ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ , 1 ವಿಶೇಷ ಚೇತನ ಮತದಾರರ ಬೂತ ಸ್ಥಾಪನೆ- ಡಾ. ದಾನಮ್ಮನವರ

ವಿಜಯಪುರ: ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 5‌ ಸಖಿ ಹಾಗೂ 1 ವಿಶೇಷ ಚೇತನ ಮತದಾರರ ಬೂತ್‍ಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ.‌ ದಾನಮ್ಮನವರ ಮಾಹಿತಿ ನೀಡಿದ್ದಾರೆ.

ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.

ವೆಬ್‍ಕಾಸ್ಟಿಂಗ್‍ಗಾಗಿ ವಿಧಾನಸಭೆ ಕ್ಷೇತ್ರವಾರು 713 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇನ್ನುಳಿದಂತೆ 319 ಮತಗಟ್ಟೆಗಳನ್ನು ಗುರುತಿಸಲಾಗುವುದು. ಈ ಮತಗಟ್ಟೆಗಳಲ್ಲಿ 334 ಕ್ರಿಟಿಕಲ್ ಮತ್ತು ವಲ್ನರೇಬಲ್ ಮತಗಟ್ಟೆಗಳಾಗಿವೆ. ಒಟ್ಟಾರೆ 2072 ಮತಗಟ್ಟೆಗಳಲ್ಲಿ 1034 ವೆಬ್‍ಕಾಸ್ಟಿಂಗ್‍ಗಾಗಿ ಗುರುತಿಸಲಾಗಿದೆ. ಜಿಲ್ಲಾದ್ಯಂತ 57 ಮತಗಟ್ಟೆಗಳನ್ನು ನಾನಾ ಅಂಶಗಳನ್ನೊಳಗೊಂಡ ಥೀಮ್ ಆಧಾರಿತ್ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮುಖ್ಯ ಚುನಾವಣಾಧಿಕಾರಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ವಿಜಯಪುರ ಡಿಸಿ ಡಾ. ದಾನಮ್ಮನವರ, ಅಧಿಕಾರಿಗಳು ಪಾಲ್ಗೊಂಡರು

ಎಫ್.ಎಸ್.ಟಿ. ಹಾಗೂ ವಿ.ಎಸ್.ಟಿ. ಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳಿಗೆ ತಲಾ 6 ವಾಹನಗಳಂತೆ ಒಟ್ಟು 48 ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಈ ವಾಹನಗಳಿಗೆ ಜಿಪಿಎಸ್‍ ಗಳನ್ನು ಅಳವಡಿಸಲಾಗಿದೆ. ಜಿಲ್ಲಾದ್ಯಂತ 27 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ನಿಗಾ ವಹಿಸಲಾಗಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾದಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಳಾಗಿ ನಿಯೋಜನೆ ಮಾಡಲಾಗಿದೆ. 8 ವಿಧಾನಸಭೆ ಮತಕ್ಷೇತ್ರವಾರು ಚುನಾವಣಾಧಿಕಾರಿಗಳ ಕಾರ್ಯಾಲಯಗಳನ್ನು ಸಿದ್ಧಪಡಿಸಿ, ಅಗತ್ಯ ಸಾಮಗ್ರಿ ಹಂಚಿಕೆ ಮಾಡಲಾಗಿದೆ. ಕಚೇರಿಗಳಲ್ಲಿ ನಾಮಪತ್ರ ನಮೂನೆ ವಿತರಣೆ ಕುರಿತು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ಮತಗಟ್ಟೆ ಸಾಮಗ್ರಿ, ಲೇಖನ ಸಾಮಗ್ರಿ, ವಿಡಿಯೋಗ್ರಾಫಿ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಊಟ-ಉಪಹಾರ, ಚುನಾವಣಾ ಐಡಿ ಸೇರಿದಂತೆ ಇನ್ನಿತರ ಮುದ್ರಣ ಕಾರ್ಯ ಕುರಿತು ಟಂಡರ್ ಪ್ರಕ್ರಿಯೆಯಲ್ಲಿದ್ದು, ಶೀಘ್ರವೇ ಅಂತಿಮಗೊಳಿಸಲಾಗುವುದು. 8 ವಿಧಾನಸಭಾ ಕ್ಷೇತ್ರವಾರು ಒಟ್ಟು 85,066 ಎಪಿಕ್ ಕಾರ್ಡಗಳ ಪಿಡಿಎಫ್‍ಗಳನ್ನು ಮುದ್ರಣಕ್ಕಾಗಿ ನೀಡಲಾಗಿದೆ. 84867 ಎಪಿಕ್ ಮುದ್ರಣವಾಗಿವೆ, 32475 ಆನ್‍ಲೈನ್ ಮೂಲಕ ಬುಕ್ ಮಾಡಲಾಗಿದೆ. 52591 ಬುಕ್ ಮಾಡಲು ಬಾಕಿ ಇವೆ. 30-ಬಿಜಾಪುರ ನಗರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ 20,340 ಕಾರ್ಡಗಳು ದಿನಾಂಕ : 08-04-2023 ರಂದು ಸ್ವೀಕೃತವಾಗಿವೆ. ಭದ್ರತಾ ಕೊಠಡಿ, ಮತ ಏಣಿಕೆ ಕೊಠಡಿ ನಿರ್ಮಾಣ ಕಾರ್ಯಕ್ರಮ ಪ್ರಗತಿಯಲಿದ್ದು, ವಿಧಾನಸಭಾ ಕ್ಷೇತ್ರವಾರು ಭದ್ರತಾ ಕೊಠಡಿಗಳನ್ನು ಆಯಾ ತಹಶೀಲ್ದಾರರ ಹಂತದಲ್ಲಿ ತಯಾರಿಸಲಾಗುತ್ತಿದೆ. ಒಟ್ಟಾರೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಯಾವುದೇ ಅಡೆ-ತಡೆ ಇಲ್ಲದೇ ಮುಕ್ತವಾಗಿ ಮತದಾನ ಮಾಡುವ ವಾತಾವರಣ ಕಲ್ಪಿಸಲು ಪ್ರಯತ್ನಿಸಲಾಗುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿಡಿಯೋ ಕಾನ್ಫರೆನ್ಸ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ್ ಮುರಗಿ, ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಾಗಠಾಣ ಮತಕ್ಷೇತ್ರದ ಚುನಾವಣಾಧಿಕಾರಿ ಸತ್ಯನಾರಾಯಣ ಭಟ್, ನಗರಾಭಿವೃದ್ಧಿ ಕೋಶದ ಎಸ್.ವೈ ಸುರಕೋಡ, ಡಿಟಿಐ ಪ್ರಾಂಶುಪಾಲರು ಹಾಗೂ ಫೆÇೀಸ್ಟಲ್ ಬ್ಯಾಲೇಟ್ ನೋಡಲ್ ಅಧಿಕಾರಿಗಳಾದ ಅಶೋಲ ಕಲಘಟಗಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌