ಅಗಸನಹಳ್ಳಿಯಲ್ಲಿ ಗಮನ ಸೆಳೆದ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ

ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿ ಪಕ್ಕದಲ್ಲಿರುವ ಅಗಸನಹಳ್ಳಿ ಗ್ರಾಮದಲ್ಲಿ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. 

ಕಳೆದ ಮೂರು ದಿನಗಳಿಂದ ದೇವಾಲಯ ಆವರಣದಲ್ಲಿ ಕೀರ್ತನೆ ಭಜನೆ ದೇವರ ಧ್ಯಾನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  ಪಾಂಡುರಂಗನ ಪಲ್ಲಕ್ಕಿ ಉತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಹರಿ ಭಜನೆ ನಾನಾ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು.

ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಂತ ಮಂಡಳಿ ಸದಸ್ಯರು ಭಕ್ತಿಭಾವದ ಮತ್ತು ಗ್ರಾಮೀಣ ಸೊಗಡಿನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಕೂಡಿದ ಭಕ್ತ ಸಮೂಹ ಅವುಗಳೆಲ್ಲವನ್ನು ನೋಡಿ ಆನಂದಪಟ್ಟರು.

ಅಗಸನಹಳ್ಳಿಯಲ್ಲಿ ನಡೆದ ವಿಠ್ಠಲ ರುಕ್ಮಿಣಿ ಜಾತ್ರೆಯಲ್ಲಿ ಪಾಲ್ಗೋಂಡ ಭಕ್ತರು ಭಜನೆ ಮಾಡಿದರು

ಗದಗ- ಚಿಕ್ಕಲಕಿ, ಸಿದ್ದಾಪುರ, ಕೋಲಾರ, ಹಂಚಿನಾಳ, (ಪಿಎಂ)ಹಿಟ್ಟನಹಳ್ಳಿ, ಹೊನವಾಡ, ಜೈನಾಪುರ, ಕೌಲಗಿ, ಉಕ್ಕಲಿ, ಬೋಳಚಿಕ್ಕಲಕಿ, ಮುಚ್ಚಂಡಿ, ಕೆಂಗಲಗುತ್ತಿ, ಮನಗೂಳಿ, ಕಾಖಂಡಕಿ, ಅಗಸನಹಳ್ಳಿ, ದೂಡಿಹಾಳ, ಕಾರಜೋಳ, ಬಬಲೇಶ್ವರ, ಸಾರವಾಡ, ಹಲಗಣಿ, ಕಂಬಾಗಿ, ಶೇಗುಣಸಿ, ಮಮದಾಪುರ, ಉಪ್ಪಲದಿನ್ನಿ, ಹನುಮಸಾಗರ, ಗುಣದಾಳ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೋಂಡಿದ್ದರು.

Leave a Reply

ಹೊಸ ಪೋಸ್ಟ್‌