ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಿದೆ- ಎಂ. ಬಿ. ಪಾಟೀಲ

ವಿಜಯಪುರ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ಹಲಗಣಿ, ಶೇಗುಣಸಿ, ಮದಗುಣಕಿ, ಕಂಬಾಗಿ, ನಂದ್ಯಾಳ, ಬೋಳಚಿಕ್ಕಲಕಿ ಮತ್ತು ಸಂಗಾಪುರ ಎಸ್. ಎಚ್ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು. 2013 ರಿಂದ 2018ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ಶಕ್ತಿಮೀರಿ ಸಾಕಷ್ಟು ನೀರಾವರಿ ಕೆಲಸ ಮಾಡಿದ್ದೇನೆ. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, […]

ದೃಢೀಕರಣವಿಲ್ಲದೇ ಯಾವುದೇ ಪ್ರಚಾರ ಸಾಮಗ್ರಿ ಮುದ್ರಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ- ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಎಚ್ಚರಿಕೆ

ವಿಜಯಪುರ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಚಾರ ಸಾಮಗ್ರಿಗಳನ್ನು ದೃಢೀಕರಣವಿಲ್ಲದೇ ಮುದ್ರಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಎಚ್ಚರಿಕೆ ನೀಡಿದ್ದಾರೆ.  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರ ಸಾಮಗ್ರಿಗಳು ಮತ್ತು ಯಾವುದೇ ಕರಪತ್ರಗಳಲ್ಲಿ ಆಕ್ಷೇಪಾರ್ಹ ಅಂಶಗಳು ಇರಬಾರದು.  ಚುನಾವಣೆ ನಿಯಮದಂತೆ ಮುದ್ರಕರು ಪರಿಶೀಲಿಸಿ, ನಿಗದಿ ಪಡಿಸಿದ ನಮೂನೆ-ಎ ಹಾಗೂ ನಮೂನೆ-ಬಿ […]

ಬಿ.ಎಲ್.ಡಿ.ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯರಿಂದ ಇಬ್ಬರು ಮಕ್ಕಳಿಗೆ ಎ ಬಿ ಆರ್ ಕೆ ಯೋಜನೆಯಡಿ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇμÁಲಿಟಿ ಆಸ್ಪತ್ರೆ ವೈದ್ಯರು ಜನ್ಮದಿನಂದಲೇ ಹೃದ್ರೋಗ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ಮಕ್ಕಳಿಗೆ ಆಯುμÁ್ಮನ್ ಭಾರತ- ಆರೋಗ್ಯ ಕರ್ನಾಟಕ ಸ್ಕೀಂ(ಎ ಬಿ ಆರ್ ಕೆ) ನಡಿ ಉಚಿತವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.   ಬಿ.ಎಲ್.ಡಿ.ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡುವ ಮುಂಬೈನ ಜುಪಿಟರ್ ಆಸ್ಪತ್ರೆಯ ಕನ್ಸಲ್ಟೆಂಟ್ ಪಿಡಿಯಾಟ್ರಿಕ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಶ್ರೀನಿವಾಸ್ […]

ಅತ್ಯುತ್ತಮ ಶಿಕ್ಷಣ, ಉತ್ತಮ ಆರೋಗ್ಯಕ್ಕೆ ಆದ್ಯತೆ: ಆಪ್ ಅಭ್ಯರ್ಥಿ ಹಾಸಿಂಪೀರ ವಾಲೀಕಾರ

ವಿಜಯಪುರ: ಸರಕಾರಿ ಕ್ಷೇತ್ರದ ಉದ್ಯೋಗಗಳಲ್ಲಿಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ಆಮ್ ಆದ್ಮಿ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕು ಎಂದು ವಿಜಯಪುರ ನಗರ ವಿಧಾನಸಭೆ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹಾಸಿಂಪೀರ ವಾಲಿಕಾರ ಹೇಳಿದ್ದಾರೆ.  ನಗರದ 28ನೇ ವಾರ್ಡಿನ ರಾಮನಗರದಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಆಮ್ ಆದ್ಮಿ ಪಕ್ಷ ಜನರ ಸೇವೆಗಾಗಿ ಸ್ಥಾಪಿಸಲಾಗಿದ್ದು, ಈ ಪಕ್ಷದಲ್ಲಿ ಜನರ ಹಿತಕ್ಕಾಗಿ ಪ್ರಥಮ ಆದ್ಯತೆ ನೀಡಲಾಗುತ್ತದೆ.  […]

ಗಾನಯೋಗಿ ಸಂಘದ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ

ವಿಜಯಪುರ: ಸಾಮಾಜಿಕ ಕಾಳಜಿಯ ಮೂಲಕ ಗಮನ ಸೆಳೆದಿರುವ ನಗರದ ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್ ಬ್ರಿಜ್ ಕೆಳಗಡೆ ಗೋಡೆಗಳ ಮೇಲೆ ಮತದಾನ ಜಾಗೃತಿಯ ಕುರಿತು ನಾನ್ನುಡಿಗಳನ್ನು ಬರೆದು ಮತದಾರರಲ್ಲಿ ಜಾಗೃತಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ., ನಮ್ಮ ಭವಿಷ್ಯ ನಾವು ಮಾಡುವ ಮತದಾನದ ಮೇಲೆ ನಿಂತಿದೆ.  ಪ್ರತಿಯೊಬ್ಬರು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು. ಮತದಾರರು ಯಾವುದೇ ಆಸೆ, ಆಮೀಷಗಳಿಗೆ […]

ರಾಜ್ಯ ಮಟ್ಟದ ಪಟ್ಟದ ಪೂಜಾರಿಗಳ, ಜಡೆ ತಲೆ ಪೂಜಾರಿಗಳ 4ನೇ ಹಾಲುಮತ ಧರ್ಮ ಸಭೆ- ಶ್ರೀ ಮರಡಿ ಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ

ವಿಜಯಪುರ: ಬಬಲೇಶ್ವರ ತಾಲೂಕಿನ ಕಣಮುಚನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಪಟ್ಟದ ಪೂಜಾರಿಗಳ ಹಾಗೂ ಜಡೆ ತಲೆ ಪೂಜಾರಿಗಳ 4ನೇ ಹಾಲುಮತ ಧರ್ಮ ಸಭೆಯನ್ನು ನಡೆಯಿತು.  ಗ್ರಾಮದ ಭಕ್ತರು ಹನುಮಾನ ದೇವಸ್ಥಾನದಿಂದ ದೇವರ ಸತ್ತಿಗೆ ಹಾಗೂ ಎಲ್ಲ ಪೂಜಾರಿಗಳನ್ನು ಡೊಳ್ಳು ಕುಣಿತದೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಶ್ರೀ ಮರಡಿ ಸಿದ್ದೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡರು.  ಬಳಿಕ ಶ್ರೀ ಮರಡಿ ಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಗ್ರಾಮದ ಹೆಣ್ಣು ಮಕ್ಕಳು ಎಲ್ಲ ಪೂಜಾರಿಗಳಿಗೆ ದಾರಿಯುದ್ದಕ್ಕೂ ಪಾದ ಪೂಜೆ ಮಾಡಿದರು.  […]