ಹೊನ್ನಳ್ಳಿಯ ಎಸ್. ಡಿ. ಕುಮಾನಿ ಅಭಿನಂದನಾ ಸಮಾರಂಭ: ಹಿರಿಯ ನಾಯಕನ ಗುಣಗಾನ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ಅಭಿಮಾನಿಗಳನ್ನು ಹೊಂದುವುದು ಸುಲಭದ ಮಾತಲ್ಲ.  ಎಸ್. ಡಿ. ಕುಮಾನಿ ಅವರ 80 ವರ್ಷದ ಅಭಿನಂದನಾ ಸಮಾರಂಭವನ್ನು ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿರುವುದು ಅವರ ಜನಪ್ರೀಯತೆಗೆ ಸಾಕ್ಷಿಯಾಗಿದೆ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದರು.

ಎಸ್. ಡಿ. ಕುಮಾನಿ ಅಭಿನಂದನಾ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ, ತೋಂಟದಾರ್ಯ ಮಠದ ಶ್ರೀಗಳು ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು

ವಿಜಯಪುರ ತಾಲೂಕಿನ ಹೊನ್ನಳ್ಳಿಯಲ್ಲಿ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆ ಮತ್ತು ದುಂಡಪ್ಪ ಮಲಕಪ್ಪ ಕುಮಾನಿ ಪಿ.ಯು.ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಅಧ್ಯಕ್ಷ ಸಿದ್ರಾಮಪ್ಪ ದುಂಡಪ್ಪ ಕುಮಾನಿ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿ ಎಸ್. ಡಿ. ಕುಮಾನಿ ಅವರ ಅಭಿನಂದನೆ ಗ್ರಂಥ ರಚಿಸಿರುವುದು ಶ್ಲಾಘನೀಯವಾಗಿದೆ.  ಕುಮಾನಿ ಅವರಿಗೆ ದುಡ್ಡಿನ ಮೇಲೆ ವ್ಯಾಮೋಹವಿಲ್ಲ.  ಇಂದು ಶಾಲೆ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ಸೇರಿಕೊಂಡು ವಿಜೃಂಭೆಣೆಯಿಂದ ಬೃಹತ್ ವೇದಿಕೆ ನಿಮೀಸಿ ಹುಟ್ಟುಹಬ್ಬ ಆಚರಿಸಿರುವುದು ಅವರ ಮೇಲಿನ ಪ್ರೀತಿಯಂತಿಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಸಿದ್ರಾಮಪ್ಪ ಕುಮಾನಿ ಮಾತನಾಡಿ ನನಗೆ ವಯಸ್ಸಾಗಿದೆ ಎಂದು ಹೇಳುತಾರೆ.  ಆದರೆ ನನ್ನ ಕ್ರಿಯಾಶೀಲತೆಗೆ ವಯಸ್ಸಾಗಿಲ್ಲ.  ಸದಾ ಚಟುವಟಿಕೆಯಿಂದ ಇರಲು ಈಗ ನನಗೆ 80 ವರ್ಷ ವಯಸ್ಸಾಗಿದೆ ಎಂದು ಹೇಳಿದರು.

ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಸಿದ್ಧರಾಮೇಶ್ವರ ಶ್ರೀಗಳು, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಸಾಹಿತಿಗಳಾದ ಫ. ಗು. ಸಿದ್ದಾಪೂರ, ಬಸವರಾಜ ಜಗಜಂಪಿ, ಎನ್. ತಿಮ್ಮಪ್ಪ, ಹೊಸಳ್ಳಿ ದಾಳೇಗೌಡ, ವಿ. ಸಿ. ನಾಗಠಾಣ, ಸಹಜಾನಂದ ದಂಧರಗಿ, ಎಸ್. ಎನ್. ಬಗಲಿ, ನಾಗಪ್ಪ ಕುರಬತಳ್ಳಿ, ಬಿ. ಬಿ. ಪಾಟೀಲ, ಸಹಜಾನಂದ ದಂಧರಗಿ ಸೇರಿದಂತೆ ನಾನಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌