ವಿಜಯಪುರ: ಬಿ ಎnd ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು ನವದೆಹಲಿಯ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISTE) ಸಹಯೋಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಮಿನಿ ಪ್ರೋಜೆಕ್ಟ್ ಪ್ರದರ್ಶನ ಆಯೋಜಿಸಿದ್ದರು.
ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಉಪಪ್ರಾಚಾರ್ಯ ಡಾ. ಜಿ. ವಿ. ಪಾಟೀಲ, ವಿಭಾಗದ ಮುಖ್ಯಸ್ಥ ಡಾ. ಆರ್. ಎನ್. ಜೀರಗಾಳ ಉದ್ಘಾಟಿಸಿದರು.
ಸುಮಾರು 17 ಗುಂಪುಗಳು ಭಾಗವಹಿಸಿ ಕೃಷಿ, ವಿಜ್ಞಾನ, ಪರಿಸರ, ಸುಸ್ಥಿರತೆ ಮತ್ತು ಹೆಚ್ಚಿನ ಕ್ಷೇತ್ರದಲ್ಲಿ ತಮ್ಮ ನವೀನ ಯೋಜನೆಗಳನ್ನು ಪ್ರದರ್ಶಿಸಿದರು. ನಾನಾ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ ಉತ್ತಮ ಸಲಹೆ ಸೂಚನೆಗಳನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮವನ್ನು ಉಪಪ್ರಾಚಾರ್ಯ ಡಾ. ಜಿ. ವಿ. ಪಾಟೀಲ ಹಾಗೂ ಪ್ರಥಮ ವರ್ಷದ ಸಂಯೋಜಕ ಡಾ. ಕೈಲಾಸ ಚಡಚಣ ಮೌಲ್ಯಮಾಪನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರೊ. ಎಸ್. ಕೆ. ಸಜ್ಜನ, ಪ್ರೊ. ಎಸ್. ಆರ್. ದೊಡ್ಡಿ, ಪ್ರೊ. ಪಿ. ಎಲ್. ಪುಠಾಣಿ, ವಿಭಾಗದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.