ಮುದ್ದೇಬಿಹಾಳ ಪೊಲೀಸರ ಕಾರ್ಯಾಚರಣೆ- ಹೊಲದಲ್ಲಿ ಬೆಳೆಯಲಾಗಿದ್ದ ರೂ. 1.80 ಲಕ್ಷ ಮೌಲ್ಯದ ಹಸಿಗಾಂಜಾ ವಶ, ಆರೋಪಿ ಬಂಧನ

ವಿಜಯಪುರ: ಮುದ್ದೇಬಿಹಾಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೊಲದಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ರೂ. 1.80 ಲಕ್ಷ ಮೌಲ್ಯದ ಹಸಿಗಾಂಜಾ ವಶಪಡಿಸಿಕೊಂಡಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಗ್ರಾಮದ ಬಸವರಾಜ್ ಮಲ್ಲೇಶಪ್ಪ ಬಿರಾದಾರ ಎಂಬುವರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಮಾಹಿತಿ ಪಡೆದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿ ಎಸ್ ಐ ಆರೀಫ್ ಮುಶಾಪುರಿ ತಮ್ಮ ಸಿಬ್ಬಂದಿಯೊಂದಿಗೆ ಧಾಳಿ ನಡೆಸಿ ಹಸಿ 36.820 ಕೆಜಿ ಹಸಿಗಾಂಜಾ ವಶಪಡಿಸಿಕೊಂಡಿದ್ದಾರೆ.  ಅಲ್ಲದೇ, ಆರೋಪಿಯನ್ನು ಬಂಧಿಸಿದ್ದಾರೆ.

ಮಲಗಲದಿನ್ನಿ ಗ್ರಾಮದ ಬಸವರಾಜ ಬಿರಾದಾರ ಎಂಬುವರ ಹೊಲದಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಗಿಡಗಳು

ಈ ಧಾಳಿಯಲ್ಲಿ  ಸಿಬ್ಬಂದಿಯಾದ ಸಿಪಿಐ ಮಲ್ಲಿಕಾರ್ಜುನ್ ತುಳಸಿಗಿರಿ ಪಿಎಸ್ಐ ಆರೀಫ್ ಮುಶಾಪುರಿ ಸಿಬ್ಬಂದಿಯಾದ ಗೋವಿಂದ ಗೆಣ್ಣೂರ, ವಿರೇಶ ಹಾಲಗಂಗಾಧರಮಠ, ಮಲ್ಲನಗೌಡ ಬೋಳರೆಡ್ಡಿ, ಚಿದಾನಂದ ಸುರುಗಿಹಳ್ಳಿ, ಶ್ರೀಕಾಂತ ಬಿರಾದಾರ, ನರಸಿಂಹ ಚೌದರಿ, ಶಿವರಾಜ ನಾಗರೆಡ್ಡಿ, ಮಂಜುನಾಥ ಬುಳ್ಳ, ಮಾಳಪ್ಪ ನಾಲತವಾಡ, ರವಿ ಲಮಾಣಿ ದಾಳಿಯಲ್ಲಿ ಪಾಲ್ಗೋಡಿದ್ದರು.

ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

ಹೊಸ ಪೋಸ್ಟ್‌