ಸಾರ್ವಜನಿಕ ಸಮಾರಂಭದಲ್ಲಿ ಮೂರು ಬಾರಿ ಸಿಎಂಗೆ ಮಹತ್ವದ ಫೋನ್ ಕಾಲ್- ಮೈಕ್ ಬಂದ್ ಮಾಡಿಸಿದಸಿಎಂ ಬಸವರಾಜ ಬೊಮ್ಮಾಯಿ

ವಿಜಯಪುರ: ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರು ಬಾರಿ ಕಾರ್ಯಕ್ರಮದ ಮೈಕ್ ಬಂದ್ ಮಾಡಿಸಿ ಫೋನ್ ನಲ್ಲಿ ಮಾತನಾಡಿದ ಪ್ರಸಂಗ ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

ನಾಲತವಾಡ ಪಟ್ಟಣದ ಪಟ್ಟಣದ ಶರಣ ವಿರೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆಗೆ ಬರುತ್ತಿದ್ದಂತೆ ಮೊಬೈಲ್ ನಲ್ಲಿ ಮಾತನಾಡುತ್ತ ಬ್ಯೂಸಿಯಾದರು.  ಮೊದಲ ಬಾರಿಗೆ ಮೊಬೈಲ್ ಫೋನ್ ರಿಂಗಣಿಸಿದಾಗ ಕಾರ್ಯಕ್ರಮ ನಿರೂಪಕರು ಮಾತನಾಡುವುದನ್ನು ನಿಲ್ಲಿಸಲು ಸೂಚಿಸಿದ ಮುಖ್ಮಮಂತ್ರಿಗಳು ಮೊಬೈಲ್‌ ನಲ್ಲಿ ಕೆಲ ಕಾಲ ಮಾತನಾಡಿದರು.  ಸಿಎಂ ಮಾತು ಮುಗಿಸುತ್ತಿದ್ದಂತೆ ಕಾರ್ಯಕ್ರಮ ಪುನಾರಂಭವಾಯಿತು.

ನಂತರ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಸಿಎಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಬಳಿಕ ರಿಮೋಟ್ ಬಟನ್ ಪ್ರೆಸ್ ಮಾಡುವ ಮೂಲಕ‌ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೆ ಮೊಬೈಲ್ ಕರೆ ಬಂದಿತು.  ಆಗ ಸಿಎಂ ಮತ್ತೆ ಫೋನ್ ನಲ್ಲಿ ಬ್ಯುಸಿಯಾದರು.

ನಂತರ ಕುಡಿಯುವ ನೀರಿಗಾಗಿ ಹೋರಾಟ ನಡೆಸಿದ್ದ ಬಸವರಾಜ ನಂದಿಕೇಶ್ವರಮಠ ಅವರನ್ನು ನಸಿಎಂ ಸನ್ಮಾನ ಮಾಡುವ ವೇಳೆಯೂ ಅವರು ಪೋನ್ ನಲ್ಲಿ ಬ್ಯುಸಿಯಾದರು.  ಮೊಬೈಲ್ ನಲ್ಲಿ ಮಾತನಾಡುತ್ತಲೇ ಸಿಎಂ ಸನ್ಮಾನ ಮಾಡಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು

ಇದಾದ ಬಳಿಕ ವೇದಿಕೆಗೆ ಬಂದ ಸಿಎಂ ಮತ್ತೆ ಮೊಬೈಲ್ ಫೋನ್ ನಲ್ಲಿ ಬ್ಯೂಸಿಯಾದರು.

ನಾಲತವಾಡ ಪಟ್ಟಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗೇರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಎಂ, ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ನನ್ನ ಸಣ್ಣ ಸಹೋದರ.  ಕಾಲೇಜು ಕಲಿಯುವಾಗಿಂದಲೂ ನನಗೆ ಅತ್ಯಂತ ಆತ್ಮೀಯ.  ಇಂದು ಉತ್ತರ ಕರ್ನಾಟಕದ ಜನನಾಯಕನಾಗಿ ಹೊರಹೊಮ್ಮಿದ್ದಾನೆ.  ಬಹಳ ವರ್ಷದಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದನ್ನು ಒದಗಿಸುವ ಕೆಲಸ ಮಾಡಿದ್ದೇವೆ.  ದೊಡ್ಡ ಪ್ರಮಾಣದ ರಾಜ್ಯದಲ್ಲಿ ಅಭಿವೃದ್ಧಿ ಆಗಿದ್ರೆ ಅದು ಮುದ್ದೇಬಿಹಾಳ ಕ್ಷೇತ್ರದಲ್ಲಿ.  ರೂ. 1600 ಕೋ. ವೆಚ್ಚದ ನಾನಾ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದೇವೆ.  ಒಂದು ಅವಧಿಯಲ್ಲೇ ರೂ. 4000 ಕೋ. ಅನುದಾನ ತಂದು ನಡಹಳ್ಳಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.

2009ರಲ್ಲಿ ನಾನು ನೀರಾವರಿ ಸಚಿವಾಗಿದ್ದೆ,  ಈ‌ಭಾಗದಲ್ಲಿ ಸಂಚಾರ ಮಾಡಿದಾಗ ಒಂಬತ್ತು ನೀರಾವರಿ ಯೋಜನೆಗಳು ಹಾಗೆ ಇದ್ದವು.  ಅಧಿಕಾರಿಗಳು ಸ್ಕೀಂ ಬಿ ಇದೆ, ಅದನ್ನ ಮುಟ್ಟಬಾರದು ಅಂದಿದ್ರು.  ಪಕ್ಕದ ಆಂಧ್ರದಲ್ಲಿ ಇಲ್ಲದ ಬಿ ಸ್ಕಿಂ ನಮಗ್ಯಾಕೆ ಎಂದು ಹೇಳಿದ್ದೆ.  ಈ‌ ಕೂಡಲೆ ಮಂಜೂರಾತಿ ಕೊಡ್ತೆನೆ ಮಾಡಿ ಎಂದಿದ್ದೆ ಎಂದು ಅಂದಿನ ಚೀಫ್ ಸೆಕ್ರೆಟರಿ ಸುಧಾಕರ ರಾವ ಅವರನ್ನು ಬಸವರಾಜ ಬೊಮ್ಮಾಯಿ ನೆನೆದರು.

ಅವರು ಟ್ರ್ಯೂಬಿನಲ್‌ ನಲ್ಲಿ ಶಿಫಾರಸ್ಸು ಮಾಡಿದ್ರು.  ಚಿಮ್ಮಲಗಿ, ಮುಳವಾಡ ಏತ ನೀರಾವರಿಗೆ ಅನುಮತಿ ಪಡೆದಿದ್ದೆವು.  2012 ಈ ಕಾಮಗಾರಿಗಳು ಮಾಡುವಂತಾಯಿತು ಎಂದು ಅವರು ಹೇಳಿದರು.

ಕಾಲುವೆ ತೆಗೆದು ಭಾರೀ ನೀತಿವಂತರಂತೆ ಭಾಷಣ ಮಾಡ್ತಾರೆ.  ಕಾಲುವೆ ತೆಗೆದ್ರೆ ಯಾರಿಗೆ ಉಪಯೋಗ? ನೀರು ಬಂದರೆ ಮಾತ್ರ ಅನುಕೂಲ ಆಗುತ್ತೆ.  ಕಳೆದ‌ ಆರೇಳು ವರ್ಷ ಕಾಲ ಹರಣ ಮಾಡಿದರು.  ನಾವು ಬಂದ ಮೇಲೆ ಮತ್ತೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಕೃಷ್ಣೆಯ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದ್ರು.  ಈಗ ಬೋಗಸ್ ಕಾರ್ಡ್ ಇದೆ ಅವರದ್ದು.  ಪ್ರತಿ ವರ್ಷ ರೂ. 10 ಸಾವಿರ ಕೋ. ಹಣವನ್ನು ಕೃಷ್ಣಾ ಯೋಜನೆಗೆ ಅನುದಾನ ಕೊಡ್ತಿವಿ ಅಂದ್ರಿ.  ಈಗ ನೀವು ಕೊಟ್ಟಿರೋದೆ jt. 6000 ಕೋ.  ರೈತರಿಗೆ ಪರಿಹಾರದ ದರ ನಿಗದಿ ಮಾಡೋಕೆ ಆಗಿಲ್ಲಾ, ನಾಚಿಕೆ ಆಗಬೇಕು ನಿಮಗೆ.  ಉತ್ತರ ಕರ್ನಾಟಕ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ರಚನೆ ಮಾಡಿದ್ದೇನೆ.  ಈ ಭಾಗದ ಕ್ಷೇತ್ರಗಳು ನೀರಾವರಿ ಆಗೋವರೆಗೂ ನಾವು ವಿಶ್ರಮಿಸೋದಿಲ್ಲ.  ಮುದ್ದೇಬಿಹಾಳ ಕ್ಷೇತ್ರ ಅಭಿವೃದ್ಧಿ ಆದಂತೆ ರಾಜ್ಯದ ಎಲ್ಲ ಕ್ಷೇತ್ರಗಳನ್ನೂ ಅಭಿವೃದ್ಧಿ ಮಾಡ್ತೆವೆ.  ಮೂರು ಬಜೆಟ್ ನಲ್ಲಿ 2 ಲಕ್ಷ ಕೋಟಿ ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ.  ಇಷ್ಟು ಹಣವನ್ನು ಯಾವ ಸರ್ಕಾರಗಳು ಮಾಡಿಲ್ಲಾ ಎಂದು ಅವರು ಹೇಳಿದರು.

ಜಲಜೀವನ್ ಮಿಶನ್ ನಮ್ಮ ಪ್ರಧಾನಿಯ ಕನಸು.  ಮೂರು ವರ್ಷದ ಹಿಂದೆ ಎಲ್ಲ ಮನೆಮನೆಗೆ ನೀರು ಕೊಡ್ತಿವಿ ಎಂದು ಪ್ರಧಾನಿ ಹೇಳಿದ್ದರು.  ರೂ. 130 ಕೋ. ವೆಚ್ಚದಲ್ಲಿ ಜನರಿಗೆ ನೀರು ಕೊಡುವ ಸಾಹಸ ಮಾಡಿದ್ದಾರೆ.  ಕಳೆದ 72 ವರ್ಷಗಳಲ್ಲಿ ರೂ. 25 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದಾರೆ.  ಕಳೆದ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನಾವು ನೀರು ಕೊಟ್ಟಿದ್ದೇವೆ.  ಮುಂದಿನ ಒಂದು ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಕೊಡುತ್ತೇವೆ.  ಕಳೆದ 72 ವರ್ಷ ನೀರು ಕೊಡೊಕೆ ಆಗದಿರೊರಿಗೆ ನಾಯಕರು ಅನ್ನಬೇಕಾ? ಏನೆನ್ನಬೇಕು ಇವರಿಗೆ? ನೀರನ್ನು ಕೊಡದೇ ಇರೋರಿಗೆ ಏನೇನ್ನಬೇಕು? ನೀರು ಕೊಡದೇ ಇರೋರಿಗೆ ನೀರು ಕುಡಿಸ್ತಿವಿ ಎನ್ನಬೇಕು ಎಂದು ಅವರು ಕಾಂಗ್ರೆಸ್ ನ್ನು ತರಾಟೆಗೆ ತೆಗೆದುಕೊಂಡರು.

ನಡಹಳ್ಳಿ‌ ಭಾಳ ಬೆರಕಿ ಅದಾನ

ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಏನಾದರೂ ಒಂದು ಕೆಲಸ ತಗೊಬೇಕಾದ್ರೆ ಒಂದು ಕಾರಣ ಇಟ್ಟಿರ್ತಾನೆ.  ನಾವು ಅದನ್ನ ಕೇಳಿದ ಕೂಡಲೇ ಅದನ್ನು ಮಾಡಲೇಬೇಕು.  ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಅವನನ್ನು ಆರಿಸಿ ತಂದ್ರೆ ಅಭಿವೃದ್ದಿ ಪಥ ಮುಂದುವರೆಯುತ್ತದೆ.  ಆರಿಸಿ ಬರೋದು ಗ್ಯಾರೆಂಟಿ, ಆದ್ರೆ 56 ಸಾವಿರ ಲೀಡ್ ನಿಂದ ಬರಬೇಕು ಎಂದು ಹೇಳುವ ಮೂಲಕ ಈ ಬಾರಿಯೂ ಮುದ್ದೇಬಿಹಾಳಕ್ಕೆ ಎ. ಎಸ್. ಪಾಟೀಲ ನಡಹಳ್ಳಿಗೆ ಟಿಕೆಟ್ ಫಿಕ್ಸ್ ಎಂದು ಸಿಎಂ ಪರೋಕ್ಷವಾಗಿ ಹೇಳಿದರು.

ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ರೂ. 1600 ಕೋ. ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಆಗಿದೆ ಎಂದು ಈ ಭಾಗದ ಸಂತರು ಮತ್ತು ವಿರೇಶ್ವರರನ್ನು ನೆನೆದರು.  ಸಿಎಂ ಬಸವರಾಜ ಬೊಮ್ಮಾಯಿ‌ ನನಗೆ ಅಣ್ಣನ ಸಮಾನ,  ಈ ಸಂದರ್ಭದಲ್ಲಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎಂ. ಎಸ್. ರುದ್ರಗೌಡರ ಸೇರಿದಂತೆ ನಾನಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌