ವಿಜಯಪುರ: ಅಗಸನಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರೆಯ ಅಂಗವಾಗಿ ಯಶೋದಾ ಟ್ರಸ್ಟ ವತಿಯಿಂದ ಯಶೋಧಾ ಆಸ್ಪತ್ರೆ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಯಶೋದಾ ಟ್ರಸ್ಟ್ ಚೇರಮನ್ ಮತ್ತು ಮುಖ್ಯ ನೆಫ್ರಾಲಾಜಿಸ್ಟ ಡಾ. ರವೀಂದ್ರ. ಎಂ. ಮದ್ದರಕಿ, ಯುರೊಲಾಜಿಸ್ಟ್ ಡಾ. ಸುನೀಲ ಸಜ್ಜನ, ಹೃದ್ರೋಗ ಮತ್ತು ಮಧುಮೇಹ ತಜ್ಞ, ಡಾ. ಶ್ರೀನಿವಾಸ ಮುಂತಾದ ವೈದ್ಯರು ಹೃದ್ರೋಗ, ಮಧುಮೇಹ, ಕಿಡ್ನಿ ಸಮಸ್ಯೆಗಳ ಕುರಿತು ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಒಟ್ಟು 95 ಆರೋಗ್ಯ ತಪಾಸಣೆ ನಡೆಸಲಾಯಿತು. ಇವರಲ್ಲಿ 38 ಜನ ಮದುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ, 15 ಜನ ಕಿಡ್ನಿ, ಮೂರು ಜನ ನರರೋಗ ಸಮಸ್ಯೆ ಮತ್ತು ಹೃದ್ರೋಗ ಸಮಸ್ಯೆಗಳನ್ನು ಪತ್ತೆ ಮಾಡಲಾಯಿತು ಎಂದು ಯಶೋದಾ ಟ್ರಸ್ಟ್ ನ ಪದಾಧಿಕಾರಿ ರವಿ ಪವಾರ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.