ಗಾನಯೋಗಿ ಸಂಘದ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ

ವಿಜಯಪುರ: ಸಾಮಾಜಿಕ ಕಾಳಜಿಯ ಮೂಲಕ ಗಮನ ಸೆಳೆದಿರುವ ನಗರದ ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್ ಬ್ರಿಜ್ ಕೆಳಗಡೆ ಗೋಡೆಗಳ ಮೇಲೆ ಮತದಾನ ಜಾಗೃತಿಯ ಕುರಿತು ನಾನ್ನುಡಿಗಳನ್ನು ಬರೆದು ಮತದಾರರಲ್ಲಿ ಜಾಗೃತಿ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ., ನಮ್ಮ ಭವಿಷ್ಯ ನಾವು ಮಾಡುವ ಮತದಾನದ ಮೇಲೆ ನಿಂತಿದೆ.  ಪ್ರತಿಯೊಬ್ಬರು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.

ಮತದಾರರು ಯಾವುದೇ ಆಸೆ, ಆಮೀಷಗಳಿಗೆ ಒಳಗಾಗಬಾರದು.  ಮತವನ್ನು ಮಾರಿಕೊಂಡರೆ ಸ್ವಾಭಿಮಾನ, ಬೆಳವಣಿಗೆ, ಏಳಿಗೆಯ ಹಕ್ಕು ಕಳೆದುಕೊಂಡಂತೆ.  ಮತ ಎಂಬುದು ಮನೆಗೆ ಹೆಣ್ಣು ಮಗುವಿದ್ದಂತೆ.  ಅದನ್ನು ಮಾರಿಕೊಂಡರೆ ಮಗಳಿಗೆ ದ್ರೋಹ ಬಗೆದಂತೆ ಎಂದು ಅವರು ಮತದಾನರರಲ್ಲಿ ಜಾಗೃತಿ ಮೂಡಿಸಿದರು.

ಗಾನಯೋಗಿ ಸಂಘದ ಯುವಕರು ಬಿಡಿಸಿರುವ ಮತದಾನ ಜಾಗೃತಿ ಚಿತ್ರ

ಈ ಸಂದರ್ಭದಲ್ಲಿ ಮತದಾನದ ಕುರಿತು ನಾಣ್ಣುಡಿಗಳಾದ ಮತದಾನ ನಿಮ್ಮ ಹಕ್ಕು, ಚಲಾಯಿಸ ಬನ್ನಿ, ಪ್ರಜಾಪ್ರಭುತ್ವದ ಅಡಿಗಲ್ಲಿಗೆ ನಮ್ಮ ಮತ, ವ್ಯಯ ಮಾಡದೆ ಹಾಕಿ ಮತ, ನೋಟಗಾಗಿ ವೋಟು ಅಲ್ಲ, ಪ್ರಜಾಪ್ರಭುತ್ವದ ಉಳಿವಿಗಾಗಿ ವೋಟು, ಮತದಾನ ಎನ್ನುವುದು ಮನೆಯ ಮಗಳಿದ್ದಂತೆ, ಅದನ್ನು ಹಣಕ್ಕಾಗಿ ಇನ್ಯಾವುದೋ ಆಮಿಷಕ್ಕಾಗಿ ಮಾರಿಕೊಳ್ಳಬೇಡಿ ಬರೆಯಲಾಯಿತು.

ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಬಾಹುಬಲಿ ಶಿವಣ್ಣವರ. ರಾಜಕುಮಾಕ, ಹೊಸಟ್ಟಿ, ವೀರೇಶ ಸೊನ್ನಲಗಿ, ಸಚಿನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ಬಾಬು ಭಿಸೆ, ಸಚೀನ ಚವ್ಹಾಣ, ರಾಹುಲ ಎಂ., ರೇವಣಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌