ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಚುನಾವಣೆ ಪ್ರಚಾರಕ್ಕೆ ಚಾಲನೆ

ವಿಜಯಪುರ: ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಎಚ್.ಟಿ ಅವರು ನಗರದಲ್ಲಿರುವ ಹುತಾತ್ಮಹ ವೃತ್ತಕ್ಕೆ ತೆರಳಿ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮ ಸ್ಥಂಭಕ್ಕೆ ಮಾಲಾರ್ಪಣೆ ಮಾಡಿ ತಮ್ಮ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ಬಡತನ ನಿರುದ್ಯೋಗ, ಜಾತಿಪದ್ದತಿ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳಿಂದ ಮುಕ್ತವಾದ ಸ್ವಾತಂತ್ರ್ಯ ಬಯಸಿದ್ದರು.  ಆದರೆ, ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿ ಹಾಗೂ ಎಲ್ಲ ಪ್ರಾದೇಶಿಕ ಪಕ್ಷಗಳು ಈ ಸಮಸ್ಯೆಗಳನ್ನು ಬಗೆಹರಿಸಲಿಲ್ಲ ಎಂದು ಆರೋಪಿಸಿದರು.

ಎಸ್.ಯು.ಸಿ.ಐ ಅಭ್ಯರ್ಥಿ ಎಚ್. ಟಿ. ಮಲ್ಲಿಕಾರ್ಜುನ ವಿಜಯಪುರ ನಗರದಲ್ಲಿ ಮತಯಾಚನೆ ಮಾಡಿದರು

ವಿಜಯಪುರ ನಗರ ಶಾಸಕರು ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಗಾಢ ನಿದ್ರೆ ಮಾಡಿದ್ದರು.  ಈಗ ಚುನಾವಣೆ ಬಂದ ನಂತರ ಅವರಿಗೆ ಎಲ್ಲಾ ರಸ್ತೆ ಕಾಮಗಾರಿಗಳು ನೆನಪಿಗೆ ಬಂದಿವೆ.  ಮು ಸ್ಲಿಮರ ವಿರುದ್ದ ನಿರಂತರ ದ್ವೇಷದ ಮಾತುಗಳನ್ನು ಮಾತನಾಡುತ್ತಾ ಈಗ ಒಮ್ಮೇಲೆ ಮುಸ್ಲಿಮರ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ.  ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಹೈದರಾಬಾದ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ.  ಆದರೆ, ಈ ಯುವಕರಿಗಾಗಿ ಒಂದೂ ಶ್ರಮಾಧಾರಿತ ಕೈಗಾರಿಕೆಗಳನ್ನು ಆರಂಭಿಸಿಲ್ಲ ಎಂದು ಅವರು ಎಚ್. ಟಿ. ಮಲ್ಲಿಕಾರ್ಜುನ ಆರೋಪಿಸಿದರು.

ಎಸ್.ಯು.ಸಿಐ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಸುನೀತಕುಮಾರ ಟೆ. ಎಸ್. ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರಿಗೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ.  ಈ ಹಿಂದೆ ನೆರೆ, ಬರಗಾಲ ಎದುರಾದಾಗ ಇವರಿಗೆ ಕನಾಟಕ ನೆನಪಾಗಲೇ ಇಲ್ಲ ಎಂದು ಆರೋಪಿಸಿದರು.

ಬಳಿಕ ಎಸ್.ಯು.ಸಿ.ಐ ಅಭ್ಯರ್ಥಿ, ಮುಖಂಡರು ಹಾಗೂ ಕಾರ್ಯಕರ್ತರು ಹುತಾತ್ಮ ವೃತ್ತದ ಸುತ್ತಮುತ್ತಲಿನ ಅಂಗಡಿಗಳಿಗೆ ತೆರಳಿ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯ ಸಿದ್ದಲಿಂಗ ಬಾಗೇವಾಡಿ, ಎಚ್. ಟಿ. ಭರತಕುಮಾರ, ಪಕ್ಷದ ಕಾರ್ಯಕರ್ತರಾದ ಶಿವರಂಜಿನಿ, ದೀಪಾ, ಶಿವಬಾಳಮ್ಮ, ಶರಣು ಗಡ್ಡಿ, ಮಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌