ಬಬಲೇಶ್ವರ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ. ಬಿ. ಪಾಟೀಲ ನಾಮಪತ್ರ ಸಲ್ಲಿಕೆ- ರೂ. 50 ಸಾವಿರ ಹಣ ನೀಡಿ ಶುಭ ಕೋರಿದ ವೃದ್ಧೆ ಪುತಳಿಬಾಯಿ ರಾಮು ರಾಠೋಡ

ವಿಜಯಪುರ:  ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸಿದರು.

ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಅವರು, ನೀರಾವರಿ ಇಲಾಖೆ ಕಛೇರಿಗೆ ತೆರಳಿ ಚುನಾವಣಾಧಿಕಾರಿ ಮಂಜುನಾಥ ಅವರಿಗೆ ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ದಳವಾಯಿ, ಭೂತಾಳಸಿದ್ಧ ಒಡೆಯರ, ಈರಗೊಂಡ ಬಿರಾದಾರ, ಪುತಳಿಬಾಯಿ ರಾಮು ರಾಠೋಡ, ತಮ್ಮಣ್ಣ ಹಂಗರಗಿ, ಸಿದ್ದು‌ ಗೌಡನವರ, ಮುತ್ತಪ್ಪ‌ ಶಿವಣ್ಣವರ, ಸೋಮನಾಥ ಬಾಗಲಕೋಟ
ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಎಂ. ಬಿ. ಪಾಟೀಲ ಅವರು ಪತ್ನಿ ಆಶಾ, ಪುತ್ರ ಬಸನಗೌಡ ಎಂ. ಪಾಟೀಲ, ಸಹೋದರ ಸುನೀಲಗೌಡ ಪಾಟೀಲ ಮತ್ತು ಅವರ ಪತ್ನಿ‌ ರೇಣುಕಾ ಹಾಗೂ‌ ಸಹೋದರಿನ ಕಲ್ಪನಾ ಪಾಟೀಲ ಜೊತೆಗೂಡಿ ಬಬಲೇಶ್ವರ ಪಟ್ಟಣದಲ್ಲಿರುವ ಶ್ರೀ ಗುರುಪಾದೇಶ್ವರ ಮತ್ತು ಶ್ರೀ ಶಾಂತವೀರ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಅಲ್ಲದೇ, ಆಲಗೂರ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು ಆಶೀರ್ವಾದ ಪಡೆದರು. ಅಲ್ಲದೇ, ತಮ್ಮ‌ ತಾಯಿ ಕಮಲಾಬಾಯಿ ಬಿ. ಪಾಟೀಲ ಅವರಿಂದ ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್.ಟಿ. 1ರ ರೈತ ಮಹಿಳೆ ಪುತಳಿಬಾಯಿ ರಾಮು ರಾಠೋಡ ಅವರು ಈ ಮುಂಚೆ ಇಚ್ಛೆಸಿದಂತೆ ಸ್ವಯಂ ಪ್ರೇರಿತರಾಗಿ ಎಂ.ಬಿ.ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಲು ಮತ್ತು ಚುನಾವಣೆ ಖರ್ಚಿಗಾಗಿ ರೂ. 50 ಸಾವಿರ ಹಣದ ಚೆಕ್ ನ್ನು ಎಂ.ಬಿ.ಪಾಟೀಲರಿಗೆ ನೀಡಿ, ಭಾರಿ ಅಂತರದಿಂದ ಗೆಲುವು ಸಾಧಿಸಲಿ ಎಂದು ಆಶೀರ್ವದಿಸಿದರು.

ಎಂ.ಬಿ.ಪಾಟೀಲ ಅವರು 6ನೇ ಬಾರಿಗೆ ಶಾಸಕರಾಗಿ ಆಯ್ಕೆ ಬಯಸಿದ್ದು, ಸರಳವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು ಗಮನ ಸೆಳೆಯಿತು.

ರೈತ ಮಹಿಳೆ ಪುತಳಿಬಾಯಿ ರಾಮು‌ ರಾಠೋಡ ಎಂ. ಬಿ. ಪಾಟೀಲರಿಗೆ ಕೃತಜ್ಞತೆಯಾಗಿ ರೂ. 50 ಸಾವಿರ ಚೆಕ್ ನೀಡಿ ಶುಭ ಹಾರೈಸಿದರು

ಎಂ. ಬಿ. ಪಾಟೀಲ ಅವರ ಮಾಹಿತಿ

ಮಾಜಿ ಸಚಿವ, ಶಿಕ್ಷಣ ಪ್ರೇಮಿ, ಸೋಲರಿಯದ ಸರದಾರ ಮತ್ತು ನಿರಂತರವಾಗಿ 25 ವರ್ಷಗಳ ಕಾಲ ರಾಜ್ಯ ವಿಧಾನಸಭೆಯ ಶಾಸಕರಾಗಿದ್ದ ದಿ.ಬಿ.ಎಂ.ಪಾಟೀಲ ಅವರ ಜೇಷ್ಠ ಪುತ್ರರಾಗಿರುವ ಎಂ.ಬಿ.ಪಾಟೀಲ ಅವರು ವಿಜಯಪುರದಲ್ಲಿ 7 ಅಕ್ಟೋಬರ 1964ರಂದು ಜನಿಸಿದರು.

ವಿಜಯಪುರ ಮತ್ತು ಬೆಂಗಳೂರಿನಲ್ಲಿ ತಮ್ಮ ಶಿಕ್ಷಣ ಪಡೆದ ಅವರು, ಬಿ.ಇ ಸಿವಿಲ್ ಪದವಿಧರರಾಗಿದ್ದಾರೆ. 1991ರಲ್ಲಿ ಬಿ.ಎಂ.ಪಾಟೀಲರ ಅಕಾಲಿಕ ನಿಧನದ ನಂತರ ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿಕೊಂಡರು. ಅಲ್ಲದೇ, ತಂದೆಯವರ ನಿಧನದ ಹಿನ್ನಲೆಯಲ್ಲಿ ತೆರವಾದ ತಿಕೋಟಾ ವಿಧಾನಸಭೆಯ ಬೈ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ 26ನೇ ವಯಸ್ಸಿನಲ್ಲಿ ಶಾಸಕರಾದರು.

ಕಳೆದ 32 ವರ್ಷಗಳಿಂದ ಕಾಂಗ್ರೆಸ್ ಕಟ್ಟಾಳುವಾಗಿ ಪಕ್ಷ ಸಂಘಟನೆ ಜೊತೆಗೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಂ.ಬಿ.ಪಾಟೀಲ ಅವರು ತಿಕೋಟಾ ಮತ್ತು ಬಬಲೇಶ್ವರ ಮತಕ್ಷೇತ್ರಗಳಿಂದ 5 ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಬಿಜಾಪುರ ಲೋಕಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಈಗ 6ನೇ ಸಲ ಶಾಸಕರಾಗಲು ಆಯ್ಕೆ ಬಯಸಿ, ನಾಮಪತ್ರ ಸಲ್ಲಿಸಿದ್ದಾರೆ.

ಎಂ. ಬಿ. ಪಾಟೀಲ ಅವರ ಕೊಡುಗೆಗಳು

ಬರದನಾಡು ಎಂದೇ ಹಣೆಪಟ್ಟಿ ಹೊತ್ತಿದ್ದ ಮತ್ತು ಹಿಂದುಳಿದ ಜಿಲ್ಲೆ ಎಂದು ಅಪಖ್ಯಾತಿ ಪಡೆದ ವಿಜಯಪುರ ಜಿಲ್ಲೆಯನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಮಾಡುವಲ್ಲಿ ಎಂ.ಬಿ.ಪಾಟೀಲರ ಕೊಡುಗೆ ಅಪಾರವಾಗಿದೆ. ಮರಿಚಿಕೆಯಾಗಿದ್ದ ನೀರಾವರಿ ಯೋಜನೆಗಳನ್ನು ಛಲ ಬಿಡದ ತ್ರಿವಿಕ್ರಮನಂತೆ ಹಗಲಿರುಳು ಶ್ರಮಿಸಿ, ನೀರಾವರಿ ಮಾಡಿದ್ದು ಈಗ ಮನೆಮಾತಾಗಿದೆ.

ಹಿಂದುಳಿದ ವಿಜಯಪುರ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ತಮ್ಮ ಸಂಸ್ಥೆಯ ಎಂಜನಿಯರಿಂಗ್ ಕಾಲೇಜಿನಿಂದ ರಾಷ್ಟ್ರಕ್ಕೆ ಮಾದರಿಯಾಗುವ ಕೆರೆ ನೀರು ತುಂಬುವ ಯೋಜನೆ ರೂಪಿಸಿ, ಅನುಷ್ಠಾನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದು ಈಗ ದೇಶಾದ್ಯಂತ ಮಾದರಿಯಾಗಿದೆ.

ನೀರಾವರಿ ಕುರಿತು ಇವರ ಆಸಕ್ತಿಯನ್ನು ಗಮನಿಸಿದ್ದ ಕಾಂಗ್ರೆಸ್ ಹೈಕಮಾಂಡ್ 2013ರಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರನ್ನಾಗಿ ಮಾಡಿ ಇಡೀ ರಾಷ್ಟವೇ ಮೆಚ್ಚುವಂತೆ ನೀರಾವರಿ ಇಲಾಖೆಗೆ ಕಾಯಕಲ್ಪ ಒದಗಿಸಲು ಅವಕಾಶ ಮಾಡಿಕೊಟ್ಟಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ, ಜಲಾಷÀಯಗಳು, ಕಾಲುವೆಗಳ ಆಧುನೀಕರಣ, ಭದ್ರಾ ಮೇಲ್ದಂಡೆ ಯೋಜನೆ, ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ, ಮೇಕೆದಾಟು, ಎತ್ತಿನಹೊಳೆ, ರಾಜ್ಯದ ಅತ್ಯಂತ ಎತ್ತರದ ಪ್ರದೇಶಕ್ಕೆ ನೀರಾವರಿ ಒದಗಿಸುವ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ, ಆಡಳಿತ ಯಂತ್ರದಲ್ಲಿ ವ್ಯಾಪಕ ಸುಧಾರಣೆಗಳು ಸೇರಿದಂತೆ ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ಹೊಸ ಚೈತನ್ಯ ನೀಡಿದ ಎಂ..ಬಿ.ಪಾಟೀಲ ಅವರು ಆಧುನಿಕ ಭಗೀರಥ ಎಂದೇ ಜನಮಾನಸದಲ್ಲಿ ನೆಲೆಸಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಎಂ. ಬಿ. ಪಾಟೀಲ ಅವರು ಗೃಹ ಸಚಿವರಾಗಿ ಅಲ್ಪಾವಧಿಯಲ್ಲಿ ಅಧಿಕಾರದಲ್ಲಿದ್ದರೂ ಪೆÇಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ದಿನದ 24 ಗಂಟೆ, ವಾರದ 7 ದಿನಗಳು, ವರ್ಷದ 365 ದಿನಗಳು ನಿರಂತರ ಕೆಲಸ ಮಾಡುವ ಪೋಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಔರಾದ್ಕರ್ ಸಮಿತಿಯ ವರದಿಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಪೋಲೀಸ್ ಸಿಬ್ಬಂದಿಯ ವೇತನ ಹೆಚ್ಚಳ, ಬಡ್ತಿ ಹಾಗೂ ಇತರ ಬದಲಾವಣೆಗಳನ್ನು ತರುವ ಕುರಿತು ಹಲವಾರು ಶಿಫಾರಸ್ಸುಗಳು ಈ ವರದಿಯಲ್ಲಿವೆ.

ಗೃಹ ಸಚಿವರಾಗಿದ್ದರೂ ಈ ಮುಂಚೆಯಿಂದ ಜಾರಿಯಲ್ಲಿದ್ದ ಝಿರೋ ಟ್ರಾಫಿಕ್ ಸೌಲಭ್ಯ, ಪೋಲೀಸ್ ಗೌರವ ವಂದನೆ ತಮಗೆ ಬೇಡ ಎಂದು ಹಳೆಯ ಸಂಸ್ಕøತಿಯನ್ನು ನಿರಾಕರಿಸಿ ತಾವೊಬ್ಬ ಸಾಮಾನ್ಯ ಜನ ಸೇವಕ ಎಂಬುದನ್ನು ಸಾಬಿತು ಪಡಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಜನರ ಸುರಕ್ಷತೆ ಹಾಗೂ ಮಹಿಳೆಯರ ಭದ್ರತೆಗಾಗಿ ಕ್ರಮ ಕೈಗೊಂಡಿದ್ದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ಜಲಕ್ರಾಂತಿ ಮಾಡುವ ಮೂಲಕ ಜನರ ಬಾಳನ್ನು ಹಸನು ಮಾಡಲು ಶ್ರಮಿಸುತ್ತಿರುವ ಎಂ.ಬಿ.ಪಾಟೀಲರು, ನೀರಾವರಿ ಯೋಜನೆಗಳ ಮೂಲಕ ರೈತರ ಜಲ ಸಮಸ್ಯೆಗೆ ಶಾಸ್ವತ ಪರಿಹಾರ ಒದಗಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕ್ಷೀರಕ್ರಾಂತಿಗಾಗಿ ರೈತರ ನೇತೃತ್ವದಲ್ಲಿ ಸಹಕಾರ ಸಂಘ ರಚಿಸಿ ಹೈನೋದ್ಯಮಕ್ಕೆ ಯೋಜನೆ ರೂಪಿಸಿದ್ದಾರೆ. ಅಲ್ಲದೇ, ರೈತರ ಆದಾಯ ಹೆಚ್ಚಿಸಲು ಹೊಸ ಹೊಸ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆದು ಅನ್ನದಾತರನ್ನು ಕೃಷಿ ಉದ್ಯಮಿಗಳನ್ನಾಗಿ ಮಾಡುವ ಕನಸು ಹೊಂದಿದ್ದಾರೆ. ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಮತ್ತು ರೈತರು ತಮ್ಮ ಉತ್ಪನಗಳಿಗೆ ಹೆಚ್ಚಿನ ಬೆಲೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಇಟ್ಟಂಗಿಹಾಳ ಗ್ರಾಮದ ಬಳಿ ಆಹಾರ ಸಂಸ್ಕರಣೆ ಘಟಕ ಸ್ಥಾಪನೆಗೆ ಮುನ್ನುಡಿ ಬರೆದಿದ್ದು, ಶೀಘ್ರದಲ್ಲಿ ಇದು ಕಾರ್ಯಾರಂಭ ಮಾಡಲಿದೆ. ಇದರ ಜೊತೆಗೆ ಬಂಜಾರ ಉಡುಪುಗಳನ್ನು ವಿಶ್ವಕ್ಕೆ ಪರಿಚಯಿಸಲು ಮತ್ತು ಈ ಮೂಲಕ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲು ಕ್ರೀಯಾ ಯೋಜನೆ ಸಿದ್ದಪಡಿಸಿದ್ದಾರೆ. ಇದರಿಂದ ಇಲ್ಲಿನ ಯುವಕರ ಮತ್ತು ಮಹಿಳೆಯರು ಆರ್ಥಿಕವಾಗಿ ಸದೃಢÀರಾಗಲು ಅನುಕೂಲವಾಗಲಿದೆ. ಅಲ್ಲದೇ, ಮತಕ್ಷೇತ್ರದಲ್ಲಿ ವಿದ್ಯುತ್ ಕೊರತೆ ನೀಗಿಸಲು 10 ಹೊಸ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಇದರಿಂದ ಗುಣಮಟ್ಟದ ವಿದ್ಯುತ್ ದೊರೆತು ಕೃಷಿ ಮತ್ತು ಕೃಷಿಯ ಹೊರತಾದ ಚಟುವಟಿಕೆಗಳಿಗೆ ಎಲ್ಲರಿಗೂ ಅನುಕೂಲವಾಗಲಿದೆ.

ಬಿ.ಎಲ್.ಡಿ.ಇ ಸಂಸ್ಥೆಯಿಂದಲೂ ಜನಸೇವೆ

ಇದೇ ವೇಳೆ, ಬಿ.ಎಲ್.ಡಿ.ಇ. ಸಂಸ್ಥೆ ಅಧ್ಯಕ್ಷರಾಗಿ ಎಂ.ಬಿ.ಪಾಟೀಲರು ಗುಣಮಟ್ಟದ ಶಿಕ್ಷಣದ ಜೊತೆಗೆ ಆಧುನಿಕ ಸ್ಪರ್ಶವನ್ನು ನೀಡಿದ್ದಾರೆ. ಈ ಸಂಸ್ಥೆ ಇಂದು ಅವಿಭಜಿತ ವಿಜಯಪುರ- ಬಾಗಲಕೋಟ ಜಿಲ್ಲೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಶಾಲೆ-ಕಾಲೇಜುಗಳನ್ನು ಒಳಗೊಂಡಿದ್ದು, ಉತ್ತರೋತ್ತರವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ನಾನಾ ಶಿಕ್ಷಣ ಸಂಸ್ಥೆಗಳನ್ನು ಇದು ಒಳಗೊಂಡಿದೆ. ವಿಜಯಪುರ ನಗರದಲ್ಲಿ ಶ್ರೀ.ಬಿ.ಎಂ.ಪಾಟೀಲ ಅವರ ಹೆಸರಿನಲ್ಲಿ 1200 ಹಾಸಿಗೆಯ ಚಾರಿಟೇಬಲ್ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ಸರಕಾರ ನಿಗದಿ ಪಡಿಸಿದ್ದಕ್ಕಿಂತ ಅತೀ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ರಕ್ಷಿಸುವ ಮೂಲಕ ಬಿ.ಎಲ್.ಡಿ.ಇ ಆಸ್ಪತ್ರೆ ಇಡೀ ದೇಶದಲ್ಲಿ ಗಮನ ಸೆಳೆದಿದೆ.

ವಚನÀಪಿತಾಮಹ ಡಾ.ಫ.ಗು.ಹಳಕಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಸಂಗ್ರಹಿಸಿ, ಮುದ್ರಿಸಿದ 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಮಗ್ರ ವಚನ ಸಾಹಿತ್ಯವನ್ನು 15 ಸಂಪುಟಗಳಲ್ಲಿ 10 ಸಾವಿರ ಪುಟಗಳಲ್ಲಿ ಮುದ್ರಿಸಿ, ನಾಡಿನಾದ್ಯಂತ ಮಠ- ಮಾನ್ಯ, ಸಂಘ- ಸಂಸ್ಥೆಗಳಿಗೆ ವಿತರಿಸಿದ್ದಾರೆ. ಈ ಮೂಲಕ ಬಸವಾದಿ ಶರಣರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಲುಪಲು ಕಾರಣರಾಗಿದ್ದಾರೆ.

ವಿಜಯಪುರವನ್ನು ಆಳಿದ ಆದಿಲ್ ಶಾಹಿ ಬಾದಷಹರ ಕಾಲದಲ್ಲಿ ರಚಿಸಲಾಗಿರುವ ಪರ್ಷಿಯನ್, ಉರ್ದು ಮತ್ತು ದಖನಿ ಭಾμÉಗಳಲ್ಲಿರುವ ಸಾಹಿತ್ಯವನ್ನು ಕನ್ನಡದಲ್ಲಿ ಅನುವಾದ ಮಾಡಿ, ಸಮಗ್ರ 18 ಸಂಪುಟಗಳಲ್ಲಿ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ.

ವಿಜಯಪುರ ಆದಿಲ್ ಶಾಹಿ ಬಾದಷಹರ ಕಾಲದಲ್ಲಿ ನಿರ್ಮಿಸಲಾಗಿರುವ ಐತಿಹಾಸಿಕ ಬಾವಿಗಳು, ಕೆರೆಗಳು, ಸುರಂಗ ಮಾರ್ಗಗಳು ಹೂಳು ತುಂಬಿ ನಿರುಪಯುಕ್ತವಾಗಿರುವುದನ್ನು ಗಮನಿಸಿದ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಎಲ್ಲ ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸಿ ಅವುಗಳ ಪುನಶ್ಚೇತನ ಮಾಡಿದ್ದಾರೆ. ಈಗ ಈ ಕೆರೆ ಮತ್ತು ಬಾವಿಗಳಲ್ಲಿ ನೀರು ತುಂಬಿದ್ದು, ಈ ಸ್ಥಳಗಳು ಈಗ ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ.

ಎಂ.ಬಿ.ಪಾಟೀಲರ ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ ಕಾರ್ಯಗಳನ್ನು ಪರಿಗಣಿಸಿ ನಾನಾ ಸಂಘ- ಸಂಸ್ಥೆಗಳು “ಬಸವಶಾಂತಿ”, “ಆಧುನಿಕ ಭಗೀರಥ”, “ಮೃತ್ಯುಂಜಯ” ಪ್ರಶಸ್ತಿ, “ಬಿ.ಡಿ.ಜತ್ತಿ ಸ್ಮಾರಕ” ಪ್ರಶಸ್ತಿ, “ಪರ್ಯಾವರಣ ರಕ್ಷಕ ಸಮ್ಮಾನ-2019” ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇವರ ಸೇವೆಯನ್ನು ಶ್ಲಾಘಿಸಿ ಕೋಲ್ಹಾಪುರದ ಡಿ.ವೈ.ಪಾಟೀಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

Leave a Reply

ಹೊಸ ಪೋಸ್ಟ್‌