ವಿಜಯಪುರ: ಇತಿಹಾಸ ಚರಿತ್ರೆಯನ್ನು ನೋಡಿದರೆ ಎಲ್ಲಿಯೂ ಸಹ ಹೆಣ್ಣಿನ ನಿಜವಾದ ರೂಪವನ್ನು ಬಿಂಬಿಸಿಲ್ಲ. ಅವಳನ್ನು ಬರೀ ಒಂದು ಭೋಗದ ವಸ್ತುವಾಗಿ ಬಿಂಬಿಸುತ್ತಾ ಬಂದಿದ್ದು ವಿಷಾದದ ಸಂಗತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ವಿಶ್ಲೇಷಿಸಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ “ಮಹಿಳಾ ಸಾಂಸ್ಕøತಿಕ ಹಬ್ಬದಲ್ಲಿ” “ಮಹಿಳಾ ಸಾಹಿತ್ಯ ಚರಿv್ರÉ, ನಿರಾಕರಣೆ, ರಾಜಕಾರಣ ಮತ್ತು ವಿಮರ್ಶೆ” ವಿಷಯದ ಕುರಿತ ಯಶೋಧರಮ್ಮ ದಾಸಪ್ಪ ದತ್ತಿನಿಧಿ ಉಪನ್ಯಾಸ ನೀಡಿದರು.
ಚರಿತ್ರೆ ಎಂದರೆ ಕಟ್ಟಿಕೊಡುವುದು ಎಂದರ್ಥ. ಆದರೆ ಈ ಕಟ್ಟಿಕೊಡುವು ಹಿಂದೆಯೂ ಸಹ ಒಂದು ರಾಜಕೀಯವಿದೆ. ನಾವು ಚರಿತ್ರೆ ಎಂದರೆ ಬರೀ ಯುದ್ಧ, ಹೋರಾಟ ಎಂದು ಅರ್ಥೈಸಿಕೊಂಡು ಬಂದಿದ್ದೇª.É ಇದರ ನಡುವೆ ಮಹಿಳಾ ಚರಿತ್ರೆಯನ್ನು ನಾವು ಗುರುತಿಸಿಯೇ ಇಲ್ಲ. ಅದು ಪರದೆ ಹಿಂದೆಯೇ ಉಳಿಯಿತು ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಸಾಹಿತ್ಯ ನಿರ್ಮಾಣವಾಗುವದರ ಹಿಂದೆಯೂ ಒಂದು ರಾಜಕಾರಣವಿದೆ. ಸಾಹಿತ್ಯದಲ್ಲಿ ಹೆಣ್ಣಿನ ಚಹರೆಗಳು ಇಲ್ಲ. ಇದ್ದರೂ ಸಹ ಅದು ಒಂದು ಶೃಂಗಾರ ವಸ್ತವಿನ ಹಾಗೆ ಭೋಗದ ವಸ್ತುವಾಗಿ ಮಾತ್ರ ಇದೆ. ಈ ಸಮಾಜ, ಕುಟುಂಬ, ಜ್ಞಾನ ನಿರ್ಮಾಣ, ವ್ಯವಸ್ಥೆ ಹೀಗೆ ಎಲ್ಲವೂ ಪಿತ್ರೃಪ್ರಧಾನ ದೃಷ್ಠಿಕೋನದಿಂದ ನಿರ್ಮಾಣವಾದಂತವು. ಹೀಗಾಗಿ ಅಲ್ಲಿ ಬರೀ ನಮಗೆ ಪಿತ್ರ ಚಾಯೆ ಮಾತ್ರ ಕಾಣುತ್ತವೆ. ಹೆಣ್ಣಿಗೆ ಸಮಾನ ಬದುಕುವ ಹಕ್ಕಿದೆ ಎಂಬುವುದು ಎಲ್ಲಿಯೂ ಬರೆದಿಲ್ಲ ಎಂದು ಅವರು ಹೇಳಿದರು.
ಇನ್ನು ನಾವೆಲ್ಲರೂ ತಲೆ-ತಲಾಂತರದಿಂದ ಪತಿವ್ರತೆಯನ್ನು ಗೌರವಿಸುತ್ತ ಬಂದಿದ್ದೇವೆ. ಇಂತಹ ಪರಂಪರೆಗಳು ನಮ್ಮಿಂದಲೇ ಪೀಳಿಗೆಯಿಂದ ಪೀಳಿಗೆಗೆ ಬರುತ್ತವೆ. ಅದೇ ನಾವು ರಾಮಾಯಣದಲ್ಲಿ ಸೀತೆಯನ್ನು ದೇವತೆಯಾಗಿ ನೋಡುತ್ತೇವೆ. ಮಹಿಳೆಗೆ ತನ್ನ ಸ್ವಇಚ್ಛೆಗಳನ್ನು ಸಹ ನಿರೂಪಿಸಲು ಆಗದ ಸ್ಥಿತಿಯಿದೆ. ಹೀಗಾಗಿ ಹೆಣ್ಣಿನ ಜೀವನದಲ್ಲಿ ಮದುವೆ ಎನ್ನುವ ವ್ಯವಸ್ಥೆ ಕೂಡ ಒಂದು ಅಧಿಕಾರ ರೂಪವಾಗಿ ನಿಂತಾಗ ಹೆಣ್ಣಿನ ಮನಸ್ಥಿತಿ, ಅವಳ ಬಯಕೆಗಳಿಗೆ, ಆಶಯಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಹೆಣ್ಣು ಎಂದು ಗುರುತಿಸುವುದೇ ಭಿನ್ನ. ಜೈವಿಕತೆಯ ಕಾರಣದಿಂದ. ಅವಳನ್ನು ಐತಿಹಾಸಿಕ ಕಾಲದಿಂದಲೂ ಈ ದೇಹವೆಂಬವುದರಿಂದ ಅವಳನ್ನು ಲಜ್ಜೆಗಳಿಂದ ಹಿಂದೆ ಬೀಳುವಂತೆ ಮಾಡಲಾಗುತ್ತಿದೆ. ನಮಗೆಲ್ಲರಿಗೂ ಅರ್ಥವಾಗಬೇಕು ದೇಹವೆಂಬುವುದು ಬರೀ ಅದೊಂದು ನೈಸರ್ಗಿಕವಾದದ್ದು. ಅದರ ಮೇಲೆ ಮಹಿಳೆಯನ್ನು ಅಳೆಯಬಾರದು ಎಂದರು.
ಇದುವರೆಗೂ ಕಟ್ಟಿದ ಜ್ಞಾನ ಅದು ಬರೀ ಪುರುಷನ ಕಣ್ಣಿನಿಂದ ಕಟ್ಟಿದ ಜ್ಞಾನವಾಗಿದೆ. ಆಧರೆ ಈಗ ಹೆಣ್ಣು ತನ್ನನ್ನು ತಾನು ಮರುರಚಿಸಿಕೊಳ್ಳುತ್ತಿದ್ದಾಳೆ. ಈಗ ಅವಳು ರಚನೆ ಮಾಡುತ್ತಿರುವುದು ಯಾವುದೋ ಒಂದು ಶಕ್ತಿಗೆ ಅಲ್ಲ. ಈಗ ಅವಳು ತನ್ನ ನಿಜವಾದ ಲೋಕವನ್ನು ಕಟ್ಟಿಕೊಳ್ಳುತ್ತಿದ್ದಾಳೆ. ತನ್ನ ನಿಜ ಸ್ವರೂಪವನ್ನು ಕಟ್ಟಿಕೊಡುವ ಮೂಲಕ ಈ ಹಿಂದೆ ಇರುವಂತಹ ಹೆಣ್ಣಿನ ವಿರೋಧ ಮಾತುಗಳನ್ನು ತೆಗೆದು ಹಾಕುವಂತಹ ಒಂದು ಕೆಲಸ ಈಗ ಆಗುತ್ತಿದೆ ಎಂದು ಅವರು ಹೇಳಿದರು.
ಹೆಣ್ಣಿನ ಬುದ್ಧಿ ಮೊಳಕಾಲಿನ ಕೆಳಗೆ, ಅವಳು ಬರೀ ಹರಟೆ ಹೊಡೆಯುತ್ತಾಳೆ, ಅವಳಿಗೆ ಬೌದ್ಧಿಕ ಶಕ್ತಿ ಕಡಿಮೆ ಎಂಬ ಈ ಪರಂಪರಾಗತವಾಗಿ ಕೇಳಿ ಬರುತ್ತಿರುವ ಮಾತುಗಳನ್ನು ನಾವು ಅತ್ಯಂತ ಸಮಾಧಾನಕಾರವಾಗಿಯೇ ಕೇಳಿಕೊಂಡು ಬರುತ್ತಿದ್ದೇವೆ. ಈಗ ಆ ಎಲ್ಲ ಮಾತುಗಳು ಬದಲಾಗುವ ದಿನಗಳು ಬರಬೇಕಿದೆ. ಅದನ್ನು ಸ್ವತಹ ಮಹಿಳೆಯರೇ ಕಟ್ಟಿಕೊಡುವ ಹೊಸ ಜಗತ್ತಿನಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.