ಕಾಲಜ್ಞಾನದ ಹೇಳಿಕೆಗೆ ಹೆಸರಾದ ಕತ್ನಳ್ಳಿ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭ- ಜ್ಞಾನ ದೀಪೋತ್ಸವ ಈ ಬಾರಿಯ ವಿಶೇಷ ಶ್ರೀ ಶಿವಯ್ಯ ಸ್ವಾಮೀಜಿ

ವಿಜಯಪುರ: ಚಹಾ ಮಾರುವವ ದೇಶದ ಪ್ರಧಾನಿಯಾಗುತ್ತಾನೆ.  ವೈದ್ಯರೂ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ರೋಗ ಬಾಧಿಸುತ್ತೆ ಸೇರಿದಂತೆ ನಾನಾ ಭವಿಷ್ಯಗಳನ್ನು ಹೇಳುವ ಮೂಲಕ ಖ್ಯಾತವಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಶ್ರೀ ಶಿವಯ್ಯ ಸ್ವಾಮೀಜಿ, ಈ ಬಾರಿಯ ಜಾತ್ರೆಯ ವಿಶೇಷತೆಗಳನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ.

ಮಾ. 21 ರಿಂದ 25ರ ವರೆಗೆ ಜಾತ್ರೆ ನಡೆಯಲಿದೆ.  ಈ ಬಾರಿಯ ಜಾತ್ರೆಯಲ್ಲಿ ಜ್ಞಾನ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಇಡೀ ಮನುಕುಲದ ಜ್ಞಾನವನ್ನು ಅಜ್ಞಾನದಿಂದ ಸುಜ್ಞಾನದವರೆಗೆ ಕೊಂಡೊಯ್ಯಲಿದೆ ಎಂದು ತಿಳಿಸಿದ್ದಾರೆ.

ದೀಪದಲ್ಲಿ ಒಂದು ವಿಶೇಷವಿದೆ.  ಅದು ಅರಮನೆ ಇರಲಿ.  ಗುರುಮನೆ ಇರಲಿ. ಭಾಗ್ಯವಂತನ ಮನೆಯಿರಲಿ.  ಬಡವನ ಮನೆ ಇರಲಿ.  ಯಾರ ಮನೆಯಿದ್ದರೂ ಅದು ನೀಡುವ ಬೆಳಕು ಸಮನಾಗಿರುತ್ತದೆ.  ಈ ಸದಾಶಿವ ಮಠದಿಂದ ಪ್ರಜ್ವಲವಾಗುತ್ತದೆ.  ಪ್ರತಿಯೊಬ್ಬರು ಇಲ್ಲಿ ಬಂದು ದೀಪ ಹಚ್ಚಿ, ಅದನ್ನು ತಮ್ಮ ಮನೆಗೆ ಒಯ್ದು, ಅವರ ಮನೆ, ಮನ, ಜ್ಞಾನ, ಭಕ್ತಿ ಬೆಳೆಯಲಿ.  ಅಜ್ಞಾನ ಕತ್ತಲು ಹೋಗಿ, ಸುಜ್ಞಾನದ ಬೆಳಕು ಎಲ್ಲರಲ್ಲೂ ಕಾಣಲಿ ಎಂಬ ಉದ್ದೇಶದಿಂದ ಇಲ್ಲಿ ದೀಪೋತ್ಸವ ನಡೆಯುತ್ತದೆ.  ದೀಪ ಹಚ್ಚ ಮನುಷ್ಯನಿಗೆ ಒಂದು ಹುಚ್ಚು ಬೇಕು.  ಆ ಹುಚ್ಚು ಮತ್ತೊಬ್ಬರು ಮೆಚ್ಚುವಂಥದ್ದಿರಬೇಕು.  ಅದೇ ರೀತಿ ದೀಪೋತ್ಸವದ ಉದ್ದೇಶ ಪ್ರತಿಯೊಬ್ಬರು ಮನೆ, ಮನ ಬೆಳಗಲಿ ಎಂಬುದಾಗಿದೆ.  ವಿಶೇಷವಾಗಿ ಎಲ್ಲ ಭಕ್ತರು ತಮ್ಮ ಸಹಕುಟುಂಬ, ಸಹಪರಿವಾರದೊಡನೆ ಇಲ್ಲಿ ಕಾರ್ಯಕ್ರಮಕ್ಕೆ ಬಂದು ದೀಪ ಬೆಳಗಿಸಿ, ಆ ಬೆಳಕನ್ನು ತಾವು ಪಡೆದುಕೊಂಡು, ಪ್ರಸಾದ ಮಾಡಿ ತಮ್ಮ ಮನೆಗೆ ಹೋಗಿ ಅಖಂಡವಾಗಿ ತಮ್ಮ ಜಾತ್ರೆ ಮುಗಿಯುವವರೆಗೆ ತಮ್ಮ ಮನೆಯಲ್ಲಿ ದೀಪ ಬೆಳಗಿಸಬೇಕು ಎಂಬುದು ಸದಾಶಿವನ ಉದ್ದೇಶವಿದೆ ಎಂದು ಅವರು ಹೇಳಿದರು.

ಆ ಸದಾಶಿವನ ಇಚ್ಛೆಯನ್ನು ತಾವೆಲ್ಲರೂ ಸದಿಚ್ಛೆಯಿಂದ ಮಾಡಬೇಕು.  ಮನುಷ್ಯ ಜೀವನದಲ್ಲಿ ಮನುಷ್ಯನನ್ನು ಹಚ್ಚುವ ಕೆಲಸ ಇರಬೇಕು ಹೊರತು ಚುಚ್ಚುವ ಕೆಲಸ ಇರಬಾರದು.  ಅದು ಜ್ಞಾನ ದೀಪ ಹಚ್ಚು ಕೆಲಸ ನಡೆಯಲಿದೆ.  ಪ್ರತಿಯೊಬ್ಬರು ಈ ಜ್ಞಾನ ದೀಪೋತ್ಸವದ ಪ್ರತಿದಿನದ ಕಾರ್ಯಕ್ರಮದಲ್ಲಿ ಪಾಲ್ಗೋಂಡು, ತಮ್ಮ ತನು, ಧನ, ಮನದಿಂದ ಸೇವೆಯನ್ನು ಮಾಡಿ ಉತ್ಸಾಹದಿಂದ ಪಾಲ್ಗೋಳ್ಳುವದರಿಂದ ತಮ್ಮದೂ ಸಂಸಾರದ ಉತ್ಸವ ಬಹಳ ವಿಜೃಂಭಣೆಯಿಂದ ಆಗಲಿದೆ.  ಯಾವುದೇ ಕೊರತೆ ಬರುವುದಿಲ್ಲ ಎಂದು ಅವರು ಸೂಚ್ಯವಾಗಿ ಜನರು ಯಾವ ರೀತಿ ನಡವಳಿಕೆ ತೋರಬೇಕು ಎಂಬುದರ ಕುರಿತು ಕಿವಿಮಾತು ಹೇಳಿದ್ದಾರೆ.

ಕತ್ನಳ್ಳಿ ಶ್ರೀ ಸದಾಶಿವ ಮಠಾಧೀಶರಾದ ಶ್ರೀ ಶಿವಯ್ಯ ಸ್ವಾಮೀಜಿ

ಎಲ್ಲ ಕಾರ್ಯಕ್ರಮಗಳನ್ನು ಸರಳವಾಗಿ ಮಾಡಲಾಗುವುದು.  ಈ ಕತ್ನಳ್ಳಿ ಜಾತ್ರೆ ವಿಶೇಷವಾಗಿ ನಡೆಯುತ್ತದೆ.  ಇಲ್ಲಿ ಅಡುಗೆ ಮಾಡುವವರು ಭಕ್ತರು.  ನೀಡವವರು ಭಕ್ತರು.  ಊಟ ಮಾಡುವವರು ಭಕ್ತರು.  ಇನ್ನುಳಿದ ಎಲ್ಲ ಸೇವೆಯನ್ನು ಪ್ರೀತಿ ಪೂರ್ವಕವಾಗಿ, ಭಕ್ತಿ ಪೂರ್ವಕವಾಗಿ ಮಾಡುವವರ ಭಕ್ತರು.  ಇಲ್ಲಿ ಎಲ್ಲರೂ ಭಕ್ತರೇ ಇರುವುದರಿಂದ ಇಲ್ಲಿ ವ್ಯತ್ಯಾಸ ಎನ್ನುವುದು ಇಲ್ಲ.  ಬಬಲಾದಿ ಮಠ ಜಾತ್ಯತೀತ, ಪಕ್ಷಾತೀತ, ವರ್ಣಾತೀತ ಮಠ.  ಇಲ್ಲಿ ಯಾವುದೇ ಭೇದವಿಲ್ಲ.  ಎಲ್ಲ ಅಭೇದದಿಂದ ಕೂಡಿರುವ ಜಾತ್ರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಇಲ್ಲಿ ಶಿರಹಟ್ಟಿ ಫಕೀರೇಶ್ವರ ಪುರಾಣ ವಿಶೇಷವಾಗಿ ನಡೆದುಕೊಂಡು ಬಂದಿದೆ.  ಶಿರಹಟ್ಟಿ ಫಕೀರೇಶ್ವರರು ತಮ್ಮ ಜೀವಾವಧಿಯಲ್ಲಿ ಪ್ರಯಾಣ ಮಾಡುತ್ತ, ತಮ್ಮ ಬಳಿ ಭಕ್ತರು ಬಂದರೆ, ಹೇಗೆ ಬಬಲಾದಿಯವರು ದೇವಭಕ್ತ ಗಣ ತಂದ, ದಯಾ ಧರ್ಮದಿಂದ, ಧರೆಗಿಳಿದು ಗುರುಪ ಬಂದ, ನಡದೇಹದಿಂದ ನಾನಾ ವರ್ಣದ ಬೀಜವ ತಂದ, ನರಜನ್ಮ ಅಪರೂಪ ನೋಡೆಂದ.  ಈ ಕರ್ಮದ ಕಲಿಗೆ ಮರ್ಮದ ಲೆಕ್ಕ ನಿರ್ಮಲದಲ್ಲಿ ತೂಗಿ ನೋಡುವೆನೆಂದ.  ಅವನ ಭಕ್ತರು ನಿರ್ಮಲರಾಗಿ ಇರಬಾರದು.  ನಿರ್ಮಲವಾಗಿ ಇರಬೇಕು ಎಂಬುದು ಸದಾಶಿವದ ಪದ ಹೇಳುತ್ತಿದ್ದರು.  ಅದೇ ರೀತಿ ಫಕೀರೇಶ್ವರರು ತಮ್ಮ ಜೀವನದಲ್ಲಿ ಬಂದ ಭಕ್ತರಿಗೆ ಒಂದು ಮಾತು ಹೇಳುತ್ತಿದ್ದರು.  ಮಂದಿರ- ಮಸೀದಿ ಅಲಗ್ ಹೈ.  ದೋನೋ ಕಾ ರಾಸ್ತಾ ಏಕ ಹೈ.  ರಾಮ- ರಹೀಮ ನಾಮ ಅಲಗ್ ಹೈ.  ದೋನೋ ಕಾ ಖುದಾ ಏಕ ಹೈ.  ಫಕೀರರಾಗಿ ತಿರುಗಾಡಿರಿ.  ಪಾಖಂಡರಾಗಿ ತಿರುಗಾಡಬೇಡಿ ಎನ್ನುತ್ತಿದ್ದರು.  ಫಕೀರ ಎಂಬ ಶಬ್ದದಲ್ಲಿ ವಿಶೇಷ ಅರ್ಥವಿದೆ.  ಅಂಥ ಪುಣ್ಯಾತ್ಮನ ಪುರಾಣ ನಡೆಸುಕೊಡಬೇಕಾದರೆ ಪ್ರತಿವರ್ಷ ಮಾಡುವ ಎಲ್ಲ ಕಾರ್ಯಕ್ರಮಗಳ ಜೊತೆ ಈ ವರ್ಷ ಒಂದು ವಿಶೇಷ ಕಾರ್ಯಕ್ರಮದಲ್ಲಿ ಈ ಕತ್ನಳ್ಳಿ ಸದಾಶಿವನ ಸರ್ವ ಸದ್ಭಕ್ತರು ಇಟ್ಟುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಾ. 21 ರಿಂದ 25ರ ವರೆiz ಜಾನುವಾರು ಜಾತ್ರೆ, ಕೃಷಿ ಮೇಳ, ಕೆಸರಿನಲ್ಲಿ ಮನುಷ್ಯರ ಓಟ, ಜ್ಞಾನ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ.  ಮಾರ್ಚ್ 22ಕ್ಕೆ ಕೃತ ಗದ್ದುಗೆ ರುದ್ರಾಭೀಷೇಕ, ಕುಂಬಾಭೀಷೆಕ, ರಸಪ್ರಶ್ನೆ ಸ್ಪರ್ಧೆ ನಡೆಯಲಿವೆ.  ಮಾ. 23ಕ್ಕೆ ಪಲ್ಲಕ್ಕಿ ಉತ್ಸವ, ಉಚಿತ ಆರೋಗ್ಯ ಮೇಳ, ರಥೋತ್ಸವ ನಡೆಯಲಿದೆ.  ಮಾ. 24ಕ್ಕೆ ಸರಳ ಸಾಮೂಹಿಕ ವಿವಾಹ, ಕಾರ್ಣಿಕನ ಹೇಳಿಕೆ ಕಾರ್ಯಕ್ರಮ ನಡೆಯಲಿದೆ.  ಮಾ. 25ಕ್ಕೆ ಭಾರ ಎತ್ತುವ ಸ್ಪರ್ಧೆ, ಸುಪ್ರಸಿದ್ಧ ಜಂಗಿ ಕುಸ್ತಿಗಳು, ಜಾನುವಾರು‌ ಗಳಿಗೆ ಪ್ರಶಸ್ತಿ, ಬಹುಮಾನ ವಿತರಣೆ ನಂತರ ಚಿತ್ರ- ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಶಿವಯ್ಯ ಸ್ವಾಮೀಜಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಜಯ ಜೋಶಿ ಸೇರಿದಂತೆ ಆಡಳಿತ ಸದಸ್ಯರು ಉಪಸ್ಥಿ ತರಿದ್ದರು.

Leave a Reply

ಹೊಸ ಪೋಸ್ಟ್‌