ಮಾ. 9 ರಂದು ಬಿ. ಎಲ್. ಡಿ. ಇ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ವಿಶ್ವಮೂತ್ರ ಪಿಂಡ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಸೇರಿ ನಾನಾ ಕಾರ್ಯಕ್ರಮ

ವಿಜಯಪುರ: ವಿಶ್ವ ಮೂತ್ರಪಿಂಡ ದಿನಾಚರಣೆ ಅಂಗವಾಗಿ ಮಾರ್ಚ್ 9 ರಂದು ಗುರುವಾರ  ಶ್ರೀ ಬಿ.ಎಂ.ಪಾಟೀಲ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಜನಜಾಗೃತಿ ಜಾಥಾ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಕಾರ್ಯಾಗಾರ ನಡೆಯಲಿದೆ. ಆಸ್ಪತ್ರೆಯ ಮೂತ್ರಜನಕಾಂಗ ಶಸ್ತ್ರಚಿಕಿತ್ಸಾ ವಿಭಾಗ, ಮೂತ್ರಪಿಂಡ ಚಿಕಿತ್ಸಾ ವಿಭಾಗ ಹಾಗೂ ಶ್ರೀ ಬಿ.ಎಂ.ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆ.10ಗಂ. ರಿಂದ ಸಂ.4 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ಶೇ.50 ರಿಯಾಯಿತಿ ದರದಲ್ಲಿ ಹೊಟ್ಟೆ ಸ್ಕ್ಯಾನಿಂಗ್, ಎಕ್ಸ್‍ರೆ ಮತ್ತು ಸಿಬಿಸಿ ತಪಾಸಣೆ […]

ಮಹಿಳೆಯರಿಗೆ ಸೂಕ್ತ, ಉನ್ನತ ಶಿಕ್ಷಣ ದೊರೆತರೆ ಮುಖ್ಯ ವಾಹಿನಿಗೆ ಬರಲು ಸಾಧ್ಯ- ಪ್ರೊ. ಬಿ. ಕೆ. ತುಳಸಿಮಾಲ

ವಿಜಯಪುರ: ಮಹಿಳೆಯರಿಗೆ ಸರಿಯಾದ ಮತ್ತು ಉನ್ನತ ಶಿಕ್ಷಣ ಸಿಕ್ಕಾಗ ಮಾತ್ರ ಮಹಿಳೆ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ವಿವಿಯ ಕುಲಪತಿ ಪ್ರೊ. ಬಿ.ಕೆ ತುಳಸಿಮಾಲ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬದ ಎರಡನೆ ದಿನದಂದು ಮಹಿಳಾ ಸಮುದಾಯ ಸಬಲೀಕರಣಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಕುರಿತ […]

ಸಮಕಾಲಿನ ಹಿಂದಿ ಭಾಷೆಯ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ವಿಜಯಪುರ: ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಎಸ್. ಬಿ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಮುಂಬೈ ಹಿಂದಿ ಅಕೆಡೆಮಿ, ಮುಂಬೈ ಇವರ ಸಂಯುಕ್ತಾಶ್ರಯದಲ್ಲಿ ಸಮಕಾಲಿನ ಹಿಂದಿ ಬಾಷಾ ಔರ್ ಸಾಹಿತ್ಯ: ವಿವಿದ ಆಯಾಮ್ ಎಂಬ ವಿಷಯದ ಕುರಿತು ಮಾ. 10 ಮತ್ತು 11 ರಂದು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಬಿ. ಎಲ್. ಡಿ. ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ತಿಳಿಸಿದ್ದಾರೆ. ಎ. […]

ಇತಿಹಾಸದಲ್ಲಿ ಹೆಣ್ಣಿನ ನಿಜವಾದ ರೂಪವನ್ನು ಸರಿಯಾಗಿ ಬಿಂಬಿಸಿಲ್ಲ- ಡಾ. ಗೀತಾ ವಸಂತ ವಿಷಾಧ

ವಿಜಯಪುರ: ಇತಿಹಾಸ ಚರಿತ್ರೆಯನ್ನು ನೋಡಿದರೆ ಎಲ್ಲಿಯೂ ಸಹ ಹೆಣ್ಣಿನ ನಿಜವಾದ ರೂಪವನ್ನು ಬಿಂಬಿಸಿಲ್ಲ. ಅವಳನ್ನು ಬರೀ ಒಂದು ಭೋಗದ ವಸ್ತುವಾಗಿ ಬಿಂಬಿಸುತ್ತಾ ಬಂದಿದ್ದು ವಿಷಾದದ ಸಂಗತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ವಿಶ್ಲೇಷಿಸಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ “ಮಹಿಳಾ ಸಾಂಸ್ಕøತಿಕ ಹಬ್ಬದಲ್ಲಿ” […]

ಮಹಿಳೆಯರೂ ಇಂದಿಗೂ ತಮ್ಮ ಹಕ್ಕುಗಳನ್ನು ಪಡೆಯಲಾಗದೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ- ಪ್ರೊ. ಹರೀಶ ರಾಮಸ್ವಾಮಿ

ವಿಜಯಪುರ: ಮಹಿಳೆಯರು ಇಂದಿಗೂ ಸಹ ತಮ್ಮ ಹಕ್ಕುಗಳನ್ನು ಪಡೆಯಲಾಗದೆ ಹಲವಾರು ಕಾರಣಗಳಿಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ನಮ್ಮಲ್ಲಿರುವ ಸಾಮಾಜಿಕ ಕ್ರೂರತೆಯನ್ನು ಬಿಂಬಿಸುತ್ತದೆ. ಈಗಲಾದರೂ ಸಮಾಜ ಬದಲಾಗಬೇಕಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ತಿಳಿಸಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕತಿಕ ಹಬ್ಬ ಉದ್ಘಾಟಸಿ ಅವರು ಮಾತನಾಡಿದರು. ನಮ್ಮ ಸಮಾಜದಲ್ಲಿ […]

ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ನೂತನ ವಾಹನಗಳ ವಿತರಿಸಿದ ಸಚಿವ ಗೋವಿಂದ ಕಾರಜೋಳ

ವಿಜಯಪುರ: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಧೀನದಲ್ಲಿ ಬರುವ ವಲಯ, ವೃತ್ತ ವಿಭಾಗ ಹಾಗೂ ಉಪ ವಿಭಾಗ ಕಚೇರಿಗಳಿಗೆ ಮತ್ತು ಪುನರ್ವಸತಿ ಮತ್ತು ಪುನರ್‍ನಿಮಾಣ ಹಾಗೂ ಭೂಸ್ವಾಧೀನಾಧಿಕಾರಿಗಳ ಕಚೇರಿಗಳಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಅವರು ನೂತನ ಬೊಲೆರೋ ವಾಹನಗಳನ್ನು ವಿತರಿಸಿದರು. ನಗರದ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ನಡೆದ ವಾಹನ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಕಾರ್ಯಕ್ರಮಕ್ಕೆ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಾನಾ ಅಧಿಕಾರಿಗಳಿಗೆ ವಾಹನಗಳ ಕೀಯನ್ನು […]

ಪಂಚಮಸಾಲಿ ಮೀಸಲಾತಿ ಹೋರಾಟ: ಬೆಂಗಳೂರಿನಲ್ಲಿ ಧರಣಿ ನಿರತ ಶ್ರೀಗಳನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ ಎಂ. ಬಿ. ಪಾಟೀಲ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕೂಡಲಸಂಗಮ ಶ್ರೀಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಫ್ರೀಡಂ ಪಾರ್ಕಿನಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 52 ದಿನ ಪೂರೈಸಿದ್ದು, ಎಂ. ಬಿ. ಪಾಟೀಲ ಅವರು ಶ್ರೀಗಳನ್ನು ಭೇಟಿ ಮಾಡಿದರು. ಅಲ್ಲದೇ, ಹೋರಾಟಕ್ಕೆ ತಮ್ಮ ಬೆಂಬಲ […]

ನಶಿಸಿ ಹೋಗುತ್ತಿರುವ ಹಲಿಗೆ ಬಾರಿಸುವ ಕಲೆ ಉಳಿಸುವುದು ಅಗತ್ಯವಾಗಿದೆ- ಉಮೇಶ ವಂದಾಲ

ವಿಜಯಪುರ: ನಶಿಸಿ ಹೋಗುತ್ತಿರುವ ಹಲಿಗೆ ಬಾರಿಸುವ ಕಲೆಯನ್ನು ಉಳಿಸುವುದು ಅಗತ್ಯವಾಗಿದೆ ಎಂದು ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದ್ದಾರೆ. ನಗರದದಲ್ಲಿ ಶಿವಾಜಿ ಚೌಕಿನಲ್ಲಿ ಆಯೋಜಿಸಲಾಗಿದ್ದ ಹಲಿಗೆ ಬಾರಿಸುವ ಸ್ಪರ್ಧೆಯಾದ ಹಲಗೆ ಹಬ್ಬದ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಹಲಿಗೆ ಬಾರಿಸುವ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ಮತ್ತು ಹಲಿಗ ಬಾರಿಸುವ ಕಲಾವಿದರಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಉತ್ಸವ ಸಮಿತಿ ಸದಸ್ಯ ಶಿವಾನಂದ ಭುಯ್ಯಾರ […]

ಹೊನ್ನಳ್ಳಿಯ ಎಸ್. ಡಿ. ಕುಮಾನಿ ಅಭಿನಂದನಾ ಸಮಾರಂಭ: ಹಿರಿಯ ನಾಯಕನ ಗುಣಗಾನ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ಅಭಿಮಾನಿಗಳನ್ನು ಹೊಂದುವುದು ಸುಲಭದ ಮಾತಲ್ಲ.  ಎಸ್. ಡಿ. ಕುಮಾನಿ ಅವರ 80 ವರ್ಷದ ಅಭಿನಂದನಾ ಸಮಾರಂಭವನ್ನು ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿರುವುದು ಅವರ ಜನಪ್ರೀಯತೆಗೆ ಸಾಕ್ಷಿಯಾಗಿದೆ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದರು. ವಿಜಯಪುರ ತಾಲೂಕಿನ ಹೊನ್ನಳ್ಳಿಯಲ್ಲಿ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆ ಮತ್ತು ದುಂಡಪ್ಪ ಮಲಕಪ್ಪ ಕುಮಾನಿ ಪಿ.ಯು.ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಅಧ್ಯಕ್ಷ ಸಿದ್ರಾಮಪ್ಪ ದುಂಡಪ್ಪ ಕುಮಾನಿ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. […]

ಯಡಿಯೂರಪ್ಪ ಯಾರ ಟಿಕೆಟ್ ತಪ್ಪಿಸುವ, ಕಾಲೆಳೆಯುವ ಕೆಲಸ ಮಾಡಲ್ಲ- ನನ್ನ ಸ್ಪರ್ಧೆಯನ್ನು ಪಕ್ಷ ನಿರ್ಧರಿಸುತ್ತೆ- ಬಿ. ವೈ. ವಿಜಯೇಂದ್ರ

ವಿಜಯಪುರ: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಯಾರ ಟಿಕೆಟ್ ತಪ್ಪಿಸ್ಲಲ.  ನನ್ನ ಸ್ಪರ್ಧೆಯನ್ನು ಪಕ್ಷ ನಿರ್ಧರಿಸುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ನಡೆದ ಬಿಜೆಪಿ ಓಬಿಸಿ  ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುಂಚೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ ಅವರಿಗೆ ಬಿ. ಎಸ್. ವೈ. ಈ ಬಾರಿ ಟಿಕೇಟ್ ತಪ್ಪಿಸಲಿದ್ದಾರೆ ಎಂಬ ವದಂತಿಗಳ ಕುರಿತು ಪ್ರತಿಕ್ರಿಯೆ […]