ವಿಜಯಪುರ: ಸರಕಾರಗಳು ದೇಶದ ಭವಿಷ್ಯ ರೂಪಿಸುವ ಎಲ್ಲ ಪದವೀಧರ ಶಿಕ್ಷಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ.
ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗ ಯಾವುದೇ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರನ್ನು ನೇಕವಾದಿ ನೇಮತ ಮಾಡಿಕೊಳ್ಳುವುದಿಲ್ಲ. ಸರಕಾರ ಅನುಮತಿ ನೀಡಿದ ನಂತರ ಮಾರ್ಗಸೂಚಿಯಂತೆ ಎಲ್ಲ ಪ್ರಕ್ರಿಯೆ ನಡೆಯುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಕೈಯ್ಯಲ್ಲಿ ನೇರವಾಗಿ ನೇಮಕ ಮಾಡಿಕೊಳ್ಳಲು ಬರುವುದಿಲ್ಲ. ಹೀಗಾಗಿ ಸರಕಾರ ಮತ್ತು ಎಲ್ಲರೂ ಅಧಿಕಾರಿಗಳೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಪ್ರತಿವರ್ಷ ಶಿಕ್ಷಣ ಪದವಿ ಪಡೆಯುವ ಎಲ್ಲರಿಗೂ ಉದ್ಯೋಗ ದೊರಕುವಂತಾಗಬೇಕು ಎಂದು ಅವರು ಹೇಳಿದರು.
ಸರರಕಾರಗಳು ಅನೇಕ ಮಹನೀಯರ ಜಯಂತಿಗಳನ್ನು ಆಚರಿಸುತ್ತದೆ. ಈ ಮಹನೀಯರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಮತ್ತು ಜಯಂತಿ ಆಚರಣೆಯ ಮಹತ್ವದ, ಅವರ ಆದರ್ಶ ಪಾಲನೆಯ ಕುರಿತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಜಗತ್ತಿಗೆ ಜ್ಞಾನದಾಸೋಹ ನೀಡಿದವರು ಬಸವನಾಡಿನ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಅವರು ಈಗ ನಮ್ಮೊಂದಿಗೆ ಇಲ್ಲ. ಆದರೆ, ಅವರು ನೀಡಿರುವ ಆಧ್ಯಾತ್ಮಕ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿಬೇಕು. ಮಾತ್ರವಲ್ಲ ಮುಂದಿನ ಪೀಳಿಗೆಗಳಿಗೂ ಅವುಗಳನ್ನು ತಿಳಿಹೇಳುವ ಕೆಲಸ ಮಾಡಬೇಕು. ಈ ಮೂಲಕ ಅವರ ಹೆಸರನ್ನು ಉಳಿಸುವ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಪಠ್ಯದ ಜೊತೆ ಪಠ್ಯದ ಹೊರತಾದ ಚಟುವಟಿಗೆಳಿಗೂ ಆದ್ಯತೆ ನೀಡಬೇಕು
ಇದೇ ವೇಳೆ, ಪಠ್ಯದ ಹೊರತಾದ ಚಟುವಟಿಕೆಗಳ ಕುರಿತು ಮಾತನಾಡಿದ ಅವರು, ಇಂದು ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಮಕ್ಕಳು ಮತ್ತು ಯುವಕರು ಹೆಚ್ಚು ವಾಲುತ್ತಿದ್ದಾರೆ. ನಾನೂ ಬಾಲ್ಯದಲ್ಲಿ ಭರತ ನಾಟ್ಯ ಮಾಡು್ತ್ತಿದ್ದೆ. ಅಂದು ಕಲಾ ಮಾಧ್ಮಯ ಸಂಸ್ಥೆಯಿಂದ ಸುಮಾರು ನಾಟಕ, ಭರತ ನಾಟ್ಯ, ಕಥಕ್ ನೃತ್ಯವನ್ನು ಕಲಿಸಲಾಗುತ್ತಿತ್ತು. ಮ್ಯಾಗೇರಿ ಸರ್ ನನಗೆ ಭರತ ನಾಟ್ಯ ಕಲಿಸಿದರು. ಈಗ ಇಂಥ ಕಲೆಗಳನ್ನು ಕಲಾ ಶಿಕ್ಷಕರು ಹೆಣ್ಣು, ಗಂಡು ಎಂಬ ಯಾವುದೇ ಲಿಂಗಭೇದ ಮಾಡದೇ ಉಳಿಸಿ ಬೆಳೆಸಬೇಕು. ಈ ಮೂಲಕ ಭಾವಿ ಶಿಕ್ಷಕರು ಭಾರತೀಯ ಸಂಸ್ಕೃತಿ ಮತ್ತು ಕಲೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ನಿಮ್ಮ ಎಂ. ಬಿ. ಪಾಟೀಲರು ಜಿಲ್ಲೆಯಲ್ಲಿ ಜಲಕ್ರಾಂತಿ ಮಾಡಿ, ಅಭಿವದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವರ ತಂದೆ- ತಾಯಿಯ ಆಶೀರ್ವಾದ, ಮತಕ್ಷೇತ್ರದ ಜನರ ಸಂಪೂರ್ಣ ಬೆಂಬಲ ಕಾರಣ. ಅವರಿಂದಾಗಿ ನಾವೂ ಕೂಡ ಜನಸೇವೆ ಮಾಡಲು ಅನುಕೂಲವಾಗಿದೆ ಎಂದು ಆಶಾ ಎಂ. ಪಾಟೀಲ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಮಖಂಡಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಜಂಟಿ ನಿರ್ದೇಶಕ ಬಿ. ಎಚ್. ಗೋನಾಳ ಮಾತನಾಡಿ, ಬಿ.ಎಲ್.ಡಿ.ಇ ಸಂಸ್ಥೆಯಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಧಿನದಲ್ಲಿರುವ ಎಲ್ಲ ಕಾಲೇಜುಗಳಲ್ಲಿ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಿಗಿಂತಲೂ ಹೆಚ್ಚು ಗುಣಮಟ್ಟದ ಕೆಲಸ ಮಾಡಿದ್ದಾರೆ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ಜನ ಎಂ. ಬಿ. ಪಾಟೀಲರ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ನೀರಾವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಗುಣಮಟ್ಡದ ಕೆಲಸ, ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತಲೂ ಹೆಚ್ಚು ಗುಣಮಟ್ಟದ ಕೆಲಸ ಮಾಡಿದ್ದಾರೆ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರನ್ನಿಡುವ ಮೂಲಕ ಪುಣ್ಯದ ಕೆಲಸ ಮಾಡಿದ್ದಾರೆ. ತಾವೆಲ್ಲರೂ ಕೆಲಸಕ್ಕೆ ಸೇರಿದ ಮೇಲೆ ಆದರ್ಶ ಶಿಕ್ಷಕರಾಗಿ, ತ್ಯಾಗ ಮನೋಭಾವದಿಂದ ಕೆಲಸ ಮಾಡಬೇಕು. ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ ಮಾಡಿ ಉನ್ನತ ಹುದ್ದೆಗೇರಬೇಕು. ಉಪನ್ಯಾನಸಕ, ಬಿಇಓ, ಡಿಡಿಪಿಐ, ಪ್ರಿನ್ಸಿಪಾಲ್ ಆಗಬಹುದು ಅಧಿಕಾರಿಯೂ ಆಗಬೇಕು. ತರಗತಿಗಳಲ್ಲಿ ನಿರ್ಭೀತಿಯಿಂದ ಪಾಠ ಮಾಡಬೇಕು. ಯಾವುದನ್ನೂ ಸೀಮಿತ ಗುರಿ ಇಟ್ಟುಕೊಳ್ಳದೇ ದೊಡ್ಡ ಗುರಿ ಇಟ್ಡುಕೊಂಡು ಸ್ಪರ್ಧಾತ್ಮಕ ಮನೋಭಾವನೆಯಿಂದ ಗುರಿ ತಲುಪಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಈಗ ಮೊಬೈಲ್ ಬಳಕೆ ಮ್ತತು ಸಾಮಾಜಿಕ ಜಾಲತಾಣಗಳ ಗೀಳು ಬಿಡಬೇಕು. ಪುಸ್ತಕಗಳನ್ನು ಓದಿದರೆ ಮಾತ್ರ ಸಮಾಜದಲ್ಲಿ ತಲೆ ಎತ್ತಿನೋಡುವಂಥ ಸಾಧನೆ ಮಾಡಲು ಸಾಧ್ಯ. ಟಿವಿ, ಮೊಬೈಲಿಗೆ ಹೆಚ್ಚಿನ ಗಮನ ನೀಡದೇ, ಪ್ರೀತಿಯಿಂದ ಸಂಬಂಧ ಉಳಿಸಿಕೊಳ್ಳಬೇಕು. ಉದ್ಯೋಗ, ಸಾಧನೆಯ ಹೆಸರಿನಲ್ಲಿ ಸಂಬಂಧ, ಸಂಸ್ಕಾರ ಮತ್ತು ಸಂಸ್ಕೃತಿ ನಿರ್ಲಕ್ಷ್ಯಿಸಬಾರದು. ಈಗ ಅವಿಭಕ್ತ ಕುಡುಂಬಗಳು ಹೆಚ್ಚಾಗಿ, ಸಿಂಗಲ್ ಪೇರೆಂಟ್ ವರೆಗೂ ಪರಿಸ್ಥಿತಿ ತಲುಪಿದೆ. ಹೀಗಾಗಿ ಹೆಚ್ಚಾಗುತ್ತಿರುವ ವೃದ್ಧಾಶ್ರಮಗಳು ಸಂಖ್ಯೆ ಕಡಿಮೆಯಾಗಬೇಕು. ವರ್ಷವಿಡೀ ಉತ್ತಮ ಚಟುವಟಿಕೆ ಆಯೋಜಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಹಿಂಜರಿಕೆ ಇರಬಾರದು. ತಾಯಿ, ತಂದೆಯರ ಋಣ ತೀರಿಸಲು ಚೆನ್ನಾಗಿ ಓದಬೇಕು. ಅವರ ಕನಸುಗಳನ್ನು ನನಸು ಮಾಡಿ ಯಶಸ್ವಿ ಜೀವನ ಸಾಗಿಸಿ ಎಂದು ಬಿ. ಎಚ್. ಗೋನಾಳ ಹೇಳಿದರು.
ಬಿ. ಎಲ್. ಡಿ. ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಬಿ.ಎಲ್.ಡಿ. ಇ ಸಂಸ್ಥೆಯಿಂದ ಪ್ರತಿವರ್ಷ ಅನೇಕ ಉದ್ಯೋಗಾವಕಾಶ ನೀಡಲಾಹುತ್ತಿದೆ. ಶಿಕ್ಷಣ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಬೇಕು. ನಮ್ಮೋಳಗಿನ ಸಾಧಕರಾದ ಎಂ. ಬಿ. ಪಾಟೀಲರು. ಅವರ ಸಾಧನೆ ನಮಗೆಲ್ಲರಿಗೂ ಪ್ರೇರಣೆಯಾಗಬೇಕು. ಅಭಿವೃದ್ಧಿ ಕಾರ್ಯಗಳಿಗೆ ಅವರು ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಅವರನ್ನು ಪ್ರತಿಬಾರಿ ಭೇಟಿ ಮಾಡಿದಾಗ ಒಂದೊಂದು ಹೊಸ ವಿಚಾರಗಳು, ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತಿದೆ. ಇಂದು ಶಿಕ್ಷಣ ಸ್ಥಿತಿ ದಯನೀಯವಾಗಿದೆ, ಅದನ್ನು ಮತ್ತೆ ಗತವೈಭವಕ್ಕೆ ತರಬೇಕಿದೆ ಎಂದು ಅವರು ಹೇಳಿದರು.
ಎಸ್. ಎಸ್. ಕಾಲೇಜು ಆವರಣದ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ ಮಾತನಾಡಿ, ಜೆ.ಎಸ್. ಎಸ್. ಕಾಲೇಜು ಬೋಧನೆ ಮತ್ತು ಸಾಧನೆಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಬಿ. ಎಲ್.ಡಿ.ಇ ಸಂಸ್ಥೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈ ಆವರಣ ಅಭಿವೃದ್ಧಿಗೆ ಎಂ. ಬಿ. ಪಾಟೀಲ ಮತ್ತು ಆಶಾ ಎಂ. ಪಾಟೀಲ ಅವರೇ ಕಾರಣ. ನಮ್ಮ ಸಕಲ ಚಟುವಟಿಕೆಗಳಿಗೆ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಅಷ್ಟೇ ಅಲ್ಲ, ನನ್ನಂಥ ಹಲವಾರು ಜನರಿಗೆ ಅವರು ಪೋಷಕರ ಸ್ಥಾನದಲ್ಲಿ ನಿಂತು ಪ್ರೋತ್ಸಾಹ ನೀಡಿದ್ದಾರೆ. ವೈದ್ಯಲೋಕದ ವಜ್ರ ಡಾ. ಸಿ. ಆರ್. ಬಿದರಿಯರು ಎಲ್ಲರ ಸರ್ವಾಂಗೀಣ ಅಭಿವೃದ್ಧಿಗೆ ಆಶ್ರಯ ನೀಡಿದ್ದಾರೆ. ವಿಜಯಪುರ ಜಿಲ್ಲೆಯನ್ನು ಜಲಜಿಲ್ಲೆಯನ್ನಾಗಿ ಮಾಡಿದ್ದಾರೆ. ತಾವೆಲ್ಲರೂ ಮಾದರಿ ವಿದ್ಯಾರ್ಥಿಗಳನ್ನು ತಯಾರಿಸುವ ಗುರುಗಳಾಗಿ ಬದುಕಿ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಬಿ. ವೈ. ಖಾಸನೀಸ್ ಮಾತನಾಡಿ ಹಿಂದಿನ ಬ್ಯಾಚಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಟಿಇಟಿ ಪಾಸಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಚ್.ಡಿ. ಮಾರ್ಗದರ್ಶಕರಾಗಿ ಬಡ್ತಿ ಪಡೆದ ಡಾ. ಬಿ. ವೈ. ಖಾಸನೀಸ್, ಬಿ. ಎನ್. ಗೋನಾಳ, ಆಶಾ ಎಂ. ಪಾಟೀಲ ಅವರನ್ನು ಸನ್ಮಾನಿಸಿ ಗೊರವಿಸಲಾಯಿತು.
ಇದಕ್ಕೂ ಮುಂಚೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ರಬಿಯಾ ಮಿರ್ದೆ, ಎಂ. ಎಸ್. ಹಿರೇಮಠ, ಎಸ್. ಸಿ. ಶೇಗುಣಸಿ, ವಿಜಯಲಕ್ಷ್ಮಿ ನಿಡೋಣಿ, ಕಾಲೇಜಿನ ಬೋಧಕ ಮತ್ತು ಬೋಧಕರ ಹೊರತಾದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಹನಾ ಕುಲಕರ್ಣಿ ಸ್ವಾಗತ ನೃತ್ಯ ಮಾಡಿದರು. 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಸ್ವಾಗತ ಹೀತೆ ಹಾಡಿದರು. ಡಾ. ಎಂ. ಬಿ. ಕೋರಿ ಸ್ವಾಗತಿಸಿ ಪರಿಚಯಿಸಿದರು. ಸುನೀಲ ಪಾಟೀಲ ನಿರೂಪಿಸಿದರು. ಪಿ. ಡಿ. ಮುಲ್ತಾನಿ ವಂದಿಸಿದರು.