ಅಂಬೇಡ್ಕರ ಎಲ್ಲ ಸಮುದಾಯಗಳ ಅಮೂಲ್ಯ ಆಸ್ತಿ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರು ಎಲ್ಲ ಸಮುದಾಯಗಳ ಅಮೂಲ್ಯ ಆಸ್ತಿ.  ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಅವತರಿಸಿದ ಮಹಾನ್ ಸಂತ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಬಿ. ಆರ್. ಅಂಬೇಡ್ಕರ ಅವರ ಚಿಂತನೆಯ ಫಲವಾಗಿ ರೂಪುಗೊಂಡ ಸಂವಿಧಾನದ ಫಲವಾಗಿ ಇಂದು ದಲಿತರ ಬದುಕಿನಲ್ಲಿ ಬೆಳಕು ಮೂಡುವಂತಾಗಿದೆ.  ಭಾರತಕ್ಕೆ ಶ್ರೇಷ್ಠ ಸಂವಿಧಾನ ದೊರಕಿದಂತಾಗಿದೆ ಎಂದು ಅವರು ಹೇಳಿದರು.

ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ ಅವರ ಚಿಂತನೆಗಳ ಬಗ್ಗೆ ಬಿಜೆಪಿ ನೈಜ ಕಾಳಜಿ ಹೊಂದಿದೆ.  ಅಂಬೇಡ್ಕರ ಅವರ ಪಂಚಕ್ಷೇತ್ರಗಳ ಪ್ರಗತಿಗೆ ಬಿಜೆಪಿ ಶ್ರಮಿಸಿದ್ದು, ಸಂವಿಧಾನ ಶಿಲ್ಪಿಯ ಆಶಯಗಳನ್ನು ಸಾಕಾರಗೊಳಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಜಿ. ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ, ಪಾಲಿಕೆ ಸದಸ್ಯ ಹಾಗು ನಗರ ಘಟಕದ ಅಧ್ಯಕ್ಷ ಮಳುಗೌಡ ಪಾಟೀಲ, ಭೀಮಾಶಂಶಕರ ಹದನೂರ, ಕೃಷ್ಣಾ ಗುನ್ನಾಳಕರ, ಡಾ.ಸುರೇಶ ಬಿರಾದಾರ, ಮಲ್ಲಮ್ಮ ಜೋಗೂರ, ಭರತ ಕೋಳಿ, ಪಾಪುಸಿಂಗ್ ರಜಪೂತ, ವಿಜಯ ಕುಡಿಗನೂರ, ಮಹೇಶ ಒಡೆಯರ, ಛಾಯಾ ಮಸಿಯನವರ, ವಿಜಯ ಜೋಶಿ, ವಿಕಾಸ ಪದಕಿ, ಚಂದ್ರು ಚೌಧರಿ, ವಿಠ್ಠಲ ನಡುವಿನಕೇರಿ ಶರಣಬಸು ಕುಂಬಾರ, ಅಬ್ದುಲ್ ಸತ್ತಾರ, ಸಚೀನ್ ಬೊಮಳೆ, ರಾಜಶೇಖರ ತಾಳಿಕೋಟಿ, ಸಚಿನ್ ಅಡಕಿ, ಶಂಕರ ಹೂಗಾರ, ಪ್ರಭು ಕಪಾಲಿ, ರಾಜಶೇಖರ ತಾವಸೆ, ಸಂದೀಪ ಪಾಟೀಲ, ವಿನಾಯಕ ದಹಿಂಡೆ, ಸಿದ್ಧು ಮಲ್ಲಿಕಾರ್ಜುನಮಠ, ಸಂಜಯ ಪಾಟೀಲ ಕನಮಡಿ, ಗೀತಾ ಕುಗನೂರ, ಸುಮಂಗಲಾ ಕೋಟಿ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಡಾ. ಬಿ. ಆರ್. ಅಂಬೇಡ್ಕರ ಅವರ ವೃತ್ತಕ್ಕೆ ತೆರಳಿದ ಬಿಜೆಪಿ ನಾಯಕರು ಡಾ. ಅಂಬೇಡ್ಕರ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.  ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಉಪಮೇಯರ ಗೋಪಾಲ ಘಟಕಾಂಬಳೆ ಸೇರಿದಂತೆ ನಾನಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌