ವಿಜಯಪುರ: ಹಾಲುಮತ ಪೂಜಾರಿಗಳು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕಾದರೆ ಶುದ್ಧ, ಹಸ್ತ, ಸಚ್ಚಾರಿತ್ರ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಬಿರೇಶ್ವರ ದೇವಸ್ಥಾನದ ಪೂಜಾರಿಗಳಾದ ಶ್ರೀ ಬರ್ಮಣ್ಣ ಪೂಜಾರಿ ಹೇಳಿದರು.
ಹಾಲುಮತ ಧಾರ್ಮಿಕ ಪ್ರಸಿದ್ಧ ಕ್ಷೇತ್ರ ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಶ್ರೀ ಬಿರೇಶ್ವರ ದೇವಸ್ಥಾನದಲ್ಲಿ ಪಟ್ಟದ ಪೂಜಾರಿ ಹಾಗೂ ಜಡೆ ಪೂಜಾರಿಗಳ ಶ್ರೇಯೋಭಿವೃದ್ಧಿಗಾಗಿ ಏರ್ಪಡಿಸಲಾದ ಹಾಲುಮತ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಲುಮತದ ಪೂಜಾರಿಗಳು ಸತ್ಯಕ್ಕಾಗಿ ತ್ಯಾಗ ಮಾಡುವುದು, ನುಡಿದಂತೆ ನಡೆಯುವುದು ಸರ್ವರೊಂದಿಗೆ ಮೈತ್ರಿ ಭಾವದೊಂದಿಗೆ ಸೇಡಿನ ಭಾವನೆಯಿಂದ ದೂರವೀರಬೇ ಎಂದು ಅವರು ತಿಳಿಸಿದರು.
ರಾಜ್ಯ ಹಾಲುಮತ ಪಟ್ಟದ ಪೂಜಾರಿ ಜಡೆತಲೆ ಪೂಜಾರಿಗಳ ಮಹಾಸಂಘದ ಅಧ್ಯಕ್ಷರಾದ ಮಾಳಿಂಗರಾಯ ಮಹಾರಾಯರು ನಾಗಠಾಣ ಅವರು ಮಾತನಾಡಿ ನಾವೆಲ್ಲರೂ ಹಾಲುಮತ ಧರ್ಮದ ಬಗ್ಗೆ ಭಕ್ತಿ ಗೌರವವನ್ನು ನೀಡಿ ಬೇರೆಯವರು ನಮ್ಮ ಸಮಾಜದ ನಿಂದನೆ-ಟೀಕೆಗಳನ್ನು ಸಹಿಸಿ ಕೊಳ್ಳದೆ ನಮ್ಮ ಧರ್ಮ -ಜಾತಿಗೆ ಸಂಕಟ ಒದಗಿದಾಗ ಜೀವದ ಹಂಗು ತೊರೆದು ಟೊಂಕ ಕಟ್ಟಿ ನಿಲ್ಲಬೇಕು ಧಾರ್ಮಿಕ ಸ್ಥಳಗಳ ರಕ್ಷಣೆಯ ಹೊಣೆ ಹಾಲುಮತದ ಪೂಜಾರಿಗಳ ಮೇಲಿದೆ ಎಂದು ಅವರು ಹೇಳಿದರು.
ವಿಜಯಪುರ ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಬೀರಪ್ಪ ಜುಮನಾಳ ಮಾತನಾಡಿ, ಕೆಲವೊಂದು ಡೊಂಗಿ ಸ್ವಾಮಿಗಳಿಂದ ಹಾಲುಮತ ಸಮಾಜದ ಬೆಳವಣಿಗೆ, ಸಂಘಟನೆಗೆ ತೊಂದರೆ ಆಗುತ್ತಿದ್ದು ಅಂಥವರಿಂದ ನಾವು ಜಾಗೃತರಾಗ ಬೇಕು.ಪೂಜಾರಿಗಳು ದೇವರ ಪ್ರತಿರೂಪವಿದ್ದಂತೆ ನಿಮ್ಮಿಂದಲೇ ಸಮಾಜದ ಬೆಳವಣಿಗೆ, ಸಂಘಟನೆಗೆ ಇಂದಿನಿಂದ ಶಕ್ತಿ ತುಂಬುವ ಕೆಲಸ ಬೊನಗಿ ಮೂಲಕ ಆಗಬೇಕು ಎಂದು ಹೇಳಿದರು.
ಬನಸಿದ್ಧ ಮಹಾರಾಯರು ಡೊಮನಾಳ-ತಿಡಗುಂದಿ, ಕೆಂಚರಾಯ ಪುಜಾರಿ ಮಾಲಹಳ್ಳಿ, ದೇವಕಾಂತ ಬಿಜ್ಜರಗಿ, ಡಾ.ಎಸ್.ಆರ್.ತಳೆವಾಡ ಪಾಟೀಲ್ ವಕೀಲರು ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಪೂಜಾರಿ ರೂಗಿಶ್ರೀ ಮಾಯಣ್ಣ ಪೂಜಾರಿ ಉತ್ತೂರಶ್ರೀ ಪಿತಾಂಬರ ಪೂಜಾರಿ ತಳೆವಾಡಶ್ರೀ ಗೋಪಾಲ ಪೂಜಾರಿ ಭಾಲ್ಕಿ ಪಟ್ಟದ ಪೂಜಾರಿ ಹಾಗೂ ಜಡೆ ಪೂಜಾರಿಗಳಾದ .ಶಂಕರ ಪೂಜಾರಿ ಭರಟಗಿ, ಮಾದೇವ ಮೇಟಿ ಸೈದಾಪುರ, ಬೀರಪ್ಪ ಪೂಜಾರಿ ತಳೆವಾಡ, ಕಲ್ಲಪ್ಪ ನಾಟಿಕಾರ ಕನ್ಮುಚ್ಚನಾಳ, ಬೀರೇಶ್ ಪೂಜಾರಿ,ಭೀವಾ ಮಾನೆ,ಶೀವಾಜಿ ಜಾವೀರ, ಬೀರಪ್ಪ ಕನಿಮನಿ ನಾರಾಯಣ್ ಬೂದ್ನೂರ್ ಬೀರಪ್ಪ ಇಚೂರ್ ಪದ್ಮಣ್ಣಾ ಪೂಜಾರಿ, ಅಶೋಕ್ ಕೋಟಗೊಂಡ, ನಾಗಪ್ಪ ಗುಗುದಡ್ಡಿ, ಹನುಮಂತ ಮಲಘಾನ, ಜ್ಯೋತೆಪ್ಪ ಪೂಜಾರಿ, ಗದಿಗೆಪ್ಪ ಪೂಜಾರಿ, ಭಗವಂತ ಅಲ್ಲಬಾದಿ, ಬೀರಪ್ಪ ಕಸನಕ್ಕಿ, ಮಾಯಣ್ಣ ಪೂಜಾರಿ, ಮಲ್ಲಿಕಾರ್ಜುನ್ ಪೂಜಾರಿ, ಶಂಕ್ರಪ್ಪ ಪೂಜಾರಿ, ಹನುಮಂತ್ ಸುತಾಳಗೇರಿ, ಮಾದೇವಪ್ಪ ಪೂಜಾರಿ, ಮಲ್ಲಿಕಾರ್ಜುನ್ ಪೂಜಾರಿ, ಅಮೋಘಸಿದ್ದ ಪೂಜಾರಿ ಕಲ್ಬಳಗಿ, ರೇವಣಸಿದ್ಧ ಪೂಜಾರಿ, ಮಾಯಪ್ಪ ಬಬಲೇಶ್ವರ, ಮಾದೇವ ಪೂಜಾರಿ ಅಂಕಲಗಿ, ಶಿವರಾಯ ಪೂಜಾರಿ, ಬೆನಕನಹಳ್ಳಿ ನಗಲೇಪ್ಪ ಪೂಜಾರಿ ರೂಗಿ,ಮಲ್ಲೇಶಿ ಪಾಟೀಲ್, ಬೀರಪ್ಪ ಪೂಜಾರಿ ನಂದ್ಯಾಳ, ರುದ್ರಪ್ಪ ಪೂಜಾರಿ, ಅನ್ನು ವಡಿಗೇರಿ, ಹಾಗೂ ವಿಜಯಪುರ ಜಿಲ್ಲಾ ಹಾಲುಮತ ಸಮಾಜದ ಮುಖಂಡರಾದ ಅಮ್ಮೋಘಸಿದ್ಧ ಪುಜಾರಿ,ಕಾಮಣ್ಣ ಗಂಗನಳ್ಳಿ, ರಾಜು ಕಂಕನವಾಡಿ, ಹಣಮಂತ ದಿನ್ನಿ ಮುಂತಾದವರು ಉಪಸ್ಥಿತರಿದ್ದರು.