ಬಿ.ಎಲ್.ಡಿ.ಇ.ಎ ಎಂಜಿನಿಯರಿಂಗ್ ಕಾಲೇಜಿಗೆ ಇಂಡಿಯಾ ಬುಕ್ ಆಫ್ ರೆಕಾಡ್ಸ್ದಿಂದ ಮೆಚ್ಚುಗೆ ಪ್ರಮಾಣ ಪತ್ರ

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಮಾಣ ಪತ್ರ ಲಭಿಸಿದೆ.

ಇನ್ನೋವೆಟಮ್ ಎಂಜಿನಿಯರಿಂಗ್ ಕಂಪನಿ ನಡೆಸಿದ ಒಂದು ದಿನದ ಕಾರ್ಯಗಾರದಲ್ಲಿ  150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  ವಿದ್ಯಾರ್ಥಿಗಳಿಗೆ ವೆಬಸೈಟ ಅಭಿವೃದ್ಧಿ ಹಾಗೂ ಹೋಸ್ಟಿಂಗ್ ಕುರಿತು ತರಭೇತಿ ಕೊಡಲಾಯಿತು.  ಶೈಕ್ಷಣಿಕ ಮತ್ತು ಉಧ್ಯಮ ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳಿಗೆ ವೆಬಸೈಟ ಅಭಿವೃದ್ಧಿ ಹೋ ಸ್ಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡರು.

ಒಟ್ಟು 350 ಅಧಿಕ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿ, 207 ಲೈವ್ ಸರ್ವರಗಳಲ್ಲಿ ಶೈಕ್ಷಣಿಕ ಡೊಮೇನ್‍ನಲ್ಲಿ ಹೊಸ್ಟಿಂಗ್ ಮಾಡಲಾಯಿತು.  ಈ ಕಾರ್ಯಗಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲೈವ್ ಸರ್ವರನಲ್ಲಿ ವೆಬಸೈಟ್ ಹೋಸ್ಟ ಮಾಡಿದ ಹಿನ್ನೆಲೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ಸ್‍ದಿಂದ ಮೆಚ್ಚುಗೆ ಪ್ರಮಾಣ ಪತ್ರ ಲಭಿಸಿರುತ್ತದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಮತ್ತು ಪ್ರೊ. ಆರ್. ಡಿ. ಸಲಗರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌