ಕಾಮಗಾರಿಯೊಂದಿಗೆ ರಾಜಿಯಾಗದೇ ಗುಣಮಟ್ಟದ ಶೀತಲ ಗೃಹ ನಿರ್ಮಿಸಿ- ಎಂ. ಬಿ. ಪಾಟೀಲ

ವಿಜಯಪುರ: ಕಾಮಗಾರಿಯಲ್ಲಿ ಯಾವುದೇ ರೀತಿ ರಾಜಿಯಾಗದೇ ಗುಣಮಟ್ಟದ ಶೀತಲ ಗೃಹ(ಕೋಲ್ಡ್ ಸ್ಟೋರೇಜ್) ನಿರ್ಮಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ‌ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಬಳಿ 2021-22 ವರ್ಷದ ಆರ್. ಕೆ. ವಿ. ವೈ ಯೋಜನೆಯಡಿ ರೂ. 2.50 ಕೋ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಶೀತಲ‌ ಗೃಹ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಲೋಕೋಪಯೋಗಿ ಇಲಾಖೆ ಈ ಕಟ್ಟಡ ನಿರ್ಮಿಸುತ್ತಿದೆ.  ಈ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು.  ಹಾಪಕಾಮ್ಸ್ ನವರೂ ಕೂಡ ಅನುಭವಿ ಕಂಪನಿಗಳಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಖರೀದಿಸಿ ಸುಸಜ್ಜಿತ ಶೀತಲ ಗೃಹ ನಿರ್ಮಿಸಬೇಕು ಎಂದು ಅವರು ಹೇಳಿದರು.

ಇದಕ್ಕೆ ಪೂರಕವಾಗಿ ಇಟ್ಟಂಗಿಹಾಳ ಬಳಿ ಫುಡ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಅದರ ನಿವೇಶನದ ಸುತ್ತ ಈಗಾಗಲೇ ಕಂಪೌಂಡ್ ನಿರ್ಮಿಸಲಾಗಿದೆ.  ನೂತನ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪುಡ್ ಪಾರ್ಕ್ ನಿರ್ನಾಣ ಕಾಮಗಾರಿಗೆ ಮತ್ತಷ್ಟು ವೇಗ ಸಿಗಲಿದೆ.  ಇದರಿಂದಾಗಿ ಈ ಭಾಗದಲ್ಲಿ ಮಹಿಳೆಯರು ಮತ್ತು ಯುವಕರು ಸ್ವಯಂ ಉದ್ಯೋಗ ಕೈಗೊಙಡು ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗಲಿದೆ. ವೈನ್ ಪಾರ್ಕ್ ಗೆ ಅನುಕೂಲವಾಗುವ ಕಾರ್ಯಗಳಿಗೂ ಇಲ್ಲಿ ನೆರವು ಸಿಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಾಪಕಾಮ್ಸ್ ಜಿಲ್ಲಾಧ್ಯಕ್ಷ ಅಧ್ಯಕ್ಷ ಗುರುಪಾದಪ್ಪಗೌಡ ಪಾಟೀಲ, ಉಪಾಧ್ಯಕ್ಷ ಎಚ್. ಜೆ. ಖಾಜಿ, ಅರಕೇರಿ ಗ್ರಾ. ಪಂ. ಅಧ್ಯಕ್ಷೆ ಅನಸೂಬಾಯಿ ಗೋವಿಂದ ರಾಠೋಡ, ಗ್ರಾ. ಪಂ. ಸದಸ್ಯ ಮಿಟ್ಟು ಬಾಳು ಚವ್ಹಾಣ, ಮುಖಂಡರಾದ ಅರ್ಜುನ ಹೀರು ರಾಠೋಡ, ರಾಜು ಹಿರೇಮಠ, ಎಸ್. ಪಿ. ಬಿರಾದಾರ, ಎನ್. ಎಸ್. ಬೆಳ್ಳುಬ್ಬಿ, ಡಿ. ಎಲ್. ಚವ್ಹಾಣ, ಭಾಗೀರಥಿ ತೇಲಿ, ಅಶೋಕ ದಳವಾಯಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮಯ್ಯ ಬರಗೀಮಠ, ಸಹಾಯಕ ನಿರ್ದೇಶಕಿ ಶಾಲಿನಿ‌ ತಳಕೇರಿ,  ಲೋಕೋಪಯೋಗಿ ಇಲಾಖೆ ಇಇ ಸಿ. ಬಿ. ಚಿಕ್ಕಲಗಿ, ಎಇಇ ರಾಜು ಮುಜುಂದಾರ, ಗಾಪಕಾಮ್ಸ್ ನ ಸಂಜು ನಾಯಕ, ಸಚಿನ ಉಟಗಿ, ರಾಜು ಹಿಪ್ಪರಗಿ, ಮುಖಂಡರಾದ ಸಿದ್ದು ಮದಭಾವಿ, ನಂದ ಕಿಶೋರ, ಹನುಮಂತ ಕವಟಗಿ, ರಾಮನಗೌಡ ಪಾಟೀಲ, ಬಸವರಾಜ ಅಡಹಳ್ಳಿ, ಅರಕೇರಿ ಗ್ರಾ. ಪಂ. ಸದಸ್ಯರು ಗ್ರಾಮದ ಹಿರಿಯರು, ಯುವಕರು, ದ್ರಾಕ್ಷಿ ಬೆಳೆಗಾರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌