ವಿಜಯಪುರ: ಕಾಂಗ್ರೆಸ್ಸಿನವರಿಗೆ ವಿದೇಶಿ ಶಕ್ತಿಗಳ ಮೇಲೆ ಬಹಳ ವಿಶ್ವಾಸವಿದೆ. ಅದಕ್ಕಾಗಿ ರಾಹುಲ ಗಾಂಧಿ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅದೇ ರೀತಿ ಕಾಂಗ್ರೆಸ್ ಪಾರ್ಟಿಯವರು ಆರ್ಟಿಕಲ್ 370 ತೆಗೆದಾಗ ಪಾಕಿಸ್ತಾನ ಮತ್ತು ಅವರು ಕರಾಳ ದಿನ ಎಂದು ಹೇಳಿದ್ದರು. ಪ್ರಜಾಪ್ರಭುತ್ವದಲ್ಲಿ ಮೋದಿ ಎಲೆಕ್ಟೆಡ್ ಲೀಟರ್. ಇವರಂಗ ಸೆಲೆಕ್ಟೆಡ್ ಲೀಟರ್ ಅಲ್ಲ. ಸೆಲೆಕ್ಟೆಡ್ ಲೀಡರ್ ಗಳು ಎಲೆಕ್ಟೆಡ್ ಲೀಡರ್ ಅಂದರೆ ಜನ ಪ್ರೀತಿಯಿಂದ ಎಲೆಕ್ಟ್ ಮಾಡಿದವರ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾರ್ಟಿಯನ್ನು ದೇಶದಲ್ಲಿ ಜನ ತಿರಸ್ಕಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತುಷ್ಠಿಕರಣದ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್ ಈಗ ಎಸ್ ಡಿ ಪಿ ಐ, ಪಿ ಎಫ್ ಐ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಸೋಲಿನ ಭಯದಿಂದ ಯಾವುದೇ ಶಕ್ತಿ ಇರಲಿ, ಅದು ಸಮಾಜಕ್ಕೆ ಹಿತವಾಗರಲಿ ಅಥವಾ ವಿರುದ್ಧವಾಗಿರಲಿ ಅಂಥ ಶಕ್ತಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವಿನಂತಿಯ ಮೇರೆಗೆ ನಾವು ಭಾರತೀಯ ಜನತಾ ಪಕ್ಷದ ವಿರುದ್ಧ ಸ್ಪರ್ಧೆ ಮಾಡಲ್ಲ ಎಂದು ಆ ಸಂಘಟನೆಗಳ ಮುಖಂಡರು ಹೇಳಿದ್ದಾರೆ ಎಂದು ಸಚಿವುರ ಆರೋಪಿಸಿದರು.
ಈಗ ಎಸ್ ಡಿ ಪಿ ಐ ಅಧ್ಯಕ್ಷರೂ ಕ್ಲೀಯರ್ ಮಾಡಿದ್ದಾರೆ. ಕಾಂಗ್ರೆಸ್ ವಿನಂತಿ ಮೇರೆಗೆ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಲು ವಿರುದ್ಧ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇವೆ. ಏಕೆಂದರೆ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂದು ಹೇಳಿದ್ದಾರೆ. ಪಿ.ಎಫ್.ಐ. ಎಸ್.ಡಿ.ಪಿ.ಐ ಬ್ಯಾನ್ ಮಾಡಲು ಜಗತ್ತಿನನಲ್ಲಿ ಮತ್ತು ಜಾಗತೀಕ ವೇದಿಕೆಗಳಲ್ಲಿ ಭಾರತ ಪಾಕಿಸ್ತಾನ ಮತ್ತು ಪಾಕಿಸ್ತಾನ ಪೋಷಿತ ಉಗ್ರವಾದವನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಅವರ ಜೊತೆ ಒಳಒಪ್ಪಂದ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ ಅವರು, ಭಾರತದ ಸಂವಿಧಾನ ಇಕ್ಕಟ್ಟಿನಲ್ಲಿ ಸಿಕ್ಕಿದೆ ಎಂದು ವಿದೇಶದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗಾಗಲೇ ನಾನು ಹೇಳಿರುವಂತೆ ಕಾಂಗ್ರೆಸ್ ಪಕ್ಷಕ್ಕೆ ವಿದೇಶ ಮತ್ತು ವಿದೇಶ ಶಕ್ತಿಗಳ ಮೇಲೆ ಬಹಳ ವಿಶ್ವವಾಸವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ ಅವರು, ಟಿಪ್ಪು ಜಯಂತಿ ಮಾಡುತ್ತಾರೆ. ಏಕೆಂದರೆ ಟಿಪ್ಪು ಭಾರತದ ಮೇಲೆ ಎರಗಿ ಬರಬೇಕು ಎಂದು ಅಪಘಾತನಿಸ್ತಾನಕ್ಕೆ ಪತ್ರ ಬರೆದಿದ್ದ ಎಂದು ಅವರು ಹೇಳಿದರು.
ನಮ್ಮದು ಪ್ರಜಾಸತ್ತಾತ್ಮಕ ಸ್ವತಂತ್ರ ಗಣರಾಜ್ಯವಾಗಿದೆ. 35 ವರ್ಷದ ನಂತರ ಯಾವುದೋ ಒಂದು ಪಾರ್ಟಿಗೆ ಪೂರ್ಣ ಬಹುಮತ ಬಂದಿದ್ದರೆ ಅದು ಬಿಜೆಪಿಗೆ ಮಾತ್ರ. ಕಾಂಗ್ರೆಸ್ ಹೊರತು ಪಡಿಸಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೋದಿ ಅವರ ನೇತೃತ್ವದಲ್ಲಿ ಬಹುಮತ ಬಂದಿದೆ. ಇದರರ್ಥ ಮತದಾರರು ಕಾಂಗ್ರೆಸ್ ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.
ರಾಹುಲ ಗಾಂಧಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ ಎಂಬ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ? ಅವರು ಏನು ಸಲಹೆ ಮಾಡುತ್ತಾರೆ? ಅವರು ಸಲಹೆ ಮಾಡಿದ ಮತ್ತು ತಾವೇ ಸ್ಪರ್ಧಿಸಿದ ಉತ್ತರ ಪ್ರದೇಶದಲ್ಲಿ ಸೋತು ಹೋಗಿದ್ದಾರೆ. ಅಮೇಥಿಯಲ್ಲಿ ಇವರು ತಲೆತಲಾಂತರಗಳಿಂಗ ಸ್ಪರ್ಧಿಸುತ್ತಿದ್ದಾರೆ. ಇವರು ಸೋತು ಹೋಗಿದ್ದಾರೆ. ಹೀಗಾಗಿ ತಮ್ಮ ಅನುಭವದಿಂದ ಸಿದ್ಧರಾಮಯ್ಯ ಅವರಿಗೆ ಸಲಹೆ ನೀಡಿರಬಹುದು ಎಂದು ಅವರು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಎಸ್ಪಿ ಎಚ್. ಡಿ. ಆನಂದಕುಮಾರ ಮುಂತಾದವರು ಉಪಸ್ಥಿತರಿದ್ದರು.