ವಿಜಯಪುರ: ಕೇಂದ್ರ ಚುನಾವಣೆ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದ್ದು, ಮೇ 10ರಂದು ಬುಧವಾರ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ವೇಳಾಪಟ್ಟಿಯಂತೆ ಏ. 13 ರಂದು ಗುರುವಾರ ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಏ. 20 ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏ. 21 ರಂದು ಶುಕ್ರುವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ. 24ರ ಸೋಮವಾರದ ವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದಾಗಿದೆ. ಮೇ 10ರಂದು ಬುಧವಾರ ಮತದಾನ ನಡೆಯಲಿದ್ದು, ಮೇ 13 ಶನಿವಾರ ಮತ ಎಣಿಕೆ ನಡೆಯಲಿದೆ. ಮೇ 15 ಸೋಮವಾರ ಚುನಾವಣೆ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿಗಳನ್ನಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ (ಮೊ:9480857000) ಇವರನ್ನು ನೇಮಿಸಲಾಗಿದ್ದು, ವಿಧಾನಸಭಾ ಕ್ಷೇತ್ರವಾರು ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳಾಗಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸಲಾಗಿದೆ.
26-ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನೋಡಲ್ ಅಧಿಕಾರಿಗಳಾಗಿ ಶೆಟ್ಟಿ (ಮೊ:9480857115), 27- ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಬಸವಂತ್ರಾಯ ಬಿರಾದಾರ (ಮೊ:7760710639), 28-ಬಸವನ ಬಾಗೇವಾಡಿ ಮತಕ್ಷೇತ್ರಕ್ಕೆ ಭಾರತಿ ಚಲುವಯ್ಯ (ಮೊ:9480857100), 29-ಬಬಲೇಶ್ವರ ಮತಕ್ಷೇತ್ರಕ್ಕೆ ಜುಬೇರ ಅಹ್ಮದ ಪಠಾಣ(ಮೊ:7204963639), 30-ವಿಜಯಪುರ ನಗರ ಮತಕ್ಷೇತ್ರಕ್ಕೆ ಕೆ. ಹೊಂಗಯ್ಯ (ಮೊ:8618696782), 31-ನಾಗಠಾಣ ಮತಕ್ಷೇತ್ರಕ್ಕೆ ಸಂಜಯ ಖಡೇಕರ (ಮೊ:7338320712), 32-ಇಂಡಿ ಮತಕ್ಷೇತ್ರಕ್ಕೆ ಸುನೀಲ ಮದ್ದಿನ (ಮೊ:9448337393) ಹಾಗೂ 33-ಸಿಂದಗಿ ಮತಕ್ಷೇತ್ರಕ್ಕೆ ಬಾಬು ರಾಠೋಡ (ಮೊ: 8073885438) ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು.
ಈ ಬಾರಿ 18ಲಕ್ಷಕ್ಕೂ ಹೆಚ್ಚು ಮತದಾರರು
ಜಿಲ್ಲೆಯ ಎಂಟು ವಿಧಾನ ಸಭೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 05.01.2023ರಂದು ಹೊರಡಿಸಲಾದ ಅಂತಿಮ ಮತದಾರ ಪಟ್ಟಿಯನ್ವಯ 18,38,452 ಮತದಾರರಿದ್ದು, ಅಂತಿಮ ಪಟ್ಟಿ ಪ್ರಚುರಪಡಿಸಿದ ನಂತರ ನಿರಂತರ ಪರಿಷ್ಕರಣೆ ಮಾಡಲಾಗಿದೆ. ಈ ಅವಧಿಯಲ್ಲಿ ಹೊಸದಾಗಿ 39,851 ಅರ್ಹ ಮತದಾರರು ಸೇರ್ಪಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9,59,132 ಗಂಡು, ಮತ್ತು 9,18,953 ಹೆಣ್ಣು ಹಾಗೂ 218 ಇತರೆ ಸೇರಿದಂತೆ ಒಟ್ಟು 18,78,303 ಮತದಾರರಿದ್ದಾರೆ ಎಂದು ಅವರು ತಿಳಿಸಿದರು.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ 1,09,149 ಗಂಡು, 1,05,867 ಹೆಣ್ಣು ಹಾಗೂ 20 ಇತರೆ ಮತದಾರರು ಸೇರಿದಂತೆ ಒಟ್ಟು 2,15,036 ಮತದಾರರಿದ್ದಾರೆ.27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ 1,12,037 ಗಂಡು, 1,05,709 ಹೆಣ್ಣು ಹಾಗೂ 20 ಇತರೆ ಮತದಾರರು ಸೇರಿದಂತೆ 2,17,766 ಮತದಾರರಿದ್ದಾರೆ. 28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ 1,06,240 ಗಂಡು, 1,01,983 ಹೆಣ್ಣು ಹಾಗೂ 11 ಇತರೆ ಮತದಾರರು ಸೇರಿದಂತೆ ಒಟ್ಟು 2,08,234 ಮತದಾರರಿದ್ದಾರೆ. 29-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ 1,10,079 ಗಂಡು, 1,05,670 ಹೆಣ್ಣು ಹಾಗೂ 3 ಇತರೆ ಮತದಾರರು ಸೇರಿದಂತೆ ಒಟ್ಟು 2,15,752 ಮತದಾರರಿದ್ದಾರೆ. 30-ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದಲ್ಲಿ 1,37,599 ಗಂಡು, 1,40,056 ಹೆಣ್ಣು ಹಾಗೂ 93 ಇತರೆ ಮತದಾರರು ಸೇರಿದಂತೆ ಒಟ್ಟು 2,77,748 ಮತದಾರರಿದ್ದಾರೆ.
31-ನಾಗಠಾಣ ವಿಧಾನಸಭಾ ಮತಕ್ಷೇತ್ರದಲ್ಲಿ 1,37,760 ಗಂಡು, 1,29,993 ಹೆಣ್ಣು ಹಾಗೂ 22 ಇತರೆ ಮತದಾರರು ಸೇರಿದಂತೆ 2,67,775 ಮತದಾರರಿದ್ದಾರೆ. 32-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ 1,24,784 ಗಂಡು, 1,16,145 ಹೆಣ್ಣು ಹಾಗೂ 19 ಇತರೆ ಮತದಾರರು ಸೇರಿದಂತೆ 2,40,948 ಮತದಾರರಿದ್ದಾರೆ ಮತ್ತು 33-ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ 1,21,484 ಗಂಡು, 1,13,530 ಹೆಣ್ಣು ಹಾಗೂ 30 ಇತರೆ ಮತದಾರರು ಸೇರಿದಂತೆ ಒಟ್ಟು 2,35,044 ಮತದಾರರಿದ್ದು, ಒಟ್ಟು ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರದಲ್ಲಿ 9,59,132 ಗಂಡು, 9,18,953 ಹೆಣ್ಣು ಹಾಗೂ 218 ಇತರೆ ಮತದಾರರು ಸೇರಿದಂತೆ ಒಟ್ಟು 18,78,303 ಮತದಾರರಿದ್ದಾರೆ ಎಂದು ತಿಳಿಸಿದರು.
2072 ಮತಗಟ್ಟೆಗಳ ಸ್ಥಾಪನೆ: ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 334 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 241, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 252, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 232, ಬಬಲೇಶ್ವರ ಮತಕ್ಷೇತ್ರದಲ್ಲಿ 243, ವಿಜಯಪುರ ನಗರ ಮತಕ್ಷೇತ್ರದಲ್ಲಿ 269, ನಾಗಠಾಣ ಮತಕ್ಷೇತ್ರದಲ್ಲಿ 296, ಇಂಡಿ ಮತಕ್ಷೇತ್ರದಲ್ಲಿ 268 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 271 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 2072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕ್ರಿಟಿಕಲ್ ಮತಗಟ್ಟೆಗಳು : ಮುದ್ದೇಬಿಹಾಳದಲ್ಲಿ 24, ದೇವರಹಿಪ್ಪರಗಿ 28, ಬಸವನಬಾಗೇವಾಡಿ 33, ಬಬಲೇಶ್ವರ 37, ಬಿಜಾಪುರ ನಗರ 118, ನಾಗಠಾಣ 38, ಇಂಡಿ 32 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 24 ಸೇರಿದಂತೆ ಜಿಲ್ಲೆಯಾದ್ಯಂತೆ ಒಟ್ಟು 334 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.
ಸುಗಮ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣಾ ಜರುಗಿಸುವ ದೃಷ್ಟಿಯಿಂದ ವಿಧಾನಸಭಾ ಮತಕ್ಷೇತ್ರವಾರು ವಿವಿಧ ತಂಡಗಳನ್ನು ರಚನೆ ಮಾಡಲಾಗಿದ್ದು, 167 ಸೆಕ್ಟರ್ ಅಧಿಕಾರಿಗಳು, 72 ಫ್ಲಾಯಿಂಗ್ ಸ್ಕ್ವಾಡ್, 87 ಸ್ಟ್ಯಾಟಿಕ್ ಸರ್ವಲೈನ್ಸ್ ತಂಡ, 24 ವಿಡಿಯೋ ಸರ್ವಲೈನ್ಸ್ ಟೀಂ, 8 ವಿಡಿಯೋ ವಿವ್ಹಿಂಗ್ ಟೀಂ ಹಾಗೂ 8 ಅಕೌಂಟಿಂಗ್ ಟಿಂಗಳನ್ನು ನೇಮಿಸಲಾಗಿದೆ.
ವಿಧಾನಸಭೆ ಮತಕ್ಷೇತ್ರವಾರು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ವಿವರ
27- ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳಾಗಿ ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ (ಮೊ:8277930603), ಸಹಾಯಕ ಚುನಾವಣಾಧಿಕಾರಿಗಳಾಗಿ ತಹಶೀಲ್ದಾರಗಳಾದ ಶ್ರೀಮತಿ ರೇಖಾ ಟಿ (ಮೊ: 8792630457), ಶ್ರೀಮತಿ ಕೀರ್ತಿ ಚಾಲಕ (ಮೊ: 8861438554), ಕಿರಣಕುಮಾರ ಜಿ.ಕುಲಕರ್ಣಿ (ಮೊ: 9880411047) ಇವರನ್ನು ನೇಮಿಸಲಾಗಿದ್ದು, ಮುದ್ದೇಬಿಹಾಳ ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲಾಗಿದೆ.
28- ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳಾಗಿ ಇಂಡಿ ರೇಲ್ವೆ ಸ್ಟೇಶನ್ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಡಾ: ದುರಗೇಶ (ಮೊ8904242184), ಸಹಾಯಕ ಚುನಾವಣಾಧಿಕಾರಿಗಳಾಗಿ ತಹಶೀಲ್ದಾರಗಳಾದ ಶ್ರೀಮತಿ ಕವಿತಾ ಆರ್. (ಮೊ: 89047242184), ಶ್ರೀಮತಿ ಕೀರ್ತಿ ಚಾಲಕ (ಮೊ: 8861438554), ದುಂಡಪ್ಪ ಎಚ್. ಕೋಮಾರ (ಮೊ: 9845887257) ಹಾಗೂ ಕಿರಣಕುಮಾರ ಜಿ.ಕುಲಕರ್ಣಿ (ಮೊ: 9880411047) ಇವರನ್ನು ನೇಮಿಸಲಾಗಿದ್ದು, ದೇವರಹಿಪ್ಪರಗಿ ತಹಶೀಲ್ದಾರ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲಾಗಿದೆ.
ಬಸವನ ಬಾಗೇವಾಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಕೆ ಲಾಲಿ (ಮೊ9480857001), ಸಹಾಯಕ ಚುನಾವಣಾಧಿಕಾರಿಗಳಾಗಿ ತಹಶೀಲ್ದಾರಗಳಾದ ದುಂಡಪ್ಪ ಎಚ್. ಕೋಮಾರ (ಮೊ: 9845887257), ಶ್ರೀಮತಿ ರೇಣುಕಾ ಎಂ. (ಮೊ:9880411047), ಕಿರಣಕುಮಾರ ಜಿ.ಕುಲಕರ್ಣಿ (ಮೊ: 9880411047) ಇವರನ್ನು ನೇಮಿಸಲಾಗಿದ್ದು, ಬಸವನಬಾಗೇವಾಡಿ ತಹಶೀಲ್ದಾರ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
29- ಬಬಲೇಶ್ವರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳಾಗಿ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಬಿ.ಆರ್.ಮಂಜುನಾಥ (ಮೊ: 9902718627), ಸಹಾಯಕ ಚುನಾವಣಾಧಿಕಾರಿಗಳಾಗಿ ತಹಶೀಲ್ದಾರಗಳಾದ ರಾಜೇಶ ಆರ್. ಬುರ್ಲಿ (ಮೊ: 9448693698), ಶ್ರೀಮತಿ ರೇಣುಕಮ್ಮ (ಮೊ:8971412981) ಹಾಗೂ ಸುರೇಶ ರಾಮು ಮುಂಜೆ (ಮೊ: 9964394000) ಇವರನ್ನು ನೇಮಿಸಲಾಗಿದ್ದು, ಬಬಲೇಶ್ವರ ಕೆಬಿಜೆಎನ್‍ಎಲ್ ಕಾರ್ಯನಿರ್ವಾಹಕ ಅಭಿಯಂತರ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
20- ವಿಜಯಪಯುರ ನಗರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ (ಮೊ:7619334400), ಸಹಾಯಕ ಚುನಾವಣಾಧಿಕಾರಿಗಳಾಗಿ ತಹಶೀಲ್ದಾರರಾದ ಸುರೇಶ ರಾಮು ಮುಂಜೆ (ಮೊ:9964394000), ಶ್ರೀಮತಿ ರೇಣುಕಮ್ಮ (ಮೊ:8971412981) ಇವರನ್ನು ನೇಮಿಸಲಾಗಿದ್ದು, ವಿಜಯಪುರದ ಕನಕದಾಸ ಬಡಾವಣೆ ಜಿಲ್ಲಾ ಪಂಚಾಯಿತಿ ಎದುರುಗಡೆ ಇರುವ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
31-ನಾಗಠಾಣ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ, ಚುನಾವಣಾಧಿಕಾರಿಗಳಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಸತ್ಯನಾರಾಯಣ ಭಟ್ (ಮೊ: 9448679233 ಹಾಗೂ 7019074140), ಸಹಾಯಕ ಚುನಾವಣಾಧಿಕಾರಿಗಳಾಗಿ ತಹಶೀಲ್ದಾರರಾದ ಸುರೇಶ ರಾಮು ಮುಂಜೆ (ಮೊ: (ಮೊ:9964394000) ಹಾಗೂ ಹಣಮಂತ ಶಿರಹಟ್ಟಿ (ಮೊ. 8147750780) ಇವರನ್ನು ನೇಮಕ ಮಾಡಿದ್ದು, ವಿಜಯಪುರದ ಕನಕದಾಸ ಬಡಾವಣೆಯ ಮೌಲಾನಾ ಆಝಾದ ಭವನದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
32-ಇಂಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿ ಉಪ ವಿಭಾಗಾಧಿಕಾರಿಗಳಾದ ರಾಮಚಂದ್ರ ಗಡಾದೆ (ಮೊ:9743334596), ಸಹಾಯಕ ಚುನಾವಣಾಧಿಕಾರಿಗಳಾಗಿ ಇಂಡಿ ತಹಶೀಲ್ದಾರ ನಾಗಯ್ಯ ಹಿರೇಮಠ (ಮೊ:9900341212) ಇವರನ್ನು ನೇಮಿಸಿದ್ದು, ಇಂಡಿ ಮಿನಿ ವಿಧಾನಸೌಧದಲ್ಲಿರುವ ಉಪ ವಿಭಾಗಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಚುನಾವಣಾಧಿಕಾರಿಗಳ ಕಚೆರಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
33-ಸಿಂದಗಿ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿಗಳಾಗಿ ಆಹಾರ ಮತ್ತು ಮಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಶಿದ್ರಾಮ ಮಾರಿಹಾಳ (ಮೊ:9901446664), ಸಹಾಯಕ ಚುನಾವಣಾಧಿಕಾರಿಗಳಾಗಿ ಸಿಂದಗಿ ತಹಶಿಲ್ದಾರರಾದ ನಿಂಗಪ್ಪ ಬಿರಾದಾರ (ಮೊ:9538523163),ಆಲಮೇಲ ತಹಶೀಲ್ದಾರರಾದ ಸುರೇಶ ಚವಲರ (ಮೊ: 9538523163) ಹಾಗೂ ಇಂಡಿ ತಹಶೀಲ್ದಾರರಾದ ನಾಗಯ್ಯ ಹಿರೇಮಠ (ಮೊ:9900341212) ಇವರನ್ನು ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಿದ್ದು, ಸಿಂದಗಿಯ ತಾಲ್ಲೂಕ ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆಗೆ ನಿಯೋಜಿಸಿದ ಸಿಬ್ಬಂದಿ
ಪಿಆರ್‍ಒ, ಎಪಿಆರ್‍ಒ,ಪಿಒ1 ಹಾಗೂ ಪಿಒ2, ಮೈಕ್ರೋ ಆಬ್ಸರ್ವರ ಅವರೂ ಸೇರಿದಂತೆ 12,070 ಅಧಿಕಾರಿಗಳು ಲಭ್ಯವಿದ್ದು, 10,360 ಅಧಿಕಾರಿ-ಸಿಬ್ಬಂದಿ ಮತಗಟ್ಟೆ ಅನುಸಾರ ನಿಯೋಜಿಸಲಾಗುವುದು ಎಂದು ಹೇಳಿದರು.
ವಿದ್ಯುನ್ಮಾನ ಮತ ಯಂತ್ರಗಳ ಬಳಕೆ: ಚುನಾವಣೆಯಲ್ಲಿ ವಿದ್ಯನ್ಮಾನ ಮತಯಂತ್ರ ಹಾಗೂ ವ್ಹಿ.ವ್ಹಿ.ಪ್ಯಾಟ್‍ಗಳನ್ನು ಬಳಸಲಾಗುದು. 3949 ಬ್ಯಾಲೆಟ್ ಯುನಿಟ್, 2769 ಕಂಟ್ರೋಲ್ ಯುನಿಟ್ ಹಾಗೂ 2999 ವ್ಹಿ.ವ್ಹಿ.ಪ್ಯಾಟ್ ಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.
ಚುನಾವಣೆಯ ಕರ್ತವ್ಯಕ್ಕೆ ನೇಮಿಸಲಾದ ಪೊಲೀಸ ಇಲಾಖೆ ಸಿಬ್ಬಂದಿ: 16 ಡಿಎಸ್ಪಿ, 40 ಪಿಐ, 100 ಪಿಎಸ್‍ಐ, 253 ಎಎಸ್‍ಐ, 2132 ಹೆಡ್ ಕಾನಸ್ಟೇಬಲ್ ಹಾಗೂ ಪೋಲಿಸ್ ಪೇದೆ ಮತ್ತು 509 ಹೋಂ ಗಾಡ್ರ್ಸ ಸೇರಿದಂತೆ 3041 ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಅವರು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಅಬಕಾರಿ ಇಲಾಖೆ ಉಪಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಮುಂತಾದವರು ಉಪಸ್ಥಿತರಿದ್ದರು.