ವಿಜಯಪುರ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ವಿಜಯಪುರದ ನವರಸ ನೃತ್ಯ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಥಕ್ ನೃತ್ಯ ತರಬೇತಿ ಶಿಬಿರ ನಗರದಲ್ಲಿ ನಡೆಯಿತು.
ಈ ಶಿಬಿರವನ್ನು ಶೇಷ ಘಟಕ ಯೋಜನೆ ಅಡಿಯಲ್ಲಿ ಗುರುಶಿಷ್ಯ ಪರಂಪರೆ ಅಂಗವಾಗಿ ಆಯೋಜಿಸಲಾಗಿದ್ದ ಈ ತರಬೇತಿ ಶಿಬಿರವನ್ನುಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಮಾಜಿ ಸತಸ್ಯೆ ಮತ್ತು ಖ್ಯಾತ ಸಂಗೀತ ಕಲಾವಿದೆ ಲತಾ ಜಾಗೀರದಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನೃತ್ಯ ಸರ್ವ ರೋಗಕ್ಕೂ ರಾಮಬಾಣವಿದ್ದಂತೆ. ನೃತ್ಯದಿಂದ ನಮ್ಮ ದೇಹದ ಸರ್ವ ಅಂಗಾಂಗಗಳಿಗೂ ವ್ಯಾಯಾಮ ದೊರೆಯುತ್ತದೆ. ಇದರಿಂದ ಉತ್ತಮ ಆರೋಗ್ಯ ಸಾಧ್ಯ. ಯುವಕರು ಇಂದಿನ ಜಾಗತಿಕ ಯುಗದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಭಾಷೆಯ ಸಂಗೀತಕ್ಕೆ ಮಾರು ಹೋಗುತ್ತಿರುವದು ನೋವಿನ ಸಂಗತಿ. ಆದ್ದರಿಂದ ಭಾರತದ ಸಂಸ್ಕೃತಿಯನ್ನು ಕಾಪಾಡಲು ಕಥಕ್ ನೃತ್ಯದಂಥ ಕಲೆಗಳು ಅಗತ್ಯವಾಗಿದೆ. ಇದು ಎಲ್ಲರ ಜವಾಬ್ದಾರಿಯೂ ಆಗಿದೆ ಎಂದು ಅವರು ಹೇಳಿದು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ಹಾಗೂ ವಿಜಯಪುರ ನವರಸ ನೃತ್ಯ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಥಕ್ ನೃತ್ಯ ತರಬೇತಿ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ನವರಸ ನೃತ್ಯ ಕಲಾ ಸಂಸ್ಥೆಯ ನಿರ್ದೇಶಕಿ ಮತ್ತು ನೃತ್ಯ ಕಲಾವಿದೆ ಹೇಮಾ ವಾರದ, ನೃತ್ಯ ಗುರು ರಂಗನಾಥ ಬತ್ತಾಸಿ, ನವರಸ ನೃತ್ಯ ಕಲಾ ಸಂಸ್ಥೆಯ ಉಪನಿರ್ದೇಶಕಿ ಸುನಂದಾ ಬತ್ತಾಸಿ, ಕಿರಣರಾಜ ರಾಠೋಡ, ರವಿಕಾಂತ ಪೂಜಾರಿ, ಪೂಜಾ, ಭಾವನಾ ಕಾಂಬಳೆ, ಚೇತನ ಕಾಂಬಳೆ, ಮುಂತಾದವರು ಉಪಸ್ಥಿತರಿದ್ದರು.