ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರನ್ನಾಗಿ ಎಂ.ಎಸ್.ಲೋಣಿ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕಾತಿ ಆದೇಶ ಪ್ರತಿಯನ್ನು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಎಂ.ಎಸ್.ಲೋಣಿ ಅವರಿಗೆ ನೀಡಿದರು. ನಂತರ ಮಾತನಾಡಿದ ಎಂ.ಬಿ.ಪಾಟೀಲ ಅವರು, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ. ಕಾಂಗ್ರೆಸ್ ಪಕ್ಷದ ಕೊಡುಗೆಗಳು, ಗ್ಯಾರಂಟಿ ಸ್ಕೀಂ ಗಳು ಮತ್ತು ಬಿಜೆಪಿಯ ವೈಫಲ್ಯಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್.ಲೋಣಿ ನನ್ನನ್ನು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಂ.ಬಿ.ಪಾಟೀಲರು ಆದೇಶ ಪ್ರತಿ ನೀಡಿರುವುದು ಅತೀವ ಸಂತೋಷ ಉಂಟು ಮಾಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟನೆಗಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ನನ್ನ ಬೆಂಬಲಿಗರನ್ನು ಪಕ್ಷಕ್ಕೆ ಕರೆ ತರುತ್ತೇನೆ. ಅಲ್ಲದೇ, ಎರಡೂ ಜಿಲ್ಲೆಗಳ ಎಲ್ಲ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ಮುಂಚೆ ಸಿದ್ದರಾಮಯ್ಯ ನೇತೃತ್ವ ಸರಕಾರ ಅನೇಕ ಜನಪರ ಕಾರ್ಯಗಳನ್ನು ಮಾಡಿದೆ. ಆದರೆ, ಇಂದಿನ ಬಿಜೆಪಿ ಸರಕಾರ ಭ್ರಷ್ಟಚಾರದಲ್ಲಿ ಮುಳಿಗಿದೆ. ಆ ಪಕ್ಷದ ಮುಖಂಡರ ಬಿನ್ನಾಭಿಪ್ರಾಯದಿಂದಾಗಿ ವರ್ಚಸ್ಸು ಕಳೆದುಕೊಂಡಿದೆ. ಈ ಬಾರಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಎಸ್.ಲೋಣಿ, ಗೊಲ್ಲಾಳಪ್ಪಗೌಡ ಪಾಟೀಲ, ರಾಕೇಶ ಕಲ್ಲೂರ, ಶರಣು ಯಕ್ಕುಂಡಿ, ನಿಂಗಪ್ಪ ಕೊಂಡಗೂಳಿ, ಸಂತೋಷ ಶ್ಯಾಪೇಟಿ, ವಿಠ್ಠಲ ಕತ್ನಳ್ಳಿ, ನಿಂಗನಗೌಡ ಪಾಟೀಲ, ನರಸಿಂಗಸಾ ತಿವಾರಿ ಮುಂತಾದವರು ಉಪಸ್ಥಿತರಿದ್ದರು.