ಬಸವ ನಾಡಿನಲ್ಲಿ ಬಿಜೆಪಿ ಸರಕಾರ 10000 ಉದ್ಯೋಗ ಸೃಷ್ಟಿಯಾಗಲಿದೆ- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ನಗರದಲ್ಲಿ ರಾಜ್ಯ ಸರkeರದ ದೂರದೃಷ್ಟಿಯ ಫಲದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿ ದ್ರಾಕ್ಷಾರಸ ಉತ್ಪಾದನೆ ಘಟಕ ಪ್ರಾರಂಭವಾಗಲಿದ್ದು ಇದರಿಂದ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಜಯಪುರ ನಗರ ಅಭಿವೃದ್ಧಿಗೆ  ಸಾವಿರ ಕೋಟಿಗೂ ಹೆಚ್ಚು ರೂಪಾಯಿ ಅನುದಾನ ನೀಡಿದ್ದು, ಇದರಿಂದ ಈ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿಯಾಗಿದೆ.  ಕಾಂಗ್ರೆಸ್ ನಾಯಕರಂತೆ ಜನಕ್ಕೆ ಸೀರಿ, ಹಣದಂತ ಯಾವುದೆ ಆಮಿಷ್ಯ ಒಡ್ಡುವ ಜಯಮಾನ ನನ್ನದಲ್ಲ. ನಾನು ಚುನಾವಣೆಯಲ್ಲಿ ಹಣ ಹೆಂಡ, ಅರಿವೆ ಕೋಡುವದಿಲ್ಲ ನನ್ನ ಅಭಿವೃದ್ಧಿ ಹಾಗೂ ನರೇಂದ್ರ ಮೋದಿಯವರ‌ ಕಾರ್ಯ ನೋಡಿ ಮತ ನೀಡಬೇಕು ಎಂದು ಹೇಳಿದರು.

ಬಸನಗೌಡ ಪಾಟೀಲ ಯತ್ನಾಳ ಅವರು ಯಾತ್ರೆಯಲ್ಲಿ ಮಾತನಾಡಿದರು

ಸಚಿವರಾದ ಸಿ. ಸಿ. ಪಾಟೀಲ, ಗೋವಿಂದ ಕಾರಜೋಳ, ಮಾತನಾಡಿ ಕ್ಷೇತ್ರದ ಶಾಸಕ ಹೇಗಿರಬೇಕು ಎಂಬುದಕ್ಕೆ ಯತ್ನಾಳ ಅವರೇ ಉದಾಹರಣೆಯಾಗಿದ್ದಾರೆ.  ಮುಂಬರುವ ದಿನಗಳಲ್ಲಿ ರೂ. 50000 ಮತಗಳ ಅಂತರದಿಂದ ಗೆಲವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, 2023ರ ಚುನಾವಣೆ ಬಹಳ ಮಹತ್ವದ್ದಾಗಿದ್ದು ಚುನಾವಣೆ ನಂತರ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ.  2024 ಕ್ಕೆ ಮೋದಿಯವರು ಮತ್ತೊಮ್ಮೆ ಪ್ರಧಾನಿಗಳಾಗಿ ಭಾರತ ವಿಶ್ವಕ್ಕೆ ದೊಡ್ಡಣ್ಣನಾಗಲಿದೆ ಎಂದು ಹೇಳಿದರು.

ಸಚಿವ ಸಿ. ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಅರ್. ಎಸ್. ಪಾಟೀಲ ಕೂಚಬಾಳ, ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಲಿಂಬೆ ಬೆಳೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮುಖಂಡರಾದ ದಯಾಸಾಗರ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ‌ಮಳುಗೌಡ ಪಾಟೀಲ, ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಅಭಿಮಾನಿಗಳು, ಕಾರ್ಯಕರ್ತರು, ಮಹಿಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ನಡೆದ ಮೆರವಣಿಗೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಕೇಸರಿ ಬಟ್ಟೆಯಿಂದ ಅಲಂಕಾರಗೊಳಿಸಲಾಗಿತ್ತು.  ವಿಜೃಂಭಣೆಯಿಂದ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು.  ರಸ್ತೆಯ ಮಧ್ಯದಲ್ಲಿ ಶಿವಾಜಿ ಮಹಾರಾಜರ, ಬಸವಣ್ಣನವರ ಹಾಗೂ ಗಾಂಧೀಜಿ ಪುತ್ತಳಿಗೆ ನಾಯಕರು ಮಾಲಾರ್ಪಣೆ ಮಾಡಿದರು.  ರೋಡ ಶೋದಲ್ಲಿ ಸೇರಿದ ಜನ ಸಮೂಹ ಘೋಷಣೆ ಹಾಕುತ್ತ ನೃತ್ಯ ಮಾಡುವ ಮೂಲಕ ಯಾತ್ರೆಗೆ ಮೆರಗು ನೀಡಿದರು.

Leave a Reply

ಹೊಸ ಪೋಸ್ಟ್‌