ಮಕ್ಕಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣ ಸಂಸ್ಥೆಗಳು ಗುರಿಯಾಗಬೇಕು- ಶೈಲಜಾ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ಮಕ್ಕಳು ಪಾಠದ ಜೊತೆಗೆ, ಪಠ್ಯಗಳ ಹೊರತಾದ ಚಟುವಟಿಕೆಗಳಲ್ಲಿಯೂ ಪಾಲ್ಗೋಳ್ಳಬೇಕು ಎಂದು ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಗ್ರಾಮದ ಮಾತೋಶ್ರೀ ಶಕುಂತಲಾ ಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ಕೊಡುವ ನೀಡುವ ನೆಪದಲ್ಲಿ ಅವರ ಹೆಗಲಿಗೆ ಭಾರವಾದ ಪುಸ್ತಕಗಳ ಬ್ಯಾಗನ್ನು ಹಾಕಿಸಿ ಕೇವಲ ಓದು, ಓದು ಎಂದು ಒತ್ತಡ ಹಾಕಲಾಗುತ್ತದೆ. ಇದರಿಂದ ಅನೇಕ ಮಕ್ಕಳು ಒತ್ತಡದಿಂದ […]
ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಿ ಗುಳೆ ತಡೆಯಲು ಕ್ರಮ: ಸಿಇಓ ರಾಹುಲ ಸಿಂಧೆ
ವಿಜಯಪುರ: ಈ ವರ್ಷ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ.60 ರಷ್ಟು ಗುರಿ ಹೊಂದಲಾಗಿದೆ ಮತ್ತು ವಿಶೇಷಚೇತನರಿಗೂ ಕೂಡ ಆದ್ಯತೆ ನೀಡಲಾಗಿದೆ. ಬೇಸಿಗೆಯ ದಿನಗಳಲ್ಲಿ ಜನರು ಬೇರೆ ಊರಿಗೆ ಕೆಲಸ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, […]
ಧೂಳಾಪುರ ಅಪಖ್ಯಾತಿಯ ವಿಜಯಪುರ ಚಿತ್ರಣ ಬದಲು- ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ಉಳಿದವಂತೆ ನಾನು ಬೋಗಸ್ ಭೂಮಿಪೂಜೆ ಮಾಡುತ್ತಿಲ್ಲ. ಅನುದಾನ ಬಿಡುಗಡೆಯಾಗಿ ಟೆಂಡರ್ ಮುಗಿದ ಬಳಿಕವೇ ಗುಣಮಟ್ಟದ ರಸ್ತೆಗಳ ಅಭಿವೃದ್ಧಿ ಮಾಡಲು ಭೂಮಿಪೂಜೆ ಮಾಡುತ್ತಿದೇನೆ ಎಂದು ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ವಾರ್ಡ್ ಸಂಖ್ಯೆ 1ರ ಸಂಗಮೇಶ್ವರ ಕಾಲೊನಿಯ ಆಂತರಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಿಸಿ ರಸ್ತೆ ಕಾಣದ ನಗರದಲ್ಲಿ, ನನ್ನ ಅವಧಿಯಲ್ಲಿ ಅಭಿವೃದ್ದಿಗೊಂಡ ರಸ್ತೆಗಳು, ಸುಳ್ಳು ಹೇಳಿ ಹೋಗುವ ರಾಜಕಾರಣಿ ಅಲ್ಲ. ಹೇಳಿದಂತೆ ನಡೆದುಕೊಳ್ಳುವೆ ಎಂದು ಅವರು […]
ಕುಡಿಯುವ ನೀರನ್ನು ಕೃಷಿ ಚಟುವಟಿಕೆಗೆ ಬಳಸದಂತೆ ಡಿಸಿ ಡಾ. ದಾನಮ್ಮನವರ ಆದೇಶ
ವಿಜಯಪುರ: ಜಿಲ್ಲೆಯ ಎಲ್ಲ ಜಲ ಮೂಲಗಳಲ್ಲಿರುವ ನೀರನ್ನು ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿರುವುದರಿಂದ ಬೇರೆ ಉದ್ದೇಶಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕುಡಿಯುವ ನೀರು ಬಳಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ. 16.02.2023ರ ಸಭೆಯ ನಿರ್ದೇಶನದಂತೆ ಕೆಬಿಜೆಎನ್‍ಎಲ್ ಕಾಲುವೆ ಜಾಲಗಳ ಮೂಲಕ ವಾರಾಬಂದಿ ಮೂಲಕ ಹರಿಸಲಾದ ನೀರನ್ನು ಕುಡಿಯುವ ನೀರಿನ ಸಲುವಾಗಿ ಎಲ್ಲ ಜಲಮೂಲಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರನ್ನು ಕೃಷಿ […]
ಮೀಸಲಾತಿಯಲ್ಲಿ ನನ್ನ ಪಾತ್ರ ದೊಡ್ಡದಿದೆ- ಹೈಕಮಾಂಡಿಗೆ ನನ್ನ ಶಕ್ತಿ ಗೊತ್ತಾಗಿದೆ- ಕೂಡಲ ಸಂಗಮ ಶ್ರೀಗಳ ಮೇಲೆ ಯಾರೂ ಒತ್ತಡ ಹಾಕಿಲ್ಲ- ಯತ್ನಾಳ
ವಿಜಯಪುರ: ಮೀಸಲಾತಿ ಆಗಬೇಕಾದರೆ ನನ್ನ ದೊಡ್ಡ ಕೊಡುಗೆ ಇದೆ. ನಾನು ಎಲ್ಲ ಅಧಿಕಾರ ತ್ಯಾಗ ಮಾಡಿದ ಕಾರಣ ಹೈಕಮಾಂಡ್ ನನ್ನ ಜೊತೆ ಚರ್ಚಿಸಿ ನಮ್ಮ ಸಮಾಜ ಮೀಸಲಾತಿ ನೀಡಿದೆ. ಮಾತ್ರವಲ್ಲ ಇತರ ಸಮಾಜಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡಿಗೆ ಬಸನಗೌಡರ ಜನಪ್ರೀಯತೆ ಗೊತ್ತಾಗಿದೆ. ಅದಕ್ಕೆ ಮೀಸಲಾತಿ ಸಿಕ್ಕಿದೆ. ನಮಗೆಲ್ಲ ಮೀಸಲಾತಿ ನೀಡಬೇಕಾದರೆ, ಅದಕ್ಕೂ ಮೊದಲು ಎಸ್.ಸಿ.ಎಸ್.ಟಿ. ಜನಾಂಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ […]