ಮಾ. 9 ರಂದು ಬಿ. ಎಲ್. ಡಿ. ಇ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ವಿಶ್ವಮೂತ್ರ ಪಿಂಡ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಸೇರಿ ನಾನಾ ಕಾರ್ಯಕ್ರಮ

ವಿಜಯಪುರ: ವಿಶ್ವ ಮೂತ್ರಪಿಂಡ ದಿನಾಚರಣೆ ಅಂಗವಾಗಿ ಮಾರ್ಚ್ 9 ರಂದು ಗುರುವಾರ  ಶ್ರೀ ಬಿ.ಎಂ.ಪಾಟೀಲ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಜನಜಾಗೃತಿ ಜಾಥಾ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಕಾರ್ಯಾಗಾರ ನಡೆಯಲಿದೆ.

ಆಸ್ಪತ್ರೆಯ ಮೂತ್ರಜನಕಾಂಗ ಶಸ್ತ್ರಚಿಕಿತ್ಸಾ ವಿಭಾಗ, ಮೂತ್ರಪಿಂಡ ಚಿಕಿತ್ಸಾ ವಿಭಾಗ ಹಾಗೂ ಶ್ರೀ ಬಿ.ಎಂ.ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆ.10ಗಂ. ರಿಂದ ಸಂ.4 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ಶೇ.50 ರಿಯಾಯಿತಿ ದರದಲ್ಲಿ ಹೊಟ್ಟೆ ಸ್ಕ್ಯಾನಿಂಗ್, ಎಕ್ಸ್‍ರೆ ಮತ್ತು ಸಿಬಿಸಿ ತಪಾಸಣೆ ಮಾಡಲಾಗುವುದು.

ಮೂತ್ರಪಿಂಡ ಕಾಯಿಲೆ, ಮೂತ್ರವಿಸರ್ಜನೆ ಸಮಸ್ಯೆ, ಮೂತ್ರಪಿಂಡದ ಹರಳುಗಳ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು, ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.

ಈ ಶಿಬಿರದಲ್ಲಿ ವೈದ್ಯರ ಸಂದರ್ಶನ, ಮೂತ್ರ ಪರೀಕ್ಷೆ, ಕಿಡ್ನಿ ಘಟಕ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ, ರಕ್ತದೊತ್ತಡ, ನಾಡಿಮಿಡಿತ, ದೇಹದ ತೂಕ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ.ಆರ್.ಎಸ್.ಮುಧೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 08352-262340 (ವಿಸ್ತರಣೆ:2467, 2441), 9481087009, 8951178777.

Leave a Reply

ಹೊಸ ಪೋಸ್ಟ್‌