ಒಳಮೀಸಲಾತಿಗೆ ವಿರೋಧ- ತಿಕೋಟಾ ತಾಲೂಕು ಬಂಜಾರ ಸಮುದಾಯದಿಂದ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಕೆ

ವಿಜಯಪುರ: ಒಳಮೀಸಲಾತಿಯನ್ನು ವಿರೋಧಿಸಿ ತಾಲೂಕು ಬಂಜಾರಾ ಸಮುದಾಯದ ಮುಖಂಡರು ತಿಕೋಟಾದಲ್ಲಿ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಅನುಷ್ಠಾನಗೊಳಿಸಲಾಗಿದ್ದು, ಅದನ್ನು ಹಿಂಪಡೆಯಬೇಕು.  2012ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಂದಿನ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಸರಕಾರಕ್ಕೆ ಸಲ್ಲಿಸಿದ್ದಾರೆ.  ಇದು ಅವೈಜ್ಞಾನಿಕ ಅಷ್ಟೇ ಅಲ್ಲ, ಕಾನೂನುಬಾಹಿರವೂ ಆಗಿದೆ.  ಅಲ್ಲದೇ, ಇದನ್ನು ವಿರೋಧಿಸಿ ಈಗಾಗಲೇ ಹಲವಾರು ಬಾರಿ ಬಂಜಾರ, ಭೋವಿ, ವಡ್ಡರ, ಕೊರಚ, ಕರೊವ ಸಮುದಾಯದವರು ರಾಜ್ಯಾದ್ಯಂತ ಹೋರಾಟವನ್ನು ಮಾಡಿದ್ದಾರೆ.  2020ರಲ್ಲಿ ಸುಮಾರು 17 ಲಕ್ಷ ಜನ ಪತ್ರ ಚಳವಳಿ ಮಾಡಿ ಈ ವರದಿಗೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.  ಕಳೆದ ಜನೇವರಿಯಲ್ಲಿ ಬೆಂಗಳೂರಿನ ಫ್ರೀಂಡ ಪಾರ್ಕಿನಲ್ಲಿ ಮತ್ತು ರಾಜ್ಯಾದ್ಯಂತ ಸುಮಾುರ 10 ಲಕ್ಷಕ್ಕೂ ಹೆಚ್ಚು ಜನ ಸೇರಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಬೇಕು.  ಯಾವುದೇ ಕಾರಣಕ್ಕೂ ಒಳಮೀಸಲಾತಿ ಜಾರಿ ಮಾಡಬಾರದು ಎಂದು ಹೋರಾಟ ನಡೆಸಿದಾಗ ಅಂದು ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು.

 

ಆದರೆ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾವು ಏಕಾಏಕಿಯಾಗಿ ಒಳಮೀಸಲಾತಿಯನ್ನು ಅನುಷ್ಠಾನ ಮಾಡಿರುವುದರಿಂದ ರಾಜ್ಯದ ಬಂಜಾರಾ, ಭೋವಿ, ವಡ್ಡರ, ಕೊರಚ, ಕೊರವ ಸಮುದಾಯದ ಜನರಿಗೆ ದಿಗ್ಭ್ರಮೆ ಉಂಟಾಗಿದ್ದು, ಆತಂಕ ಎದುರಿಸುತ್ತಿದ್ದಾರೆ.  2012ರಿಂದಲೇ ವಿರೋಧಿಸುತ್ತ ಬಂದಿದ್ದರೂ ಸರಕಾರ ಏಕಾಏಕಿಯಾಗಿ ಈ ರೀತಿ ನಿರ್ಣಯ ಕೈಗೊಂಡಿರುವುದು ಖಂಡನೀಯವಾಗಿದೆ.

ಒಳಮೀಸಲಾತಿ ವಿರೋಧಿಸಿ ಬಂಜಾರಾ ಸಮುದಾಯದ ಮುಖಂಡರು ತಿಕೋಟಾದಲ್ಲಿ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು

ಅಷ್ಟೇ ಅಲ್ಲ, ಸಚಿವ ಜೆ. ಸಿ. ಮಾಧುಸ್ವಾಮಿ ಸಂಚಿವ ಸಂಪುಟ ಉಪಸಮಿತಿಯ ವರದಿಯಲ್ಲಿ ಪರಿಶಿಷ್ಠ ಜಾತಿ ಪಟ್ಟಿಯಲ್ಲಿರುವ ಸಹೋದರ ಸಮುದಾಯಗಳ ಕುರಿತು ವಸ್ತುನಿಷ್ಠ ಅಧ್ಯಯನ ಇಲ್ಲದೇ ಅನಗತ್ಯವಾಗಿ ಸ್ಪೃಶ್ಯರು, ಅಸ್ಪೃಶ್ಯರು, ಎಡಗೈ, ಬಲಗೈ, ಎಲ್ಲಾ ಸೌಲಭ್ಯ ಪಡೆದವರು, ಮುಂದುವರೆದವರು, ಅಭಿವೃದ್ಧಿ ಆಗಿರುವವರು ಎಂದು ಆರೋಪಿಸಿರುವುದು ಕೂಡ ಸರಿಯಲ್ಲ.  ಈ ಆರೋಪವನ್ನೂ ಹಿಂಪಡೆಯಬೇಕು.  ಅವಾಸ್ತವಿಕ ಅಂಶಗಳ ಮೂಲಕ ಪರಿಶಿಷ್ಠ ಸಹೋದರ ಸಮುದಾಯಗಳ ನಡುವಿನ ನಡುವಿನ ಐಕ್ಯತೆಯನನು ಛಿತ್ರಗೊಳಿಸುವ ಉಪಸಮಿತಿಯ ವರದಿಯನ್ನು ತಿರಸ್ಕರಿಸಲು ಸರಕಾರವನ್ನು ಒತ್ತಾಯಿಸುತ್ತೇವೆ.

ಸರಕಾರ ನಮ್ಮ ಜೊತೆ ಎಲ್ಲಾ ಮುಖಂಡರನ್ನು ಕರೆದು ಚರ್ಚಿಸಬೇಕಾಗಿತ್ತು.  ಸರಕಾರ ಏಕಾಏಕಿಯಾಗಿ ಅನುಷ್ಠಾನಗೊಳಿಸಲು ಹೊರಟಿರುವುದನ್ನು ಬಂಜಾರಾ, ಭೋವಿ, ವಡ್ಡರ, ಕೊರಚ, ಕೊರವ ಸಮುದಾಯದವರು ಖಂಡಿಸುತ್ತೇವೆ.  ಮೇಲಾಗಿ ಸರಕಾರ ತರಾತುರಿ ಮಾಡದೇ ನಮ್ಮ ಸಮಾಜದ ಮುಖಂಡರ ಜೊತೆಗೆ ಚರ್ಚಿಸಿ ಈ ವರದಿ ತಡೆಹಿಡಯಬೇಕು ಮತ್ತು ಪುನಃ ಪರಿಶೀಲನೆ ಮಾಡಿ ಶಿಪಾರಸ್ಸು ಹಿಂಪಡೆಯುವಂತೆ ಬಂಜಾರಾ ಸಮುದಾಯದ ಮನವಿ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ತಿಕೋಟಾ ತಹಸೀಲ್ದಾರ ರೇಣುಕಮ್ಮ ಎಸ್. ಅವರಿಗೆ ಬಂಜಾರಾ ಸಮುದಾಯದ ಮುಖಂಡರಾದ ಅರ್ಜುನ ಹೀರು ರಾಠೋಡ, ಅನಸೂಬಾಯಿ ಗೋವಿಂದ ರಾಠೋಡ, ಅಶೋಕ ನಾಯಕ, ಅನುಭಾಯಿ ಬಾಳು ರಾಠೋಡ, ಭೀಮು ಚವ್ಹಾಣ, ಪ್ರಕಾಶ ಗಂಗಾರಾಮ ರಾಠೋಡ, ಮಿಟ್ಟು ಬಾಳು ಚವ್ಹಾಣ, ಗೋವಿಂದ ರಾಠೋಡ, ಪಾಂಡು ಸೀತಾರಾಮ ಜಾಧವ, ಸಂಜು ಶಂಕರ ಪವಾರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌