ವಿಜಯಪುರ: ವಿಜಯಪುರ ನಗರಾಭಿವೃದ್ಧಿ ಪ್ಕಾಧಿಕಾರ ನೂತನ ಅಧ್ಯಕ್ಷರನ್ನಾಗಿ ಪರಶುರಾಮ ಸಿಂಗ್ ವಿ. ರಜಪೂತ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ವಿಜಯಪುರ ನಗರಸಭೆ ಮಾಜಿ ಅಧ್ಯಕ್ಷರೂ ಆಗಿರುವ ಪರಶುರಾಮಸಿಂಗ್ ವಿ. ರಜಪೂತ್ ಈಗ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಾಗ ಹೊಸ ಜವಾಬ್ದಾರಿ ನೀಡಲಾಗಿದೆ.
ಅದರಂತೆ ನೂತನ ಸದಸ್ಯರನ್ನಾಗಿ ಅನೀಲ ಸಬರದ, ಮಡಿವಾಳ ಮರೆಪ್ಪ ಯಾಳವಾರ, ವೆಂಕಟೇಶ ಚಿದಂಬರರಾವ ಕುಲಕರ್ಣಿ, ಮಾಜಿ ಉಪಮೇಯರ್ ಲಕ್ಷ್ಮಿ ಬಾಗಪ್ಪ ಕನ್ನೊಳ್ಳಿ, ವಿಡಿಎ ಮಾಜಿ ಸದಸ್ಯ ರೇವಣಸಿದ್ದಪ್ಪ ಎಸ್. ಜಿರಲಿ ಅವರನ್ನು ನೇಮಕ ಮಾಡಲಾಗಿದೆ.
ಸರಕಾರದ ನಗರಾಭಿವೃದ್ಧಇಲಾಖೆಯ ಅಧೀನ ಕಾರ್ಯದರ್ಶಿ ಅವರು ಈ ನೇಮಕಾತಿಯ ಆದೇಶ ಹೊರಡಿಸಿದ್ದಾರೆ.