಿಯೇ ಹೋಬಳಿಯೊಂದಲ್ಲಿ ಅತೀ ಹೆಚ್ಚು ಕಾಮಗಾರಿ ಮಾಡಿದ್ದೇವೆ.  ತಿಕೋಟಾ ಹೋಬಳಿಯಲ್ಲಿ ರೂ. 3600 ಕೋ. ಖರ್ಚು ಮಾಡಿ ನೀರಾವರಿ ಸೌಲಭ್ಯ ಒದಗಿಸಿದ್ದೇವೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಇಲ್ಲಿ ಭೂಮಿಯ ಬೆಲೆ ಈಗ ಸುಮಾರು ಎಂಟರಿಂದ ಹತ್ತು ಹೆಟ್ಟು ಹೆಚ್ಚಾಗಿದೆ.  ಬಿಜೆಪಿ ದುರಾಡಳಿತದಿಂದಾಗಿ ಈಗ ರೈತರ ಕೃಷಿ ನಿರ್ವಹಣೆ ವೆಚ್ಚ ಹೆಚ್ಚಾಗಿದೆ.  ಲಾಭ ಕಡಿಮೆಯಾಗಿದೆ.  ಈ ಹಿನ್ನೆಲೆಯಲ್ಲಿ ರೈತರ ಹಿತ ಕಾಪಾಡಲು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಭಾಗದಲ್ಲಿ ಎಫ್ ಐ ಸಿ ಕಾಮಗಾರಿಗಳ ಪೂರ್ಣವಾಗಲೇಬೇಕು.  ಅವುಗಳನ್ನು ರದ್ದುಪಡಿಸಲು ಬರಲ್ಲ ಎಂದು ಸ್ಪಷ್ಚಪಡಿಸಿದರು.

ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಭೀಮು ನಾಟೀಕಾರ, ಬಸನಿಂಗ ನಿಡೋಣಿ, ಮೈಬೂಬ್ ಜತ್ತಿ, ಯಾಕೂಬ್ ಜತ್ತಿ, ರಾಮಣ್ಣ, ಮೆಂಡೆಗಾರ, ಇನಾಂದಾರ, ಸಿದ್ದು ಮುತ್ಯಾ, ಸಿಂದಗಿ, ಶ್ರೀಮಂತ ಬಂಡಗಾರ, ಕೃಷ್ಣಾ ಮಾನವರ, ವಿನೋದ ಭೋಸ್ಲೆ, ರಾವಸಾಬ ಪಾಟೀಲ, ಬಾವಸಾಬ ಭೋಸ್ಲೆ, ಚಂದು ಕದಂ, ಸದಾಶಿವ ಹೊಸಮನಿ, ಸಂತೋಷ ಶಿಂಧೆ, ಬಾಬುಗೌಡ ಬಿರಾದಾರ, ಶಿವಪುತ್ರ ಅವಟಿ, ಶಂಕರಗೌಡ ಬಿರಾದಾರ, ಯಾಕೂಬ್ ಜತ್ತಿ, ಎ. ಡಿ. ಮುಲ್ಲಾ, ಚಂದ್ರಶೇಖರ ಬಸರಗೊಂಡನವರ, ಆರ್. ಕೆ. ಜವನರ, ಗಾಂಧಿಬಾಯಿ ಗಡಲೊಟಿ, ಜಿ. ಎಂ. ಪಾಟೀಲ, ರವಿ ಬಿರಾದಾರ, ಎಂ. ಎಸ್. ಲೋಣಿ, ಡಾ. ರಮೇಶ ಬಿರಾದಾರ, ಎಂ. ಜಿ. ಗುಣಕಿ, ಸಿದ್ದು ಗೌಡನವರ, ಎಚ್. ಜಿ. ಪಾಟೀಲ, ಎಸ್. ಆರ್. ಜಮಖಂಡಿ, ಸುಭಾಷಗೌಡ ಪಾಟೀಲ, ಎ. ಐ. ಲೋಣಿ, ಬಿ. ಸಿ. ಮಸಳಿ, ರಾಮನಿಂಗ ಬಿರಾದಾರ, ಸೋಮನಿಂಗ ಬಿರಾದಾರ, ಆರ್. ಎಂ. ಮಸಳಿ, ಎಸ್. ಎಸ್. ಮಸಳಿ, ಆರ್. ಪಿ. ಮಸಳಿ, ಮಧುಗೊಂಡ ಬಿರಾದಾರ, ಈರನಗೌಡ ರುದ್ರಗೌಡರ, ಪಾರೀಸ ಆಯತವಾಡ, ಶಿವಾನಂದ ಹೊನವಾಡ, ಸಿದಗೊಂಡ ರುದ್ರಗೌಡರ, ಅಶೋಕ ಬಿರಾದಾರ, ಅಶೋಕ ಹಟ್ಟಿ, ಐಗೊಂಡ ರುದ್ರಗೌಡರ, ಮುರಗೆಪ್ಪ ಅಕ್ಕಿ, ರಾಮಗೊಂಡ ಬಿರಾದಾರ, ಯಲ್ಲಪ್ಪ ಹೊನಕಟ್ಟಿ, ಜೋತೇಂದ್ರ ಆಯತವಾಡ, ಸಂತೋಷ ಹೊನವಾಡ, ಅಶೋಕ ರುದ್ರಗೌಡರ, ಕಾಶೊರಾಯ ಡೆಂಗನವರ, ಅಮೋಘಿ ಗೌಡನವರ ಮುಂತಾ್ದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌