ಕಾಂಗ್ರೆಸ್ ಮೂರಂಕಿ ದಾಟಲ್ಲ- ಬಿಜೆಪಿ 120 ಸ್ಥಾನಗಳಿಸಲಿದೆ- ಕಮಲ ಪಡೆಯವರಾರೂ ಕೈ ಕಡೆ ಹೋಗಲ್ಲ- ಯತ್ನಾಳ

ವಿಜಯಪುರ: ಬಿಜೆಪಿಯಿಂದ ಕೆಲವು ಸಚಿವರು ಮತ್ತು ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ ಎಂಬುದರ ಕುರಿತು ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೋಗಿ ತಗ್ಗಿನಲ್ಲಿ ಯಾಕೆ ಬೀಳ್ತಾರೆ? ರಾತ್ರಿ ಕಂಡ ಭಾವಿ ಹಗಲಿನಲ್ಲಿ ಹೋಗಿ ಬಿದ್ದಂಗಾಗುತ್ತೆ.  ಕಾಂಗ್ರೆಸ್ ಈಗ ಮತ್ತಷ್ಟು ಡೌನ್ ಆಗಿದೆ.  ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಏರಿತ್ತು.  90 ರಿಂದ 95 ಸ್ಥಾನಗಳಲ್ಲಿ ಗೆಲ್ಲುವ ಸೂಚನೆಯಿತ್ತು.  ಬಿಜೆಪಿ ಕೂಡ 90 ರಿಂದ 95 […]

ಅಪ್ಪು ಪಟ್ಟಣಶೆಟ್ಟಿ, ಗುರಲಿಂಗಪ್ಪ ಅಂಗಡಿ ಸೇರಿ ಎರಡ್ಮೂರು ಜನರಿಗೆ ಟಿಕೆಟ್ ಕೊಡಿ- ಬಣಜಿಗರ ಆಗ್ರಹ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ಇಬ್ಬರಿಂದ ಮೂರು ಜನ ಬಣಬಣಜಿಗರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ 1.60 ಲಕ್ಷ ಬಣಜಿಗರಿದ್ದಾರೆ‌. ಜಿಲ್ಲೆಯ 8 ಮತಕ್ಷೇತ್ರಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಬೇಕು. ವಿಜಯಪುರ ನಗರದಲ್ಲಿಯೇ 35 ಸಾವಿರ ಬಣಜಿಗ ಸಮಾಜದವರಿದ್ದಾರೆ. ‌ನಾನಾ ಮತಕ್ಷೇತ್ರಗಳಲ್ಲಿ ಕನಿಷ್ಠ 25 ಸಾವಿರ ಜನಸಂಖ್ಯೆಯಿದೆ. ಪ್ರತಿ ಮತಕ್ಷೇತ್ರದಿಂದ ಬಜಣಜಿಗ ಸಮಾಜದ […]

ಮೇ 10 ರಂದು ಚುನಾವಣೆ- ಮೇ 13 ರಂದು ಮತ ಎಣಿಕೆ

ವಿಜಯಪುರ: ಕೇಂದ್ರ ಚುನಾವಣೆ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣೆ ಆಯೋ್ದ ಮುಖ್ಯ ಚುನಾವಣಾದಿಕಾರಿ ರಾಜೀವ ಕುಮಾರ ಈ ಮಾಹಿತಿ‌ ನೀಡಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.  ಚುನಾವಣೆ ಪ್ರಕ್ರಿಯೆಯ ಮಾಹಿತಿ‌ಇಲ್ಲಿದೆ. ಅಧಿಸೂಚನೆ- 13.04.2023 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ- 20.04.2023 ನಾಮಪತ್ರ ಪರಿಷ್ಕರಣೆ- 21.04.2023 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ- 24.04.2023 ಮತದಾನ- 10.05.2023(ಬುಧವಾರ) ಮತ ಎಣಿಕೆ- 13.05.2023(ಶನಿವಾರ) ಚುನಾಚಣೆ ಪ್ರಕ್ರಿಯೆ ಮುಕ್ತಾಯ- 15.05.2023.

ಸೌಮ್ಯ ರೀತಿ ಹೋರಾಟಕ್ಕೆ ಸ್ಪಂದಿಸದಿದ್ದರೆ ಉಗ್ರ ಹೋರಾಟ- ಒಳಮೀಸಲಾತಿ ವಿರುದ್ಧ ಶಾಸಕ ದೇವಾನಂದ ಚವ್ಹಾಣ ಆಕ್ರೋಶ

ವಿಜಯಪುರ: ರಾಜ್ಯ ಸರಕಾರ ಘೋಷಣೆ ಮಾಡಿರುವ ಒಳಮೀಸಲಾತಿಗೆ ವಿಜಯಪುರ ಜಿಲ್ಲೆಯ ನಾಗಠಾಣ(ಮೀ) ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.  ಬಂಜಾರಾ ಸಮುದಾಯಕ್ಕೆ ಮೀಸಲಾತಿ ಪ್ರಮಾಣದಲ್ಲಿ ಕಡಿಮೆಯಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರಕಾರ ಜೇನುಗೂಡಿಗೆ ಕಲ್ಲು ಹೊಡೆದಿದೆ.  ಒಳ ಮೀಸಲಾತಿಯಿಂದ‌ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಬಂಜಾರ ಸಮುದಾಯದ ತಾಳ್ಮೇ ಪರೀಕ್ಷಿಸಬೇಡಿ.  ಸರಕಾರಕ್ಕೆ ಎಚ್ಚರಿಕೆ ಕೊಡ್ತೀನಿ.  ಬಂಜಾರ‌ […]