ಪೊಲೀಸರು ಶ್ರದ್ಧೆ, ಪ್ರಜ್ಞೆ, ರಚನಾತ್ಮಕವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು- ನಿವೃತ್ತ ಪೊಲೀಸ್ ಅಧಿಕಾರಿ ಸಿ. ಬಿ. ಬಾಗೇವಾಡಿ

ವಿಜಯಪುರ: ನಮ್ಮನ್ನು ನಾವು ಹೆಚ್ಚು ಶ್ರದ್ದಾಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ, ರಚನಾತ್ಮಕವಾಗಿ ಮತ್ತು ನಿಷ್ಠಾಪೂರಕವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ನಿವೃತ್ತ ಸಿಪಿಐ ಸಿ. ಬಿ. ಬಾಗೇವಾಡಿ ಹೇಳಿದ್ದಾರೆ.  ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ವಿಜಯಪುರ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ದಿನದಂದು ನಮ್ಮ ಸಂಕಲ್ಪ ದೃಢಪಡಿಸುವುದರ ಜೊತೆಗೆ, ಪೊಲೀಸ್ ಪಡೆಗಳ ಧೈರ್ಯ, ಶೌರ್ಯ, ಸ್ಥೈರ್ಯ ಮತ್ತು ಸಮರ್ಪಿತ ಮನೋಭಾವವನ್ನು […]

ಅಗಸನಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ: ಅಗಸನಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರೆಯ ಅಂಗವಾಗಿ ಯಶೋದಾ ಟ್ರಸ್ಟ ವತಿಯಿಂದ ಯಶೋಧಾ  ಆಸ್ಪತ್ರೆ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಯಶೋದಾ ಟ್ರಸ್ಟ್ ಚೇರಮನ್ ಮತ್ತು ಮುಖ್ಯ ನೆಫ್ರಾಲಾಜಿಸ್ಟ ಡಾ. ರವೀಂದ್ರ. ಎಂ. ಮದ್ದರಕಿ, ಯುರೊಲಾಜಿಸ್ಟ್ ಡಾ. ಸುನೀಲ ಸಜ್ಜನ, ಹೃದ್ರೋಗ ಮತ್ತು ಮಧುಮೇಹ ತಜ್ಞ, ಡಾ. ಶ್ರೀನಿವಾಸ ಮುಂತಾದ ವೈದ್ಯರು ಹೃದ್ರೋಗ, ಮಧುಮೇಹ, ಕಿಡ್ನಿ ಸಮಸ್ಯೆಗಳ ಕುರಿತು ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು. ಒಟ್ಟು 95 […]

ಜಲನಗರ ಬಸ್ ನಿಲ್ದಾಣಕ್ಕೆ ಅಂದವಾದ ಬಣ್ಣ ಹಚ್ಚಿ ಚಂದ ಮಾಡಿದ ಗಾನಯೋಗಿ ಸಂಘದ ಯುವಕರು

ವಿಜಯಪುರ: ನಗರದಲ್ಲಿ ಹದಗೆಟ್ಟಿದ್ದ ಜಲನಗರ ಬಸ್ ಸ್ಟಾಪ್ ನ್ನು ಗಾನಯೋಗಿ ಸಂಘದ ಯುವಕರು ಅಂದವಾದ ಬಣ್ಣ ಹಚ್ಚಿ ಚಂದವಾಗಿ ಕಾಣುವಂತೆ ಮಾಡಿದ್ದಾರೆ.  ಅಷ್ಟೇ ಅಲ್ಲ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆದರ್ಶ ಗುಣಗಳ ಹಾಗೂ ಅವರ ಸಂಕ್ಷೀಪ್ತ ಮಾಹಿತಿಯ ಕುರಿತು ಫಲಕಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಗಾನಬನ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ ಮಾತನಾಡಿ, ವಿಜಯಪುರ ಮಗರದ ಜನತೆ ಈ ಬಸ್ ನಿಲ್ದಾಣವನ್ನು ಶುಚಿಯಾಗಿಟ್ಟು ಪರಿಸರವನ್ನು ಸುಂದರವಾಗಿಡಬೇಕು ಎಂದು ಮನವಿ […]

ವಿಧಾನಸಭೆ ಚುನಾವಣೆ: ಚುನಾವಣಾಧಿಕಾರಿಗಳಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

ವಿಜಯಪುರ: ವಿಧಾನಸಭೆ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗವು ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ತಪ್ಪದೇ ಪಾಲಿಸುವಂತೆ ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿಜಯಪುರ ನಗರ ವಿಧಾನಸಭೆ ಮತಕ್ಷೇತ್ರದ ಚುನಾವಣಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ  ಸೂಚನೆ ನೀಡಿದರು. ವಿಜಯಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ವಿಧಾನಸಭೆ ಚುನಾವಣೆಗೆ ಏ. 13 ಗುರವಾರ ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏ. […]