ವಿಜಯಪುರ: ರಾಷ್ಟ್ರೀಯ ಆಯುಷ್ಮಾನ ಭಾರತ ಆರೋಗ್ಯ ಕಾರ್ಯಕ್ರಮದ ಜನ ಆರೋಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ಇಡಿಸಿಎಸ್ ನಿರ್ದೇಶಕರಿಂದ ಪಡೆದ ಕಾರ್ಡಗಳನ್ನು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಸೋಮವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು 5 ಜನ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಾರ್ಡ ವಿತರಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಡ ವಿತರಿಸಿದ ಅವರು, ಎಲ್ಲಾ ಗ್ರಾಮ ಒನ್ ಕೇಂದ್ರದ ಪ್ರಬಂಧಕರು ತಮ್ಮ ಗ್ರಾಮಗಳಲ್ಲಿ ಬರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಇಲಾಖೆಯವರ ಸಿಬ್ಬಂದಿಯವರ ಸಹಾಯ ಪಡೆದು ಅರ್ಹ ಫಲಾನುಭವಿಗಳಿಗೆ ಕಾರ್ಡ ವಿತರಿಸುವಚಿತೆ ತಿಳಿಸಿದ್ದಾರೆ. ಈ ಉಚಿತ ಇನ್ಸೂರೆನ್ಸ್ ಸ್ಕೀಮ್‍ನ ಸದುಪಯೋಗ ಜಿಲ್ಲೆಯ ಎಲ್ಲ ನಾಗರಿಕರು ತಮ್ಮ ಆಧಾರ ಹಾಗೂ ಎಪಿಎಲ್-ಬಿಪಿಲ್ ಕಾರ್ಡ ತೋರಿಸಿ ಗ್ರಾಮ್ ಒನ್ ಕೇಂದ್ರದಲ್ಲಿ ನೋಂದಣಿ ಮಾಡಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.