ಬಯೋಫ್ಲಾಕ್ ಪದ್ಧತಿಯಲ್ಲಿ ಮೀನು ಸಾಕಾಣಿಕೆಯಿಂದ ಹೆಚ್ಚು ಆದಾಯ ಸಾಧ್ಯ- ವಿಸ್ತರಣಾ ನಿರ್ದೇಶಕರಾದ ಡಾ. ಎನ್. ಎ. ಪಾಟೀಲ

ವಿಜಯಪುರ: ಬಯೋಫ್ಲಾಕ್ ತಂತ್ರಜ್ಞಾನವು ನೀಲಿ ಕ್ರಾಂತಿ ಎಂದೇ ಬಣ್ಣಿಸಲಾಗುತ್ತಿದೆ.  ಈ ತಂತ್ರಜ್ಞಾನದಿಂದ ರೈತರು ಉತ್ತಮ ಲಾಭ ಗಳಿಸಬಹುದು ಎಂದು ಬೀದರ್‍ ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ. ಎನ್. ಎ. ಪಾಟೀಲ ತಿಳಿಸಿದರು.

ನಗರದ ಹೊರ ವಲಯದಲ್ಲಿರುವ ಭೂತನಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ನಡೆದ ಬಯೋಫ್ಲಾಕ್ ಪದ್ಧತಿಯಲ್ಲಿ ಮೀನು ಸಾಕಾಣಿಕೆ ಕುರಿತ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಯೋ ಫ್ಲಾಕ್ ತಂತ್ರಜ್ಞಾನವನ್ನು ಹೊಸ ನೀಲಿ ಕ್ರಾಂತಿ ಎಂದೇ ಬಣ್ಣಿಸಲಾಗುತ್ತಿದೆ.  ಈ ತಂತ್ರಜ್ಞಾನದಿಂದ ನೀರಿನಲ್ಲಿರುವ ಪೋಷಕಾಂಶಗಳನ್ನು ನಿರಂತರವಾಗಿ ಮರುಬಳಕೆ ಮಾಡಬಹುದು.  ಇದು ಪರಿಸರ ಸ್ನೇಹಿ ಸಾಕಾಣಿಕೆ ತಂತ್ರಜ್ಞಾನವಾಗಿದ್ದು, ಸೂಕ್ಷ್ಮ ಜೀವಿ ಉತ್ಪಾದನೆಗಳನ್ನು ಆಧರಿಸಿರುವುದೇ ಬಯೋಫ್ಲಾಕ್ ಎಂದು ಕರೆಯಲಾಗುತ್ತದೆ.  ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಉದ್ಯಮಿದಾರರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಲಾಭ ಗಳಿಸಬಹುದು ಎಂದು ಅವರು ತಿಳಿಸಿದರು.

ವಿಜಯಪುರದ ಆಯು ಮತ್ಸ್ಯ ಸೇವಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ ಎಸ್. ಜಾದವ ಮಾತನಾಡಿ, ಮೀನುಗಾರಿಕೆ ವಲಯವು ಉದ್ಯೋಗ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ವಿದೇಶಿ ವಿನಿಮಯ ಗಳಿಕೆ ಮತ್ತು ಲಕ್ಷಾಂತರ ಜನರಿಗೆ ವಿಶೇಷವಾಗಿ ಗ್ರಾಮೀಣ ಜನರಿಗೆ ಆದಾಯದ ಪ್ರಮುಖ ಕೊಡುಗೆಯಾಗಿದೆ ಎಂದು ತಿಳಿಸಿದರು.

ಬಯೋಫ್ಲಾಕ್ ತಂತ್ರಜ್ಞಾನವು ನವೀನ ಪದ್ದತಿಯಾಗಿದ್ದು ರೈತರು ಮತ್ತು ಉದ್ಯಮಿದಾರರು ಜಾಗರೂಕತೆಯಿಂದ ನಿರ್ವಹಣೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.

ಕೇಂದ್ರದ ಮುಖ್ಯಸ್ಥ ಡಾ. ವಿಜಯಕುಮಾರ ಮಾತನಾಡಿ, ವಿಜಯಪುರ ಜಿಲ್ಲೆಯು ಅಪಾರ ಪ್ರಮಾಣದ ಜಲ ಸಂಪನ್ಮೂಲ ಹೊಂದಿದ್ದು, ಇವುಗಳನ್ನು ಪೂರಕವಾಗಿ ಬಳಸಿಕೊಂಡು ಮೀನು ಈತ್ಪಾದನೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಬಹುದು ಎಂದು ತಿಳಿಸಿದರು.

ಕೇಂದ್ರವು ತರಬೇತಿ, ಪ್ರತ್ಯಕ್ಷತೆ, ಕ್ಷೇತ್ರೋತ್ಸವ ಹಾಗೂ ಮೇಳಗಳನ್ನು ಕಾಲಕಾಲಕ್ಕೆ ಆಯೋಜಿಸುತ್ತಿದ್ದು ರೈತರಿಗೆ ಮೀನುಗಾರಿಕೆಯ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸುತ್ತಿದೆ. ರೈತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರಿಕಾ ಕ್ಷೇತ್ರದಲ್ಲಿ ತೊಡಗಿಕೊಂಡು ಕೃಷಿಯೊಂದಿಗೆ ಉಪ ಕಸುಬನ್ನಾಗಿ ಮೀನು ಸಾಕಾಣಿಕೆ ಮಾಡುವ ಮೂಲಕ ಹೆಚ್ಚು ಲಾಭ ಗಳಿಸಬಹುದು ಎಂದು ಅವರು ತಿಳಿಸಿದರು.

ವಿಜಯಪುರದ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ, ಸಹಾಯಕ ಪ್ರಾಧ್ಯಾಪಕ ಡಾ. ವಿಜಯ ಎಸ್. ಅತನೂರ ಸ್ವಾಗತಿಸಿ, ವಂದಿಸಿದರು.

Leave a Reply

ಹೊಸ ಪೋಸ್ಟ್‌