ಕಾಂಗ್ರೆಸ್ ಮೂರಂಕಿ ದಾಟಲ್ಲ- ಬಿಜೆಪಿ 120 ಸ್ಥಾನಗಳಿಸಲಿದೆ- ಕಮಲ ಪಡೆಯವರಾರೂ ಕೈ ಕಡೆ ಹೋಗಲ್ಲ- ಯತ್ನಾಳ

ವಿಜಯಪುರ: ಬಿಜೆಪಿಯಿಂದ ಕೆಲವು ಸಚಿವರು ಮತ್ತು ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ ಎಂಬುದರ ಕುರಿತು ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೋಗಿ ತಗ್ಗಿನಲ್ಲಿ ಯಾಕೆ ಬೀಳ್ತಾರೆ? ರಾತ್ರಿ ಕಂಡ ಭಾವಿ ಹಗಲಿನಲ್ಲಿ ಹೋಗಿ ಬಿದ್ದಂಗಾಗುತ್ತೆ.  ಕಾಂಗ್ರೆಸ್ ಈಗ ಮತ್ತಷ್ಟು ಡೌನ್ ಆಗಿದೆ.  ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಏರಿತ್ತು.  90 ರಿಂದ 95 ಸ್ಥಾನಗಳಲ್ಲಿ ಗೆಲ್ಲುವ ಸೂಚನೆಯಿತ್ತು.  ಬಿಜೆಪಿ ಕೂಡ 90 ರಿಂದ 95 ಸ್ಥಾನಗಳಲ್ಲಿ ಗೆಲ್ಲುವ ಸೂಚನೆಯಿತ್ತು.  ಅದನ್ನು ನಾನು ಒಪ್ಪುತ್ತೇನೆ.  ಈಗ ಬಿಜೆಪಿ 120ರ ವರೆಗೆ ಬಂದಿದೆ.  ಕಾಂಗ್ರೆಸ್ 70ರ ವರೆಗೆ ಹೋಗಿದೆ.  ಜೆಡಿಎಸ್ 20 ರಿಂದ 25ರ ವರೆಗೆ ಕೆಳಗಿದೆ ಎಂದು ಅವರು ಹೇಳಿದರು.

ಬಿಜೆಪಿಯಿಂದ ಯಾರಾದರೂ ಕಾಂಗ್ರೆಸ್ಸಿಗೆ ಹೋದರೆ ಅವರ ಮರಣ ಶಾಸನವನ್ನು ಅವರೇ ಬರೆದುಕೊಳ್ಳುತ್ತಾರೆ.  ಇಲ್ಲಿ ಸುರಕ್ಷಿತವಾಗಿ ಇದ್ದು ಟಿಕೆಟ್ ತೆಗೆದುಕೊಂಡು ಸಂತೋಷದಿಂದ ಆರಿಸಿ ಬಂದು ಸಂತೋಷದಿಂದ ಮಂತ್ರಿಯಾಗಬಹುದು ಎಂದು ನಾನು ಸಲಹೆ ಕೊಡುತ್ತೇನೆ ಎಂದು ಯತ್ನಾಳ ಮಾರ್ಮಿಕವಾಗಿ ಹೇಳಿದರು.

ಹಲವು ಕಡೆ ಚುನಾವಣೆ ಉದ್ದೇಶಕ್ಕಾಗಿ ಹಂಚಲು ಸಂಗ್ರಹಿಸಲಾಗಿದ್ದ ನಾನಾ ವಸ್ತುಗಳನ್ನು ಅಧಿಕಾರಿಗಳು ಸೀಜ್ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಂದು ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ.  ನನಗೆ ವಿಶ್ವಾಸವಿದೆ.  ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ ಯಾರೇ ಇಂಥ ಗಿಫ್ಟ್ ಹಂಚುವರಿದ್ದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.  ನಾವು ಅಷ್ಟು ಕೆಲಸ ಮಾಡಿದ್ದೇವೆ.  ಇಷ್ಟು ಕೆಲಸ ಮಾಡಿದ್ದೇವೆ ಎಂದು ಹೇಳುವವರು ನೀವು ಗಿಫ್ಟ್ ಯಾಕೆ ಹಂಚಬೇಕು? ಮತ್ಯಾಕೆ ಸೀರೆ ಹಂಚುತ್ತೀರಿ? ಯಾಕೆ ಗಡಿಯಾರ ಹಂಚುತ್ತೀರಿ? ಗಡಿಯಾರ, ಸೀರೆ, ಕುಕ್ಕರ್ ಒಂದು ಮತದ ಕಿಮ್ಮತ್ತು ಆಗಲ್ಲ ಎಂದು ಅವರು ಹೇಳಿದರು.

ನಾನಂತೂ ಕಿಟ್ ಹಂಚಿಕೆಗೆ ವಿರೋಧ ಇದ್ದೇನೆ.  ನನ್ನ ಮತಕ್ಷೇತ್ರದಲ್ಲಿ ಏನೂ ಹಂಚುವುದಿಲ್ಲ ಎಂದು ನಾನು ಹೇಳಿದ್ದೇನೆ.  .  ನಾನು ಮಾಡಿದ ಸಾಧನೆಯ ಮೇಲೆ ಓಟ್ ಹಾಕಬೇಕು.  ನಾನು ಒಂದು ವರ್ಷದ ಹಿಂದೆ ದೀಪಾವಳಿ ಸಂದರ್ಭದಲ್ಲಿ ಗಿಫ್ಟ್ ಕೊಟ್ಟಿದ್ದೇನೆ.  ಅಂದು ಕೊರೊನಾ ಸಂದರ್ಭದಲ್ಲಿ ಕಷ್ಟದಲ್ಲಿದ್ದರು.  ಲಸಿಕೆ ಹಾಕುವ ಸಂದರ್ಭದಲ್ಲಿಯೂ ಕಷ್ಟದಲ್ಲಿದ್ದರು. ಈಗ ಬಂದು ಕೆಲವು ಜನ ಸಕ್ಕರೆ ಹಂಚುತ್ತಿದ್ದಾರೆ.  ಇದು ಸಂಸ್ಕೃತಿಯಲ್ಲ.  ಇದನ್ನು ಚುನಾವಣೆ ಆಯೋಗ ಮತ್ತು ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ನಿರ್ಬಂಧ ಹಾಕಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿ. ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ.  ವಿಜಯಪುರದಲ್ಲಿ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕೆಲಸಗಳು ಆಗಿವೆ.  ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ.  ಮತ್ತೆ ನಾವು ವಿಧಾನಸಭೆಯಲ್ಲಿ ಬುಮತ ಪಡೆಯುತ್ತೇವೆ.  ಮೋದಿ ನೇತೃತ್ವ, ಅಭಿವೃದ್ಧಿಯ ಕೆಲಸದಿಂದ ನಾವು ಪುನರಾಯ್ಕೆಯಾಗುತ್ತೇವೆ ಎಂದು ಅವರು ತಿಳಿಸಿದರು.

ಮತದಾರರು ಬಿಜೆಪಿಗೆ ಬೆಂಬಲಿಸಿ ಬಹುಮತದ ಸರಕಾರ ತರಬೇಕು.  ರಾಜ್ಯದಲ್ಲಿ ಬಹುಮತ ಸರಕಾರ ಬರಬೇಕು.  ಪೂರ್ಣ ಪ್ರಮಾಣದ ಸರಕಾರ ಬರದಿದ್ದರೆ ಶಾಸಕರ ರಾಜೀನಾಮೆ ಕೊಡು ಇತ್ಯಾದಿ ನಡೆಯುತ್ತವೆ.  ಪೂರ್ಣ ಬಹುಮತ ನೀಡಿದರೆ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ಇದೇ ವೇಳೆ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ಟಿಕೆಟ್ ಹಂಚಿಕೆ ವಿಚಾರ ನನಗೆ ಗೊತ್ತಿಲ್ಲ.  ಇದೇ 31 ರಂದು ನಾನು ಚಿಕ್ಕೋಡಿಯಲ್ಲಿ ಎಲ್ಲಪ ಅಭಿಪ್ರಾಯ ಸಂಗ್ರಹಕ್ಕೆ ಹೋಗುತ್ತಿದ್ದೇನೆ.  ಆದಷ್ಟು ಬೇಗ ಟಿಕೇಟ್ ಘೋಷಣೆ ಆಗಲಿವೆ.  ಚಿಕ್ಕೋಡಿಯಲ್ಲಿನ ಮತೆದಾರರ ಅಭಿಪ್ರಾಯ ನೋಡುತ್ತೇವೆ.  ನಾನು ದ್ವೇಷಭರಿತವಾದ ಭಾವನೆ ಇಟ್ಟುಕೊಳ್ಳದೆ ವರಿಷ್ಟರಿಗೆ ವರದಿ ಕೊಡುತ್ತೇನೆ ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ಅಮೀತ್ ಶಾ ಅವರು ಟಿಕೆಟ್ ಹಂಚಿಕೆ ಮಾನದಂಡವನ್ನು ನಿರ್ಣಯ ಮಾಡಿರುತ್ತಾರೆ.  ಕುಟುಂಬ ರಾಜಕಾರಣವನ್ನು ನಾನೂ ವಿರೋಧ ಮಾಡುತ್ತೇನೆ.  ಒಬ್ಬರ ಕುಟುಂಬಕ್ಕೆ ಎರಡು ಮೂರು ಎಷ್ಟು ಕೊಡಬೇಕು? ಕಾರ್ಯಕರ್ತರು ಪಕ್ಷಕ್ಕೆ ದುಡಿದವರು ಎಷ್ಟು ಜನರಿದ್ದಾರೆ? ಅವರೆಲ್ಲರೂ ಇವರ ಮಕ್ಕಳಿಗಾಗಿ ದುಡಿದ ಹಾಗಾಗುತ್ತದೆ.  ಆದರೆ, ಒಂದೆಡರು ಕ್ಷೇತ್ರಗಳನ್ನು ಹೊರತು ಪಡಿಸಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗುತ್ತದೆ.  ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚುವ ವಿಶ್ವಾಸವಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌