ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿಗೆ ಟಿಕೆಟ್ ನೀಡಬೇಕು- ಡಾ. ಸರಸ್ವತಿ ಚಿಮ್ಮಲಗಿ

ವಿಜಯಪುರ: ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ.  ಇದಕ್ಕೆ ರಾಜಕೀಯ ಕ್ಷೇತ್ರವೂ ಹೊರತಾಗಿಲ್ಲ.  ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ಸಾಹಿತಿ ಮತ್ತು ಮಹಿಳಾಪರ ಹೋರಾಟಗಾರ್ತಿ ಡಾ. ಸರಸ್ವತಿ ಚಿಮ್ಮಲಗಿ ಹೇಳಿದ್ದಾರೆ. 

ನಗರದಲ್ಲಿ ಜ್ಞಾನದೀಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಯುಗದರ್ಶಿನಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮಹಿಳಾ ಸಬಲೀಕರಣ ಕುರಿತು ನೀಡುವ ಆಶ್ವಾಸನೆಗಳು ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ.  ಅವರಿಗೆ ನಿಜವಾಗಿಯೂ ಮಹಿಳೆಯ ಬಗ್ಗೆ ಕಾಳಜಿ ಇದ್ದೆ ಸರ್ವ ಪಕ್ಷಗಳು ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೂ ಟಿಕೆಟ್ ನೀಡಿ ರಾಜಕೀಯ ರಂಗದಲ್ಲೂ ಮಹಿಳೆಗೆ ಸಮಾನ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದೀಪಾ ತಟ್ಟಿಮನಿ, ತಿ ಗೌರಾಬಾಯಿ ಕುಬಕಡ್ಡಿ, ಸಾವಿತ್ರಿ ಮುಂಡಾಸ, ರಾಜೇಶ್ವರಿ ನನ್ನವರೆ, ಪವಿತ್ರಾ, ವೈಶಾಲಿ, ಶಾಂತಾ ಬಿರಾದರ, ಕಮಲಾ ಹಳಗುಣಕಿ, ಲಕ್ಷ್ಮೀಚಿಮ್ಮಲಗಿ, ನಂದಿನಿ ಹಜೇರಿ, ಕವಿತಾ ಚರಮಗೋಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌