ಒಳಮೀಸಲಾತಿ ರದ್ದು ಪಡಿಸಲು ಆಗ್ರಹಿಸಿ ಬಂಜಾರಾ ಸಮುದಾಯದಿಂದ ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ

ವಿಜಯಪುರ: ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದ್ದು, ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ(ಎ.ಐ.ಬಿ.ಎಸ್‌.ಎಸ್‌.) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾತುರಿಯಲ್ಲಿ , ಸಚಿವರಾದ ಗೋವಿಂದ ಕಾರಜೋಳ, ಅಂಗಾರಾ, ಪ್ರಭು ಚವ್ಹಾಣ, ಡಿ. ಸುಧಾಕರ ಅವರನ್ನೊಳಗೊಂಡ ಐದು ಜನರ ಉಪಸಮಿತಿ ರಸಿಚಿ ಚುನಾವಣೆ ಸಂರ್ಭದಲ್ಲಿ ಪರಿಶಿಷ್ಠ ಜಾತಿಯಲ್ಲಿರುವ 101 ಸಮುದಾಯಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ.  ಈ ಮೂಲಕ ಬಿಜೆಪಿ ಮತ್ತು ರಾಜ್ಯ ಸರಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ.  ಈ ಕುರಿತು ಪ್ರಕರಣ ನ್ಯಾಯಲಯದಲ್ಲಿದ್ದರೂ ಒಳಮೀಸಲಾತಿ ಘೋಷಣೆ ಮಾಡಿದ್ದು ಕಾನೂನು ಉಲ್ಲಂಘನೆ ಮಾಡಿದಂತಾಗಿದೆ.  ಇದನ್ನು ವಿರೋಧಿಸಿ ನ್ಯಾಯಲಯದ ಮೊರೆ ಹೋಗಲಾಗುವುದು.  ಸರಕಾರ ಕೂಡಲೇ ಈ ಒಳಮಿಸಲಾತಿಯನ್ನು ಹಿಂಪಡೆಯದಿದ್ದರೆ ಬಂಜಾರ ಸಮುದಾಯ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಒಳಮೀಸಲಾತಿ ವಿರೋಧಿಸಿ ಬಂಜಾರಾ ಸಮುದಾಯದವರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು

ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ ಮಾತನಾಡಿ, ಬಂಜಾರಾ ಮತ್ತು ಇತರ ಸಮಾಜಗಳಿಗೆ ಆಗಿರುವ ಅನ್ಯಾಯವನ್ನು ಸರಕಾರ ಕೂಡಲೇ ಸರಿಪಡಿಸದಿದ್ದರೆ ಸರಕಾರದ ವಿರುದ್ಧ ಜನರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಶಂಕರ ಚವ್ಹಾಣ, ಬಿ. ಬಿ. ಲಮಾಣಿ, ಬಲರಾಮ ನಾಯಕ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಲಿಂಗಸೂರಿನ ಸಿದ್ದಲಿಂಗಸ್ವಾಮೀಜಿ, ಜಗನು ಮಹಾರಾಜ, ಧನಸಿಂಗ್ ಮಹಾರಾಜ, ಗೋಪಾಲ ಮಹಾರಾಜ, ಪ್ರಕಾಶ ಮಹಾರಾಜ, ಸಂಜು ಮಹಾರಾಜ, ರಾಜಪಾಲ ಚವ್ಹಾಣ, ರಾಜು ಜಾಧವ, ಶೇಖರ ನಾಯಕ, ರಾಮ ಹೊಸಪೇಟೆ, ಚಂದ್ರು ರಾಠೋಡ, ಸುರೇಶ ವಿಜಯಪುರ, ಮಲ್ಲಿಕಾರ್ಜುನ ನಾಯಕ, ಡಿ. ಎನ್. ಚವ್ಹಾಣ, ರಾಜು ಅಣದು ಚವ್ಹಾಣ, ವಾಲು ಚವ್ಹಾಣ, ಸಂಜು ಚವ್ಹಾಣ, ಥಾವರು ಜಾಧವಸ ರಾಜು ಜಾಧವ ಮುಂತದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌