ಒಳ ಮೀಸಲಾತಿಯಿಂದ ಬಂಜಾರಾ, ಭೋವಿ, ಕೊರಚ ಸಮುದಾಯಗಳಿಗೆ ಅನ್ಯಾಯ- ಕಾಂತಾ ನಾಯಕ ಆರೋಪ

ವಿಜಯಪುರ: ಒಳ ಮೀಸಲಾತಿಯಿಂದಾಗಿ ಬಂಜಾರಾ ಸಮಾಜ ಸೇರಿದಂತೆ ಭೋವಿ ಹಾಗೂ ಕೊರಚ ಸಮುದಾಯಗಳಿಗೆ ಅನ್ಯಾಯವಾಗಲಿದೆ.  ಬಿಜೆಪಿಯ ಈ ಹುನ್ನಾರದಿಂದಾಗಿ ಈ ಸಮುದಾಯಗಳ ಬೆನ್ನಿಗೆ ಚೂರಿ ಹಾಕುವಂಥ ಕೆಲಸವನ್ನು ಬಿಜೆಪಿ ಮಾಡುತ್ತಿರುವುದು ತಪ್ಪು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಸರಕಾರ ಯಾವಾಗಲೂ ಜನರ ಬೆನ್ನಿಗೆ ಚೂರಿ ಹಾಕುವಂಥ ಕೆಲಸವನ್ನು ಮಾಡುತ್ತಲೇ ಬಂದಿದೆ.  ಬಿಜೆಪಿಯವರ ಆಟಕ್ಕೆ ಜನರು ಬಲಿಯಾಗುತ್ತಿದ್ದಾರೆ.  ಈಗ ಈ ಒಳ ಮೀಸಲಾತಿ ಜಾರಿಯಿಂದಾಗಿ ನಮ್ಮ ಸಮಾಜಕ್ಕೆ ದ್ರೋಹ ಮಾಡುತ್ತಿದೆ.  ಇದನ್ನು ಒಪ್ಪಲು ಸಾಧ್ಯವಿಲ್ಲ.  ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಒಳ ಮೀಸಲಾತಿಗೆ ಅವಕಾಶವಿಲ್ಲ ಎಂದು ಹೇಳಿತ್ತು.  ರಾಜ್ಯ ಬಿಜೆಪಿ ಸರಕಾರ ಅದನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.  ಈ ನಿರ್ಧಾರ ಕೈಬಿಡದಿದ್ದರೆ ಬಂಜಾರ ಸಮಾಜ ಸರಿಯಾದ ಉತ್ತರವನ್ನು ಬಿಜೆಪಿಗೆ ನೀಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌