ಸಮಕಾಲಿನ ಹಿಂದಿ ಭಾಷೆಯ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ವಿಜಯಪುರ: ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಎಸ್. ಬಿ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಮುಂಬೈ ಹಿಂದಿ ಅಕೆಡೆಮಿ, ಮುಂಬೈ ಇವರ ಸಂಯುಕ್ತಾಶ್ರಯದಲ್ಲಿ ಸಮಕಾಲಿನ ಹಿಂದಿ ಬಾಷಾ ಔರ್ ಸಾಹಿತ್ಯ: ವಿವಿದ ಆಯಾಮ್ ಎಂಬ ವಿಷಯದ ಕುರಿತು ಮಾ. 10 ಮತ್ತು 11 ರಂದು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಬಿ. ಎಲ್. ಡಿ. ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ತಿಳಿಸಿದ್ದಾರೆ.

ಎ. ಎಸ್. ಪಿ ಕಾಮರ್ಸ್ ಕಾಲೇಜಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ದೇಶದ ರಾಷ್ಟ್ರೀಯ ಬಾಷೆ ಹಿಂದಿ ವಿಷಯದ ಅವಶ್ಯಕತೆ, ಪ್ರಾಮೂಖ್ಯತೆ ಹಾಗೂ ಸಾಹಿತ್ಯ, ಇತಿಹಾಸವನ್ನು ಪರಿಚಯಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.  ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯದ ಹಿರಿಯ ಸಾಹಿತಿಗಳನ್ನು, ಚಿಂತಕರನ್ನು ಹಾಗೂ ಪತ್ರಕರ್ತರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಈ ವಿಚಾರ ಸಂಕಿರಣದಲ್ಲಿ ಅಮೇರಿಕೆಯ ಸುಪ್ರಸಿದ್ದ ಹಿಂದಿ ಪತ್ರಕರ್ತ, ಅನುವಾದಕಿ ಡಾ. ಅನಿತಾ ಕಪೂರ, ಲಂಡನ್ನಿನ ಹಿಂದಿ ಸಾಹಿತಿ ಅರುಣಾ ಸಬರವಾಲ ಹಾಗೂ ವಿದೇಶದ ಮತ್ತು ದೇಶದ ನಾನಾ ರಾಜ್ಯಗಳಿಂದ ವಿಷಯ ಪರಾಂಗತ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಕುರಿತು ಡಾ. ಆರ್. ಬಿ. ಕೊಟ್ನಾಳ ಮಾಹಿತಿ ನೀಡಿದರು

ಈ ವಿಚಾರ ಸಂಕಿರಣವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಎಸ್. ನಾವಿ ಉದ್ಘಾಟಿಸಲಿದ್ದು, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಜಾರ್ಖಂಡ ಹರಿಯಾಣ, ತೆಲಂಗಾಣ, ಆಂದ್ರ ಪ್ರದೇಶ ಮುಂತಾದ ರಾಜ್ಯಗಳಿಂದ ಹಾಗೂ ನಾನಾ ದೇಶಗಳಿಂದ ಸುಮಾರು 250ಕ್ಕೂ ಹೆಚ್ಚು ಸದಸ್ಯರು ಬಾಗವಹಿಸಲಿದ್ದಾರೆ.  ಎಲ್ಲ ಪ್ರತಿನಿಧಿಗಳಿಗೆ ಉಚಿತ ವಸತಿ, ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಬಿ.ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಿ. ಪಾಟೀಲ ಅವರು ಮಹಾಪೋಷಕರಾಗಿ ವಿಚಾರ ಸಂಕಿರಣಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಒದಗಿಸಿದ್ದಾರೆ.  ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ಮಹವಿದ್ಯಾಲಯದ ಹಿಂದಣ ವಿದ್ಯಾರ್ಥಿಗಳ ಸಂಘ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.  ಮಾ. 10 ರಂದು ಬೆ. 10ಕ್ಕೆ ವಿಚಾರ ಸಂಕಿರಣ ಉದ್ಘಾಟನೆ ಸಮಾರಂಭ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಅವರು ಡಾ. ಆರ್. ಬಿ. ಕೊಟ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌