ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ 132ನೇ ಜನ್ಮ ದಿನ ಆಚರಿಸಲಾಯಿತು.
ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಅಂಬೇಡಕ್ರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಜಗತ್ತಿನಲ್ಲೇ ಸರ್ವಶ್ರೇಷ್ಠವಾದ ಭಾರತ ಸಂವಿಧಾನವನ್ನು ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಆರ್ಥಿಕ ತಜ್ಞ, ಯೋಜನಾ ನಿಪುಣ, ಕಾನೂನು ತಜ್ಞರಾಗಿದ್ದರು. ಮಾತ್ರವಲ್ಲ, ಸಾಮಾಜಿಕ ಪರಿಕಲ್ಪನೆಯ ತಜ್ಞರಾಗಿದ್ದರು. ಇಂಥ ಸಂವಿಧಾನವನ್ನು ಆರ್ ಎಸ್ ಎಸ್ ನ ಬಿಜೆಪಿ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಇವರು ಸಂವಿಧಾನ ಬದಲಾವಣೆಗೆ ಕೈಹಾಕಿದರೆ ದೇಶದಲ್ಲಿ ರಕ್ತಕ್ರಾಂತಿಯಾಗುತ್ತದೆ. ತಾಕತ್ತಿದ್ದರೆ ಬಿಜೆಪಿಯವರು ಮುಟ್ಟಿ ನೋಡಲಿ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ನ್ಯಾಯವಾದಿ ಕೆ. ಎಫ್. ಅಂಕಲಗಿ, ಮುಖಂಡರಾದ ಡಿ. ಎಚ್. ಕಲಾಲ, ಸಾಹೇಬಗೌಡ ಬಿರಾದಾರ, ಮಹಾದೇವಿ ಗೋಕಾಕ ಮುಂತಾದವರು ಮಾತನಾಡಿ, ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆಯಬೇಕು. ಸಮಾನತೆ ಸಂವಿಧಾನದ ಭಾಗವಾಗಿದೆ. ಅಂಥ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕ ಅವರಿಗೆ ನಾವೆಲ್ಲ ಚಿರಋಣಿಯಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಮಹ್ಮದರಫೀಕ್ ಟಪಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ರಾಕೇಶ್ ಕಲ್ಲೋರ, ಸುರೇಶ ಘೋಣಸಗಿ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ಅಷ್ಪಾಕ್ ಮನಗೂಳಿ, ಸುಬಾಷ ಕಾಲೇಬಾಗ, ವಿದ್ಯಾ ವತಿ ಅಂಕಲಗಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣಾ ಕಾಮಟೆ, ಕಾಂಗ್ರೆಸ್ ಮುಖಂಡರಾದ ಗಂಗೂಬಾಯಿ ಧುಮಾಳೆ, ಸಂತೋಷ ಬಾಲಗಾಂವಿ, ಬಸು ಚಲವಾದಿ, ಅಕ್ಬರ ನದಾಫ, ಆಸ್ಮಾ ಕಾಲೆಬಾಗ, ಜಯಶ್ರೀ ಭಾರತೆ, ಅನ್ನಪೂರ್ಣ ಬೀಳಗಿಕರ, ರುಕ್ಮಿಣಿ ಲಮಾಣಿ, ಲಕ್ಷಿö್ಮ ಕ್ಷೀರಸಾಗರ, ನಿಂಗಪ್ಪ ಸಂಗಾಪೂರ, ಇಲಿಯಾಸ ಸಿದ್ದಿಕಿ, ಶಕೀಲ ಗಡೇದ, ಅಂಬಣ್ಣ ಕಲಮನಿ, ಅಬ್ದುಲರಹಿಂ ಮುಷರೀಫ, ತಾಜುದ್ದೀನ ಖಲೀಫಾ, ಈರಪ್ಪ ಕುಂಬಾರ, ಜಾವೀದ ಶೇಖ, ಆರೀಫ ಪುಂಗೆವಾಲೆ, ಫಿರೋಜ ಶೇಖ, ಅಬೂಬಕರ ಕಂಬಾಗಿ, ನಾಗೇಶ ತಾಳಿಕೋಟಿ ಮಲ್ಲಿಕಾರ್ಜುನ ಪರಸಣ್ಣವರ ಮುಂತಾದವರು ಉಪಸ್ಥಿತರಿದ್ದರು.