ವಿಜಯಪುರ: ಧಾರವಾಡದಲ್ಲಿ ನಡೆದ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಫಾರ್ಡೆಬಲ್ ಆ್ಯಂಡ್ ಕ್ಲೀನ್ ಎನರ್ಜಿ ಉನ್ನತ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಸರ್ವೇಶ ಮೈಂದರಗಿ, ಶೃಷ್ಟಿ ಬುದ್ನಿ, ಅಶೋಕ ಹೂಗಾರ, ಶಿವಲೀಲಾ ಪಾಟೀಲ, ಆದಿತ್ಯ ತಳವಾರ, ಬಸವರಾಜೇಶ್ವರಿ, ಸಂಜನಾ ಬಗಲಿ, ಶುಭಾ ಕಲ್ಯಾಣಮಠ ಮುಂತಾದವರು ಐಐಟಿ ಧಾರವಾಡದಲ್ಲಿ ನಡೆದ ಉನ್ನತ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇವರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕ್ಲೀನ್ ಎನರ್ಜಿ ವಿಷಯದ ಕುರಿತು ಪ್ರಸ್ತುತ ಪಡಿಸಿದರು. ಅಲ್ಲದೇ, ಪ್ಯಾನೆಲ್ ಡಿಸ್ಕಷನ್‍ನಲ್ಲಿ ಅತ್ಯುತ್ತಮ ಭಾಗವಹಿಸುವಿಕೆ ಪ್ರಶಸ್ತಿಯನ್ನು ಪಡೆದರು. ಇದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಈ ಸಾಧನೆಗೆ ಬಿ. ಎಲ್. ಡಿ. ಇ. ಸಂಸ್ಥೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂಧಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.