ವಿಜಯಪುರ: ಉಳಿದವಂತೆ ನಾನು ಬೋಗಸ್ ಭೂಮಿಪೂಜೆ ಮಾಡುತ್ತಿಲ್ಲ. ಅನುದಾನ ಬಿಡುಗಡೆಯಾಗಿ ಟೆಂಡರ್ ಮುಗಿದ ಬಳಿಕವೇ ಗುಣಮಟ್ಟದ ರಸ್ತೆಗಳ ಅಭಿವೃದ್ಧಿ ಮಾಡಲು ಭೂಮಿಪೂಜೆ ಮಾಡುತ್ತಿದೇನೆ ಎಂದು ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದ ವಾರ್ಡ್ ಸಂಖ್ಯೆ 1ರ ಸಂಗಮೇಶ್ವರ ಕಾಲೊನಿಯ ಆಂತರಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಿಸಿ ರಸ್ತೆ ಕಾಣದ ನಗರದಲ್ಲಿ, ನನ್ನ ಅವಧಿಯಲ್ಲಿ ಅಭಿವೃದ್ದಿಗೊಂಡ ರಸ್ತೆಗಳು, ಸುಳ್ಳು ಹೇಳಿ ಹೋಗುವ ರಾಜಕಾರಣಿ ಅಲ್ಲ. ಹೇಳಿದಂತೆ ನಡೆದುಕೊಳ್ಳುವೆ ಎಂದು ಅವರು ಹೇಳಿದರು.
ನನ್ನ ಅವಧಿಯಲ್ಲಿ ಆಗಿರುವ ರಸ್ತೆಗಳು, ಕನಿಷ್ಠ 20 ರಿಂದ 25 ವರ್ಷ ಏನು ಆಗುವುದಿಲ್ಲ. ಕೇವಲ ಮುಖ್ಯ ರಸ್ತೆಗಳನ್ನು ಮಾತ್ರ ಅಭಿವೃದ್ಧಿ ಮಾಡದೆ, ಪ್ರತಿ ಕಾಲೊನಿ, ಬಡಾವಣೆಗಳಲ್ಲಿಯೂ ಆಂತರಿಕ ರಸ್ತೆಗಳು ಅಭಿವೃದ್ಧಿಗೊಂಡಿದ್ದರಿಂದ, ಧೂಳಾಪುರ ಕುಖ್ಯಾತಿ ಹೋಗಿದೆ. ನಗರದ ತುಂಬಾ ರಸ್ತೆ ಬದಿಯಲ್ಲಿ, ಉದ್ಯಾನಗಳಲ್ಲಿ ಸಾಕಷ್ಟು ಗಿಡಗಳನ್ನು ಬೆಳೆಸಿದ್ದರಿಂದ ನಗರದ ಪರಿಸರವೇ ಬದಲಾಗಿದೆ. ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರಿನ ಘಟಕಗಳು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೂ ಸಾಕಷ್ಟು ಅನುದಾನ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ನಗರದ ಅಭಿವೃದ್ಧಿ ಜೊತೆಗೆ ಸುಮಾರು 32 ರಸ್ತೆಗಳಿಗೆ ಮಹಾಪುರುಷರ ಹೆಸರುಗಳನ್ನು ನಾಮಕರಣ ಮಾಡಿರುವುದು ಕೂಡ ಇತಿಹಾಸ. 11 ಮಹಾಪುರುಷರ ವೃತ್ತಗಳನ್ನು ಮಾಡಿ, ಪುತ್ಥಳಿ ಸಹÀ ನಿರ್ಮಾಣ ಮಾಡಲಾಗಿದೆ. ಮಾನ ನಿಲ್ದಾಣಕ್ಕೆ ಹೆಚ್ಚುವರಿ ಅನುದಾನ, ವೈನ್ ಪಾರ್ಕ, ಜವಳಿ ಪಾರ್ಕ ಮಂಜೂರುಗೊಳಿಸಿರುವೆ. ಮೆಡಿಕಲ್ ಕಾಲೇಜು ಮಾಡುವುದು ಬಾಕಿ ಇದೆ ಎಂದು ಯತ್ನಾಳ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.