ವಿಜಯಪುರ: ಚುನಾವಣೆ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿರುವ ಲೋಕ್ ಪೊಲ್ ಸಂಸ್ಥೆ ನಡೆಸಿರುವ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಬಬಲೇಶ್ವರ ಮತಕ್ಷೇತ್ರದಲ್ಲಿ ಈ ಬಾರಿಯೂ ಭಾರಿ ಅಂತರದಲ್ಲಿ ಗೆಲುವು ಸಾಧಿಸುವುದು ನಿಚ್ಛಳವಾಗಿದೆ.
ಲೋಕ್ ಪೊಲ್ ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ನಡೆಸುವ ಮೂಲಕ ಹೆಸರು ಮಾಡಿದ್ದು, ಕರ್ನಾಟಕದ ಚುನಾವಣೆ ಪೂರ್ವ ಸಮೀಕ್ಷೆಯನ್ನೂ ನಡೆಸಿದೆ. ಈ ಸಮೀಕ್ಷೆಯಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಎಂ. ಬಿ. ಪಾಟೀಲರು ತಮ್ಮ ಬಿಗೀ ಹಿಡಿತ ಮುಂದುವರೆಸಿದ್ದಾರೆ.
ಲೋಕ್ ಪೊಲ್ ಸಂಸ್ಥೆಯ ಸಮೀಕ್ಷೆಯನ್ನು ಎಂ. ಬಿ. ಪಾಟೀಲ ಅವರು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಲೋಕ್ ಪೊಲ್ ಸಂಸ್ಥೆ ಮಾಡಿರುವ ಟ್ವೀಟ್:
Constituency name: Babaleshwar (AC No. 29)
Candidate Name: MB Patil (@MBPatil)
MB Patil retains control in home bastion.#KarnatakaElections2023 #AssemblyElections2023 #KarnatakaElection #LokPoll #LokpollKarnatakaSurvey pic.twitter.com/AI7ezq7r7o
— Lok Poll (@LokPoll) March 13, 2023
ಈ ಸಮೀಕ್ಷೆ ಪ್ರಕಾರ ಬಬಲೇಶ್ವರ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಎಂ. ಬಿ. ಪಾಟೀಲ ಪರ ಶೇ. 55 ರಷ್ಟು ಮತದಾರರು ಒಲವು ತೋರಿದ್ದಾರೆ. ಬಿಜೆಪಿ ಬಿಜೆಪಿ ಪರ ಶೇ. 39, ಜೆಡಿಎಸ್ ಪರ ಶೇ. 2 ಮತ್ತು ಇತರರು ಶೇ. 4 ರಷ್ಟು ಮಾತ್ರ ಮತದಾರರ ಬೆಂಬಲ ಪಡೆದಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಎಂ. ಬಿ. ಪಾಟೀಲ ಪರ ಮತದಾರರ ಒಲವೂ ಕೂಡ ಹೆಚ್ಚಾಗಿದ್ದು, ಬಿಜೆಪಿಯ ಜನಪ್ರೀಯತೆ ಕಳೆದ ಬಾರಿಗಿಂತ ಕಡಿಮೆಯಾಗುತ್ತಿರುವುದಕ್ಕೆ ಈ ಸಮೀಕ್ಷೆ ಫಲಿತಾಂಶ ಉದಾಹರಣೆಯಾಗಿದೆ.
ಆಧುನಿಕ ಭಗೀರಥ ಎಂದೇ ಹೆಸರಾಗಿರುವ ಎಂ. ಬಿ. ಪಾಟೀಲರು ಅಭಿವೃದ್ಧಿಯ ಹರಿಕಾರರರೂ ಆಗಿದ್ದಾರೆ. ಮಾತ್ರವಲ್ಲ ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡುತ್ತಿರುವುದು ಸರ್ವಜನರ ಪ್ರೀತಿ ಮತ್ತು ಒಲವು ಗಳಿಸಲು ಪ್ರಮುಖ ಕಾರಣವಾಗಿವೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಕಳೆದ ಬಾರಿ 30 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಎಂ. ಬಿ. ಪಾಟೀಲ ಅವರು, ಪ್ರತಿಪಕ್ಷದಲ್ಲಿದ್ದರೂ ಅಭಿವೃದ್ಧಿ ಕಾರ್ಯಗಳನ್ನು ಮುಂದವರೆಸಿರುವುದು ಜನಪ್ರೀಯತೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಅಲ್ಲದೇ, ಎಂ. ಬಿ. ಪಾಟೀಲರು ಈಗಾಗಲೇ ತಾವು ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂಗ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವುದಕ್ಕೆ ಈ ಸಮೀಕ್ಷೆಯ ಫಲಿತಾಂಶವೂ ಪೂರಕವಾಗಿರುವುದು ಗಮನಾರ್ಹವಾಗಿದೆ.