ಬಿ ಎಲ್ ಡಿ ಇ ಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ ಪ್ರೋಜೆಕ್ಟ್ ಪ್ರದರ್ಶನ
ವಿಜಯಪುರ: ಬಿ ಎnd ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು ನವದೆಹಲಿಯ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISTE) ಸಹಯೋಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಮಿನಿ ಪ್ರೋಜೆಕ್ಟ್ ಪ್ರದರ್ಶನ ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಉಪಪ್ರಾಚಾರ್ಯ ಡಾ. ಜಿ. ವಿ. ಪಾಟೀಲ, ವಿಭಾಗದ ಮುಖ್ಯಸ್ಥ ಡಾ. ಆರ್. ಎನ್. ಜೀರಗಾಳ ಉದ್ಘಾಟಿಸಿದರು. ಸುಮಾರು 17 ಗುಂಪುಗಳು ಭಾಗವಹಿಸಿ […]
ಆರೋಗ್ಯ ಸೌಧ ಕಾಮಗಾರಿ ಪರಿಶೀಲನೆ ನಡೆಸಿದ ಜಿ. ಪಂ. ಸಿಇಓ ರಾಹುಲ್ ಶಿಂಧೆ
ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ, ಕಾರ್ಯಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಆರೋಗ್ಯ ಸೌಧ ಕಾಮಗಾರಿಯನ್ನು ವೀಕ್ಷಿಸಿದರು. ಹಳೆಯ ಕಟ್ಟಡ ನಿಯಮಾನುಸಾರ ನೆಲಸಮಗೊಳಿಸಬೇಕು. ಕಚೇರಿ ಆವರಣ, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೆಡಸ್ ರಕ್ತನಿಧಿ ಕೇಂದ್ರದಲ್ಲಿ 1000 ರಕ್ತದ ಯುನಿಟ್ ಗಳ ಸಂಗ್ರಹಣೆಯ ಸಾಮಥ್ರ್ಯವಿದ್ದು, ಈಗ 80 ರಿಂದ 100 ರಕ್ತದ ಯುನಿಟ್ ಗಳನ್ನು ಮಾತ್ರ ಪ್ರತಿ […]
ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಅಂತಾರಾಜ್ಯ ಚುನಾವಣೆ ಅಕ್ರಮಕ್ಕೆ ಕಡಿವಾಣ- ಡಾ. ದಾನಮ್ಮನವರ
ವಿಜಯಪುರ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗಡಿ ಭಾಗದ ವಿಜಯಪುರ ಜಿಲ್ಲೆಯಲ್ಲಿ ್ಲ ಅಂತಾರಾಜ್ಯ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಅಧಿಕಾರವಿದ್ದು, ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಅಕ್ರಮ ತಡೆಗಟ್ಟುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಸಾಂಗಲಿ ಹಾಗೂ ಸೋಲಾಪೂರ ಜಿಲ್ಲೆಗಳ ಕಂದಾಯ, ಜಿ ಎಸ್ ಟಿ, ಅಬಕಾರಿ, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಅಂತಾರಾಜ್ಯ […]
ಬಡ, ದಿನ, ದಲಿತ ಜನರಿಗೆ ಸರಕಾರ ಸಮರ್ಪಿತವಾಗಿದೆ- ಜನರ ಅಭಿವೃದಿಗಾಗಿ ಹಲವು ಯೋಜನೆ ಜಾರಿ ಮಾಡಿದೆ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ವಿಜಯಪುರ: ಬಡ, ದಿನ, ದಲಿತ, ಶೋಷಿತ, ವಂಚಿತರಿಗಾಗಿ ಯೋಚಿಸಿ, ಯೋಜನೆ ರೂಪಿಸಿ ಜಾರಿಗೊಳಿಸಿದ ನಮ್ಮ ಸರಕಾರ ಜನರಿಗೆ ಸಮರ್ಪಿತವಾದ ಸರಕಾರವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿ ಜನರ ಬದುಕು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಗರದ ಸೈನಿಕ ಶಾಲೆ ಆವರಣದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ […]
ಕಾಂಗ್ರೆಸ್, ಪಾಕಿಸ್ತಾನದ ಭಾಷೆಗಳು ಒಂದೇ ಆಗಿವೆ- ತುಷ್ಠಿಕರಣಕ್ಕಾಗಿ ಎಸ್ ಡಿ ಪಿ ಐ ಪಿ ಎಫ್ ಐ ಜೊತೆ ಒಳ ಹೊಂದಾಣಿಕೆ ನಡೆಯುತ್ತಿದೆ- ಪ್ರಹ್ಲಾದ ಜೋಶಿ
ವಿಜಯಪುರ: ಕಾಂಗ್ರೆಸ್ಸಿನವರಿಗೆ ವಿದೇಶಿ ಶಕ್ತಿಗಳ ಮೇಲೆ ಬಹಳ ವಿಶ್ವಾಸವಿದೆ. ಅದಕ್ಕಾಗಿ ರಾಹುಲ ಗಾಂಧಿ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅದೇ ರೀತಿ ಕಾಂಗ್ರೆಸ್ ಪಾರ್ಟಿಯವರು ಆರ್ಟಿಕಲ್ 370 ತೆಗೆದಾಗ ಪಾಕಿಸ್ತಾನ ಮತ್ತು ಅವರು ಕರಾಳ ದಿನ ಎಂದು ಹೇಳಿದ್ದರು. ಪ್ರಜಾಪ್ರಭುತ್ವದಲ್ಲಿ ಮೋದಿ ಎಲೆಕ್ಟೆಡ್ ಲೀಟರ್. ಇವರಂಗ ಸೆಲೆಕ್ಟೆಡ್ ಲೀಟರ್ ಅಲ್ಲ. ಸೆಲೆಕ್ಟೆಡ್ ಲೀಡರ್ […]
ಬದುಕು ಕಟ್ಟಿಕೊಟ್ಟ ನಾಯಕನ ಕಂಚಿನ ಪ್ರತಿಮೆ ನಿರ್ಮಿಸಿ ಕೃತಜ್ಞತೆ ಸಲ್ಲಿಸಿದ ಸಂಗಾಪುರ ಎಸ್. ಎಚ್. ಗ್ರಾಮಸ್ಥರು
ವಿಜಯಪುರ: ಜನಪ್ರತಿನಿಧಿಗಳು ಎಂ. ಬಿ. ಪಾಟೀಲ ಅವರ ಮಾದರಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ಈ ನಾಡಿನಲ್ಲಿ ಬರ ಎಂಬುದು ಇರುವುದಿಲ್ಲ ಎಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಎರೆ ಹೊಸಹಳ್ಳಿ ಶ್ರೀಮಹಾಯೋಗಿ ವೇಮನ ಸಂಸ್ಥಾನಮಠದ ಶ್ರೀ ವೇಮನಾನಂದ ಮಹಾಸ್ವಾಮೀಜಿ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಆಧುನಿಕ ಭಗೀರಥ, ಜಲಕ್ರಾಂತಿ ಪುರುಷ, ಡಾ. ಎಂ. ಬಿ. ಪಾಟೀಲ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮರ […]