ಸ್ವ ಅಧ್ಯಯನಶೀಲರಾಗಿ ಸಾಮರ್ಥ್ಯ ಬೆಳೆಸಿಕೊಂಡು ಉತ್ತಮ ಶಿಕ್ಷಕರಾಗಿ- ಪ್ರೊ. ಯು. ಕೆ. ಕುಲಕರ್ಣಿ

ವಿಜಯಪುರ: ಸ್ವ ಅಧ್ಯಯನಶೀಲರಾಗಿ ಸಾಮರ್ಥ್ಯ ಬೆಳೆಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ
ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಯು. ಕೆ. ಕುಲಕರ್ಣಿ ಹೇಳಿದರು.

ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ, ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ‌‌ ಕೇಂದ್ರದಲ್ಲಿ ಸ್ನಾತಕೋತ್ತರ ಶಿಕ್ಷಣ ವಿಭಾಗದ ಮೊದಲನೇ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಮತ್ತು ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಕ ಅವರು ಮಾತನಾಡಿದರು.

ಉನ್ನತ ಶೈಕ್ಷಣಿಕ ಕ್ಷೇತ್ರವು ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆ ಎಂಬ ಮೂರು ಮಹತ್ವದ ಅಂಶಗಳನ್ನು ಒಳಗೊಂಡಿದೆ.  ಇಂದಿನ ದಿನಗಳಲ್ಲಿ ಕಂಡುಬರುತ್ತಿರುವ ಬಹುಮುಖ  ಬೋಧನೆ ಹಾಗೂ ಪಠ್ಯಕ್ರಮದಲ್ಲಿ ಆಗುತ್ತಿರುವ ಹೊಸ ಬದಲಾವಣೆಗಳನ್ನು ಎದುರಿಸುವುದು  ಭಾವಿ ಶಿಕ್ಷಕರಿಗೆ ಒಂದು ಸವಾಲಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.

ವರ್ಗಕೋಣೆಯಲ್ಲಿರುವ ಎಲ್ಲಾ ಮಟ್ಟದ ಮಕ್ಕಳಿಗೆ ಸೂಕ್ತ ವಿಷಯವಸ್ತು ಬೋಧಿಸುವ ಮೂಲಕ  ಅನುಭವಜನ್ಯ ಜ್ಞಾನ ನೀಡುವ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು  ‌ಶಿಕ್ಷಕರು ಮೈಗೂಡಿಸಿಕೊಳ್ಳಬೇಕಿದೆ.  ಪ್ರತಿ ವಿದ್ಯಾರ್ಥಿಗಳಲ್ಲಿಯೂ ಶಿಕ್ಷಕ ಒಬ್ಬ ಸಂಶೋಧಕನಾಗಿ, ಸಂಶೋಧನೆ ಮನೋಭಾವನೆ ಬೆಳೆಸಬೇಕು.  ಅಲ್ಲದೇ, ವರ್ಗ ಕೋಣೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಹಾಗೂ IQAC ಸಂಯೋಜಕ ಡಾ. ಎಂ. ಎಸ್ ಹಿರೇಮಠ ಮಾತನಾಡಿ, ಸ್ನಾತಕೋತ್ತರ ‌ಪದವಿಗೆ ತನ್ನದೆ ಆದ ಉತ್ತಮ ಸ್ಥಾನವಿದೆ.  ಈ ಪದವಿ  ವ್ಯಕ್ತಿಯ ಬೌದ್ಧಿಕ ಪ್ರೌಢಿಮೆ ಬೆಳೆಸಿ ವ್ಯಕ್ತಿತ್ವ ವಿಕಾಸವಾಗಲು ನೆರವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ. ವೈ. ಖಾಸನೀಸ ಕಾರ್ಯಕ್ರಮದ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌