ಈ ಬಾರಿಯೂ ಕೇಸರಿ ಗುಲಾಲ್ ಹಾರಬೇಕು-ಯತ್ನಾಳ, ನಮ್ಮ ಅಭ್ಯರ್ಥಿ ಯತ್ನಾಳ 50 ಸಾವಿರ ಮತಗಳಿಂದ ಗೆಲ್ಲಿಸಬೇಕು- ಕಾರಜೋಳ
ವಿಜಯಪುರ: ಈ ಬಾರಿಯೂ ಗುಮ್ಮಟ ನಗರಿ ವಿಜಯಪುರದಲ್ಲಿ ಗುಲಾಲ್ ಹಾರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ವಿಜಯಪುರ ನಗರದಲ್ಲಿ ನಡೆದ ರೋಡ್ ಶೋ ಬಳಿಕ ಸಭೆಯಲ್ಲಿ ಅವರು ಮಾತನಾಡಿದರು. ಬಹಳ ಸಂತೋಷವಾಗುತ್ತಿದೆ ನಿಮ್ಮೆಲ್ಲರ ಅಭಿಮಾನ, ನಿಮ್ಮಲ್ಲರ ಹಿಂದುತ್ವದ ಶಕ್ತಿ, ವಿಜಯಪುರ ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ, ಮಹಾರಾಣಾ ಪ್ರತಾಪರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ, ಅಹಿಲ್ಯಾಬಾಯಿ ಹೋಳ್ಕರ, ಮಹಾತ್ಮಾ ಬಸವೇಶ್ವರ ಎಲ್ಲರ ಊರಾಗಿ ಉಳಿಯಲಿದೆ. […]
ಬಸವ ನಾಡಿನಲ್ಲಿ ಬಿಜೆಪಿ ಸರಕಾರ 10000 ಉದ್ಯೋಗ ಸೃಷ್ಟಿಯಾಗಲಿದೆ- ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ನಗರದಲ್ಲಿ ರಾಜ್ಯ ಸರkeರದ ದೂರದೃಷ್ಟಿಯ ಫಲದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿ ದ್ರಾಕ್ಷಾರಸ ಉತ್ಪಾದನೆ ಘಟಕ ಪ್ರಾರಂಭವಾಗಲಿದ್ದು ಇದರಿಂದ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಜಯಪುರ ನಗರ ಅಭಿವೃದ್ಧಿಗೆ ಸಾವಿರ ಕೋಟಿಗೂ ಹೆಚ್ಚು ರೂಪಾಯಿ ಅನುದಾನ ನೀಡಿದ್ದು, ಇದರಿಂದ ಈ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿಯಾಗಿದೆ. […]
ಪೂಜಾರಿಗಳು ಜೀವನದಲ್ಲಿ ಸಚ್ಚಾರಿತ್ರ್ಯವನ್ನು ಅಳವಡಿಸಿಕೊಳ್ಳಬೇಕು- ತಳೇವಾಡ ಬೀರೇಶ್ವರ ದೇವಸ್ಥಾನದ ಬರ್ಮಣ್ಣ ಪೂಜಾರಿ
ವಿಜಯಪುರ: ಹಾಲುಮತ ಪೂಜಾರಿಗಳು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕಾದರೆ ಶುದ್ಧ, ಹಸ್ತ, ಸಚ್ಚಾರಿತ್ರ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಬಿರೇಶ್ವರ ದೇವಸ್ಥಾನದ ಪೂಜಾರಿಗಳಾದ ಶ್ರೀ ಬರ್ಮಣ್ಣ ಪೂಜಾರಿ ಹೇಳಿದರು. ಹಾಲುಮತ ಧಾರ್ಮಿಕ ಪ್ರಸಿದ್ಧ ಕ್ಷೇತ್ರ ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಶ್ರೀ ಬಿರೇಶ್ವರ ದೇವಸ್ಥಾನದಲ್ಲಿ ಪಟ್ಟದ ಪೂಜಾರಿ ಹಾಗೂ ಜಡೆ ಪೂಜಾರಿಗಳ ಶ್ರೇಯೋಭಿವೃದ್ಧಿಗಾಗಿ ಏರ್ಪಡಿಸಲಾದ ಹಾಲುಮತ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಲುಮತದ ಪೂಜಾರಿಗಳು ಸತ್ಯಕ್ಕಾಗಿ ತ್ಯಾಗ ಮಾಡುವುದು, ನುಡಿದಂತೆ […]
ಮಹೇಶ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ಗೋಕಾಕ ನಿಂದ ಸ್ಪರ್ಧಿಸಲ್ಲ- ರಮೇಶ ಜಾರಕಿಹೊಳಿ ಸ್ಪಷ್ಟನೆ
ವಿಜಯಪುರ: ತಮ್ಮ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಬೆಳಗಾವಿ ಜಿಲ್ಲೆಯ ಅಥಣಿಯಿಂದ ಹಾಲಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ನಾನೂ ಗೋಕಾಕಿನಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಜೊತೆ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಎಲ್ಲರಿಗೂ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿದರು. ಅಥಣಿಯಿಂದ ಮಹೇಶ ಕುಮಠಳ್ಳಿ ಅವರಿಗೆ ಟಿಕೆಟ್ ಸಿಗದಿದ್ದರೆ […]
ರೇವಣಸಿದ್ದೇಶ್ವರ ಏತ ನೀರಾವರಿ ಹಂತ-1 ಹಾಗೂ ಇಂಡಿ ತಾಲೂಕಿನ 16 ಕೆರೆ ತುಂಬುವ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ವಿಜಯಪುರ: ಇಂಡಿ ತಾಲೂಕಿನ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ನಾಗಠಾಣ ಮತ್ತು ಇಂಡಿ ತಾಲೂಕಿನ 70 ಸಾವಿರ ಎಕರೆ ರೈತರ ಜಮೀನುಗಳಿಗೆ ನೀರಾವರಿ ಒದಗಿಸುವ ಮೂಲಕ ರೈತರಿಗೆ ವಿಶ್ವಾಸ ಮೂಡಿಸುವ ಕಾರ್ಯ ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಜಲಸಂಪನ್ಮೂಲ ಇಲಾಖೆ, ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತದ ಸಹಯೋಗದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಹಂತ-1 ಹಾಗೂ ಇಂಡಿ ತಾಲೂಕಿನ 16 ಕೆರೆ ತುಂಬುವ ಕಾಮಗಾರಿಗಳಿಗೆ […]
ಯುಕೆಪಿ 3ನೇ ಹಂತ: ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಧನ ವಿತರಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದೇವೆ- ಸಿಎಂ ಬೊಮ್ಮಾಯಿ
ವಿಜಯಪುರ: ನಾನಾ ನೀರಾವರಿ ಯೋಜನೆಗಳಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಒಣ ಬೇಸಾಯಕ್ಕೆ ರೂ. 2 ಲಕ್ಷದಿಂದ ಗರಿಷ್ಟ ರೂ. 20 ಲಕ್ಷ, ನೀರಾವರಿ ಪ್ರದೇಶಕ್ಕೆ ರೂ. 24 ಲಕ್ಷ ರೂ ವರೆಗೆ ಪರಿಹಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಜಲಸಂಪನ್ಮೂಲ ಇಲಾಖೆ ಕೃಷ್ಣಾ ಜಲಭಾಗ್ಯ ನಿಗಮ ಸಹಯೋಗದಲ್ಲಿ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದ ಕೃಷ್ಣಾ ನಗರದ ಬಿ. ಟಿ. ಪಾಟೀಲ ಮೆಮೋರಿಯಲ್ ನಂದಿ ಇಂಟರ್‍ನ್ಯಾಷನಲ್, ಸಿ.ಬಿ.ಎಸ್.ಇ. ಸ್ಕೂಲ್, ಆವರಣದಲ್ಲಿ ಹಮ್ಮಿಕೊಂಡ, 3 ನೇ […]